04-04-2022 : ಇಂದಿನ ದಿನ ಭವಿಷ್ಯ -Vishwanews24

Featured, ರಾಜ್ಯ ನ್ಯೂಸ್

04-04-2022 : ಇಂದಿನ ದಿನ ಭವಿಷ್ಯ -Vishwanews24

ಮೇಷ: ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಕೆಲಸದಲ್ಲಿ ಒತ್ತಡ ಜಾಸ್ತಿ, ದೂರ ಪ್ರಯಾಣ, ವಿರೋಧಿಗಳಿಂದ ತೊಂದರೆ.

ವೃಷಭ: ನೂತನ ವ್ಯವಹಾರಗಳಲ್ಲಿ ಆಸಕ್ತಿ, ಹಿತಶತ್ರುಗಳಿಂದ ತೊಂದರೆ, ಸ್ಥಳ ಬದಲಾವಣೆ, ರಾಜ ವಿರೋಧ.

ಮಿಥುನ: ಸ್ತ್ರೀ ಲಾಭ, ಮಕ್ಕಳಿಗೆ ಅನಾರೋಗ್ಯ, ಗುರಿ ಸಾಧಿಸಲು ಶ್ರಮ ಪಡುವಿರಿ, ಅಕಾಲ ಭೋಜನ, ಬಾಕಿ ವಸೂಲಿ.

ಕಟಕ: ಆಪ್ತರನ್ನು ದ್ವೇಷಿಸುವಿರಿ, ನೆಮ್ಮದಿ ಇಲ್ಲದ ಜೀವನ, ಪುಣ್ಯಕ್ಷೇತ್ರ ದರ್ಶನ, ನೀವಾಡುವ ಮಾತಿನಿಂದ ಅನರ್ಥ.

ಸಿಂಹ: ಎಲ್ಲಿ ಹೋದರು ಅಶಾಂತಿ, ಗುರು ಹಿರಿಯರಲ್ಲಿ ಭಕ್ತಿ, ಆಲಸ್ಯ ಮನೋಭಾವ, ಆದಾಯಕ್ಕಿಂತ ಖರ್ಚು ಜಾಸ್ತಿ.

ಕನ್ಯಾ: ಅಲ್ಪ ಕಾರ್ಯಸಿದ್ಧಿ, ದೃಷ್ಟಿ ದೋಷದಿಂದ ತೊಂದರೆ, ಚಂಚಲ ಮನಸ್ಸು, ದುರಾಲೋಚನೆ, ಸಲ್ಲದ ಅಪವಾದ.

ತುಲಾ: ಸಜ್ಜನ ವಿರೋಧ, ಧನವ್ಯಯ, ಕೋಪ ಜಾಸ್ತಿ, ಮನೋವ್ಯಥೆ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ.

ವೃಶ್ಚಿಕ: ಅಧಿಕಾರಿಗಳಲ್ಲಿ ಕಲಹ, ಅನಾರೋಗ್ಯ, ಕೆಲಸಕಾರ್ಯಗಳಲ್ಲಿ ವಿಘ್ನ, ಆಕಸ್ಮಿಕ ಧನವ್ಯಯ.

ಧನಸ್ಸು: ಹಿರಿಯರಿಂದ ಬೋಧನೆ, ಸ್ಥಳ ಬದಲಾವಣೆ, ಉನ್ನತ ಶಿಕ್ಷಣದಲ್ಲಿ ಯಶಸ್ಸು, ಹಣಕಾಸಿನ ಪರಿಸ್ಥಿತಿ ಉತ್ತಮ.

ಮಕರ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಮಾತಿನ ಮೇಲೆ ನಿಗಾ ಇರಲಿ, ಹಿತ ಶತ್ರು ಬಾಧೆ, ಮನಸ್ಸಿನಲ್ಲಿ ದುಗುಡ.

ಕುಂಭ: ಕಾರ್ಯ ಬದಲಾವಣೆ, ಖಾಸಗಿ ಕಂಪನಿಯಿಂದ ಸಹಾಯ, ಕಪ್ಪು ಬಣ್ಣದ ವ್ಯಕ್ತಿಯಿಂದ ಸಹಾಯ, ತಾಳ್ಮೆ ಅಗತ್ಯ.

ಮೀನ: ಅನ್ಯರಿಗೆ ಉಪಕಾರ ಮಾಡುವಿರಿ, ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಅವಕಾಶಗಳು ಕೈ ತಪ್ಪುವುದು.

Leave a Reply