Featured

ಹೊಸ ವರ್ಷ ಆಚರಣೆ ​: ನಂದಿ ಬೆಟ್ಟದಲ್ಲಿ ಡಿ. 30ರ ಸಂಜೆಯಿಂದ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ – Vishwanews24

ಹೊಸ ವರ್ಷ ಆಚರಣೆ ​: ನಂದಿ ಬೆಟ್ಟದಲ್ಲಿ ಡಿ. 30ರ ಸಂಜೆಯಿಂದ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ – Vishwanews24

ಚಿಕ್ಕಬಳ್ಳಾಪುರ:  ಹೊಸ ವರ್ಷದ ಮೊದಲ ದಿನದಂದು ಜಿಲ್ಲೆಯ ವಿಶ್ವ ವಿಖ್ಯಾತ ನಂದಿಗಿರಿಧಾಮಕ್ಕೆ ಬಂದು ಮೋಜು, ಮಸ್ತಿಯಲ್ಲಿ ತೊಡಗಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮುಳಗಿ ತೇಲುತ್ತಿದ್ದ ಪ್ರವಾಸಿಗರಿಗೆ, ಯುವ ಪ್ರೇಮಿಗಳಿಗೆ ಜಿಲ್ಲಾಡಳಿತ ಬಿಗ್‌ ಶಾಕ್‌ ಕೊಟ್ಟಿದೆ.

ಸಾಮಾನ್ಯವಾಗಿ ಜಿಲ್ಲಾಡಳಿತ ವರ್ಷದ ಕೊನೆಯ ದಿನ ಅಂದರೆ 30 ಅಥವಾ 31ರ ಸಂಜೆ 3 ರಿಂದ ಹೊಸ ವರ್ಷದ ಮೊದಲ ಜನ ಅಂದರೆ ಜನವರಿ 1ರ ಬೆಳಗ್ಗೆ 6 ಗಂಟೆಯವರೆಗೂ ಮಾತ್ರ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸುತ್ತಿದ್ದ ಜಿಲ್ಲಾಡಳಿತ ಇದೀಗ ಕೊರೋನಾ ಮೂರನೇ ಅಲೆಯ ಒಮಿಕ್ರೋನ್‌ಆತಂಕದ ಹಿನ್ನಲೆಯಲ್ಲಿ ಜನವರಿ 1ರಂದು ಕೂಡ ಸಂಪೂರ್ಣ ಗಿರಿಧಾಮವನ್ನು ಬಂದ್‌ಗೊಳಿಸಲು ಜಿಲ್ಲಾಡಳಿತ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.

2022ರ ಜನವರಿ 1 ರ ಹೊಸ ವರ್ಷದ ದಿನಾಚರಣೆಯ ಸಂಬಂಧವಾಗಿ, ಚಿಕ್ಕಬಳ್ಳಾಪುರ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ಸ್ಥಳವಾದ ನಂದಿ ಬೆಟ್ಟಕ್ಕೆ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆ ಹಾಗೂ ಇನ್ನಿತರೆ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಸಾಧ್ಯತೆ ಇರುವುದರಿಂದ ಹಾಗೂ ಕೋವಿಡ್-19 ರೂಪಾಂತರಿ ಓಮಿಕ್ರಾನ್‌ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳು ಇರುವುದರಿಂದ, ಪರಿಸರವನ್ನು ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಡುವ ಹಿತದೃಷ್ಟಿಯಿಂದ ಡಿ.31 ರ ಮಧ್ಯರಾತ್ರಿ ಹಾಗೂ 2022ರ ಜನವರಿ 1 ರಂದು ನಂದಿ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ನಂದಿ ಗಿರಿಧಾಮಕ್ಕೆ ಡಿ. 30ರ ಸಂಜೆ 6 ಗಂಟೆಯಿಂದ 2022ರ ಜನವರಿ 2 ರ ಬೆಳಗ್ಗೆ 6 ಗಂಟೆಯವರೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌.ಲತಾ ಹೊರಡಿಸಿರುವ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

 

