ಹೆಜಮಾಡಿ ದುಬಾರಿ ಟೋಲ್ ; ಮಾರ್ಚ್15 ರಿಂದ ಬಸ್ ಸಂಚಾರ ಸ್ಥಗಿತಗೊಳಿಸಲು ಮುಂದಾದ ಖಾಸಗಿ ಬಸ್ ಮಾಲಕರು -Vishwanews24
ಹೆಜಮಾಡಿ ದುಬಾರಿ ಟೋಲ್ ; ಮಾರ್ಚ್15 ರಿಂದ ಬಸ್ ಸಂಚಾರ ಸ್ಥಗಿತಗೊಳಿಸಲು ಮುಂದಾದ ಖಾಸಗಿ ಬಸ್ ಮಾಲಕರು -Vishwanews24
ಉಡುಪಿ : ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ನಂತರ ಟೋಲ್ ಗೇಟ್ ಗಳಲ್ಲಿ ದುಬಾರಿ ಟೋಲ್ ಈಗ ಬಸ್ ಮಾಲಕರಿಗೆ ಸಂಕಷ್ಟ ತಂದೊಡ್ಡಿದೆ. ದಕ್ಷಿಣಕನ್ನಡ ಜಿಲ್ಲೆಯ ತಲಪಾಡಿಯಲ್ಲಿ ಗಲಾಟೆ ನಂತರ ಇದೀಗ ಉಡುಪಿ ಹೆಜಮಾಡಿ ಟೋಲ್ ಗೇಟ್ ನಲ್ಲೂ ಸಮಸ್ಯೆ ಪ್ರಾರಂಭವಾಗಿದ್ದು, ಹೆಜಮಾಡಿ ಟೋಲ್ ಮೂಲಕ ಸಾಗುವ ಬಸ್ಸುಗಳಿಗೂ ದುಬಾರಿ ಶುಲ್ಕವನ್ನು ಕಡ್ಡಾಯ ಮಾಡಿರುವುದನ್ನು ವಿರೋಧಿಸಿ ಮಾರ್ಚ್15 ರಿಂದ ಬಸ್ ಸಂಚಾರ ಸ್ಥಗಿತಗೊಳಿಸಲು ಮಾಲಕರು ನಿರ್ಧರಿಸಿದ್ದಾರೆ.
ದುಬಾರಿ ಶುಲ್ಕದಿಂದ ಬಸ್ ಮಾಲಕರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಈಗಾಗಲೇ ತಿಂಗಳಿಗೆ 15 ಸಾವಿರ ರೂಪಾಯಿ ಆರ್ ಟಿ ಒ ತೆರಿಗೆ ಪಾವತಿಸುತ್ತೇವೆ. ಬದಲಾದ ಸನ್ನಿವೇಶದಲ್ಲಿ ಟ್ರಿಪ್ಪಿನ ಮೇಲೆ 250 ರೂಪಾಯಿ ಹೆಚ್ಚುವರಿ ನೀಡಬೇಕಾಗುತ್ತದೆ. ಹಾಗಾಗಿ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ತಕ್ಷಣವೇ ಮಧ್ಯೆ ಪ್ರವೇಶ ಮಾಡಿ ಸಮಸ್ಯೆಗೆ ಪರಿಹಾರ ನೀಡಬೇಕು.
ಪುತ್ತೂರು : ಗೋಡಂಬಿ ಬೀಜ ಗಂಟಲಲ್ಲಿ ಸಿಲುಕಿ ಬಾಲಕ ಸಾವು -Vishwanews24
ಸ್ವಲ್ಪ ಪ್ರಮಾಣದ ಟೋಲ್ ಪಾವತಿಗೆ ಸಿದ್ಧರಿದ್ದೇವೆ, ಆದರೆ ಹೊಸ ಪದ್ಧತಿಯಂತೆ, ಮಾಸಿಕ 25ಸಾವಿರ ರೂಪಾಯಿಗೂ ಅಧಿಕ ಸುಂಕ ಪಾವತಿಸಲು ನಮ್ಮಿಂದ ಸಾಧ್ಯವಿಲ್ಲ. ಈ ಮಾರ್ಗದಲ್ಲಿ ಸುಮಾರು 40 ಬಸ್ ಗಳು ಸಂಚರಿಸುತ್ತಿದ್ದು, ಕೊರೋನಾ ಬಂದ ಆನಂತರ 32 ಬಸ್ಸುಗಳು ಮಾತ್ರ ರಸ್ತೆಗಿಳಿದಿವೆ. ದುಬಾರಿ ಟೋಲ್ ಕಟ್ಟಿ ಸಂಚಾರ ನಡೆಸುವುದು ಕಷ್ಟಕರವಾಗಿದ್ದು, ಅನಿವಾರ್ಯವಾಗಿ ಬಸ್ ಸಂಚಾರ ಸ್ಥಗಿತಗೊಳಿಸಬೇಕಾಗಿದೆ ಎಂದು ಬಸ್ ಮಾಲಕರು ತಿಳಿಸಿದ್ದಾರೆ.
ಪಶ್ಚಿಮಬಂಗಾಳ ಚುನಾವಣಾ ಪ್ರಚಾರ: ನಟ ಮಿಥುನ್ ಚಕ್ರವರ್ತಿಗೆ “ವೈ ಪ್ಲಸ್” ಭದ್ರತೆ -Vishwanews24
