ಕಾಪು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹೆಜಮಾಡಿ ಇಲ್ಲಿನ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ ಬುಧವಾರ ಜರಗಿತು.
ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ಮಾಡಿ” ಮಾನವನಿಗೆ ಹೃದಯ ಎಷ್ಟು ಮುಖ್ಯವೂ ಗ್ರಾಮಕ್ಕೆ ದೇವಸ್ಥಾನ ಕೂಡ ಅಷ್ಟೇ ಮುಖ್ಯವಾಗಿದೆ ದೇವಸ್ಥಾನದ ಎಲ್ಲಾ ಪೂಜೆ ಪುರಸ್ಕಾರಗಳು ಉತ್ತಮ ರೀತಿಯಲ್ಲಿ ನಡೆಯುತ್ತಿದ್ದರೆ ಆ ಗ್ರಾಮ ಸುಬೀಕ್ಷೆಯಾಗಿದೆ ಎಂದು ಅರ್ಥ ,ನಾವೂ ಪೂಜೆ ಮಾಡುವುದು ಮೂರ್ತಿಯಲ್ಲಿ ಅಂದರೆ ಮೂರ್ತಿಯೊಳಗೆ ದೇವರನ್ನು ಕಾಣಬಹುದಾಗಿದೆ ಎಂದರು ವಿಶೇಷವಾಗಿ ಹೆಜಮಾಡಿಯ ಪುಣ್ಯ ಮಣ್ಣಿನಲ್ಲಿ ರುದ್ರ ದೇವರು ಸಂಪೂರ್ಣವಾಗಿ ಭಕ್ತರನ್ನು ಅನುಗ್ರಹಿಸುವರು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ವಿರೇಂದ್ರ ಹೆಗ್ಗಡೆ ಅನುಗ್ರಹ ಭಾಷಣ ಮಾಡಿ” ಅನು ಅನುವಿನ ಶಕ್ತಿ ಭಗವಂತ ಆತನ ಶಕ್ತಿ ಅಗಣ್ಯವಾಗಿದೆ,ಈ ಭೂಮಿಯಲ್ಲಿ ನಾವು ಒಳ್ಳೆಯ ವಿಚಾರ ನೋಡುವ ಮತ್ತು ಕೇಳುವ ಬದಲು ಅಹಿತಕರ ಘಟನೆ ನೋಡಿ ಮನಸ್ಸಿಗೆ ಘಾಸಿ ಮಾಡಿಕೊಳ್ಳುವಲ್ಲಿ ತಲ್ಲಿನರಾಗಿದ್ದೇವೆ ಎಂದರು.ದೇವಸ್ಥಾನದ ಒಳಗೆ ಪ್ರವೇಶ ಮಾಡುವಾಗ ಮೋಜು ಮಸ್ತಿ ಬಿಟ್ಟು ಗಂಭೀರತೆಯನ್ನು ಅರಿತು ದೇವರ ದರ್ಶನ ಮಾಡಬೇಕೆಂದರು.
ವೇದಿಕೆಯಲ್ಲಿ ಹೆಜಮಾಡಿ ಮಹಾಲಿಂಗೇಶ್ವರ ದೇಗುಲದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಯಂತ ಶೆಟ್ಟಿ ಪೂಣೆ,ಕಾಪುವಿನ ಶಾಸಕ ಲಾಲಾಜಿ ಆರ್ ಮೆಂಡನ್,ಮಾಜಿ ಸಚಿವ ವಿನಯ ಕುಮಾರ್ ಸೊರಕೆ,ಸದಾನಂದ ಶೆಟ್ಟಿ ಪೂಣೆ,ಸದಾಶಿವ ಎಸ್ ಶೆಟ್ಟಿ, ಎಡಪದವು ರಾಧಕೃಷ್ಣ ತಂತ್ರಿ,ದೇವಸ್ಥಾನ ಅರ್ಚಕ ರಾಮಚಂದ್ರ ಭಟ್,ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಹೆಜಾಮಡಿ ಉಪಸ್ಥಿತರಿದ್ದರು.
ನವೀನ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು,ಆಡಳಿತ ಸಮಿತಿ ಅಧ್ಯಕ್ಷ ದಯಾನಂದ ಹೆಜಮಾಡಿ ಸ್ವಾಗತಿಸಿ, ದಮೋಧರ ಶರ್ಮ ಕಾರ್ಯಕ್ರಮ ನಿರೂಪಿಸಿದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…