Vishwa News 24

Recent Posts

ಮಳೆಯ ಅಬ್ಬರ : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜು.8 (ನಾಳೆ ) ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ -vishwanews24

ಮಳೆಯ ಅಬ್ಬರ : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜು.8 (ನಾಳೆ ) ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಂಗಳೂರು: ಕರಾವಳಿ ಜಿಲ್ಲೆ…

3 hours ago

ಕುಂದಾಪುರ : ತ್ರಾಸಿಯಲ್ಲಿ ರಸ್ತೆ ಅಪಘಾತ: ಮತ್ತೊಬ್ಬ ಸವಾರ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು – vishwanews24

ಕುಂದಾಪುರ : ತ್ರಾಸಿಯಲ್ಲಿ ರಸ್ತೆ ಅಪಘಾತ: ಮತ್ತೊಬ್ಬ ಸವಾರ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು ಕುಂದಾಪುರ: ಎರಡು ದ್ವಿಚಕ್ರ ವಾಹನಗಳ ನಡುವೆ ಸೋಮವಾರ…

9 hours ago

ಕೃಷಿ ಸಾಲ‌ ಮನ್ನಾ ಮಾಡುವ ಬಗ್ಗೆ ಪರಿಶೀಲನೆ ಮಾಡುವೆ : ಸಿಎಂ ಡಿಕೆಶಿ – vishwanews24

ಕೃಷಿ ಸಾಲ‌ ಮನ್ನಾ ಮಾಡುವ ಬಗ್ಗೆ ಪರಿಶೀಲನೆ ಮಾಡುವೆ : ಸಿಎಂ ಡಿಕೆಶಿ ಕಲಬುರಗಿ: ಕೃಷಿ ಸಾಲ ಮನ್ನಾ ಮಾಡುವ…

11 hours ago

ಮಂಗಳೂರು: ಯುವತಿ ನಾಪತ್ತೆ ; ಪೋಲಿಸರಿಂದ ಪತ್ತೆಗೆ ಮನವಿ – vishwanews24

ಮಂಗಳೂರು: ಯುವತಿ ನಾಪತ್ತೆ: ಪೋಲಿಸರಿಂದ ಪತ್ತೆಗೆ ಮನವಿ ಮಂಗಳೂರು: ಉರ್ವ ಅಶೋಕ ನಗರದ ಮೆಡ್ ಕ್ವಿಸ್ಟ್ ಲ್ಯಾಬ್ನಲ್ಲಿ ಲ್ಯಾಬ್ ಟೆಕ್ನಿಷಿಯನ್…

11 hours ago

ಕಟಪಾಡಿಯಿಂದ ಕಳವಾದ ಆಟೋರಿಕ್ಷಾ ಬೆಳ್ತಂಗಡಿಯಲ್ಲಿ ಪತ್ತೆ – vishwanews24

ಕಟಪಾಡಿಯಿಂದ ಕಳವಾದ ಆಟೋರಿಕ್ಷಾ ಬೆಳ್ತಂಗಡಿಯಲ್ಲಿ ಪತ್ತೆ ಬೆಳ್ತಂಗಡಿ : ಕಟಪಾಡಿಯಿಂದ ಕಳವಾದ ಆಟೋರಿಕ್ಷಾವೊಂದು ಸೋಮವಾರ ಬೆಳ್ತಂಗಡಿ ಪಟ್ಟಣದ ಮೂರು ಮಾರ್ಗದಲ್ಲಿ…

12 hours ago

ಮುಂಬೈ : ಭಾರೀ ಮಳೆ – ಸಂಪೂರ್ಣ ಅಸ್ತವ್ಯಸ್ತ ; 43 ರೈಲು ಸಂಚಾರ ರದ್ದು – vishwanews24

ಮುಂಬೈ : ಭಾರೀ ಮಳೆ - ಸಂಪೂರ್ಣ ಅಸ್ತವ್ಯಸ್ತ ; 43 ರೈಲು ಸಂಚಾರ ರದ್ದು ಮುಂಬೈ: ಕಳೆದ ಮೂರು…

12 hours ago