1 ನಿಮಿಷದಲ್ಲಿ ಹತ್ತು ಶ್ಲೋಕ : ಇಂಡಿಯಾಸ್‌‌ ವರ್ಲ್ಡ್‌ ರೆಕಾರ್ಡ್‌ಗೆ ಪಾತ್ರರಾದ 3ರ ಹರೆಯದ ಮಂಗಳೂರಿನ ಬಾಲಕಿ ಆದ್ರಿತಿ -Vishwanews24

Featured, ದಕ್ಷಿಣ ಕನ್ನಡ

1 ನಿಮಿಷದಲ್ಲಿ ಹತ್ತು ಶ್ಲೋಕ : ಇಂಡಿಯಾಸ್‌‌ ವರ್ಲ್ಡ್‌ ರೆಕಾರ್ಡ್‌ಗೆ ಪಾತ್ರರಾದ 3ರ ಹರೆಯದ ಮಂಗಳೂರಿನ ಬಾಲಕಿ ಆದ್ರಿತಿ -Vishwanews24

ಮಂಗಳೂರು,: ಮಂಗಳೂರಿನ ಬಾಲಕಿ ಆದ್ರಿತಿ ಇಂಡಿಯಾಸ್‌‌ ವರ್ಲ್ಡ್‌ ರೆಕಾರ್ಡ್‌ಗೆ ಪಾತ್ರರಾಗಿದ್ದಾರೆ.

3ರ ಹರೆಯದ ಬಾಲಕಿ 1 ನಿಮಿಷದಲ್ಲಿ ಹತ್ತು ಶ್ಲೋಕ ಹೇಳಿ ಇಂಡಿಯಾಸ್‌ ವರ್ಲ್ಡ್ ರೆಕಾರ್ಡ್‌ನ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾಳೆ.

ಆಸ್ಟ್ರೇಲಿಯಾ ಲಿಬರಲ್‌‌‌‌‌‌ ಪಾರ್ಟಿಯಿಂದ ವಿಕ್ಟೋರಿಯಾ ರಾಜ್ಯ ಆಡಳಿತ ಮಂಡಳಿಗೆ ಉಡುಪಿಯ ಶಿಲ್ಪಾ ಹೆಗ್ಡೆ ಆಯ್ಕೆ -Vishwanews24

10 ಶ್ಲೋಕಗಳನ್ನು ಕಂಠಪಾಠ ಮಾಡಿ ಹೇಳಿದ್ದಾಳೆ. ಮಂಗಳೂರಿನ ಬೋಳೂರು ನಿವಾಸಿ ರಿತೇಶ್‌ ಮೆಂಡನ್‌ ಹಾಗೂ ಕೃಪಾ.ಡಿ ದಂಪತಿಗಳ ಪುತ್ರಿ ಆದ್ರಿತಿ ಬಾಲ್ಯದಿಂದಲೇ ಶ್ಲೋಕಗಳನ್ನು ಕಂಠಪಾಠ ಮಾಡುತ್ತಿದ್ದಳು. ಇದೀಗ ಆಕೆ 1 ನಿಮಿಷದಲ್ಲಿ ಹತ್ತು ಶ್ಲೋಕ ಹೇಳಿ ಇಂಡಿಯಾಸ್‌ ವರ್ಲ್ಡ್ ರೆಕಾರ್ಡ್‌ಗೆ ಪಾತ್ರಳಾಗಿದ್ದಾಳೆ.

ಆದ್ರಿತಿಗೆ ಇಂಡಿಯಾಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯಿಂದ ಪುರಸ್ಕಾರ ಮಾಡಲಾಗಿದೆ.