ಕೊಡಿಬೆಂಗ್ರೆ ದೋಣಿ ದುರಂತ ಪ್ರಕರಣ: ಬೋಟ್ ಮಾಲೀಕ ಸಹಿತ ಮೂವರ ಬಂಧನ – vishwanews24

Featured, ಉಡುಪಿ

ಕೊಡಿಬೆಂಗ್ರೆ ದೋಣಿ ದುರಂತ ಪ್ರಕರಣ: ಬೋಟ್ ಮಾಲೀಕ ಸಹಿತ ಮೂವರ ಬಂಧನ

ಉಡುಪಿ: ಕೊಡಿಬೆಂಗ್ರೆ ಸಮೀಪ ಸಮುದ್ರದಲ್ಲಿ ಸಂಭವಿಸಿದ ದೋಣಿ ದುರಂತ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೋಟ್ ಮಾಲೀಕರಾದ ಬ್ರಹ್ಮಾವರ ತಾಲೂಕಿನ‌ ಕೋಡಿ ಗ್ರಾಮದ ನಿವಾಸಿಗಳಾದ ಸುಹಾಸ್ ಶ್ರೀಯಾನ್(23) ಮತ್ತು ಸುಫಿಯಾನ್(20) ಹಾಗೂ ಬೋಟ್ ಚಾಲಕ ಕೋಡಿ ಗ್ರಾಮದ ನಿವಾಸಿ ವಾಸು ಮೆಂಡನ್(52̧) ಬಂಧಿತ ಆರೋಪಿಗಳು. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಜ. 26ರಂದು ಬೆಳಿಗ್ಗೆ ಸಂಭವಿಸಿದ ದೋಣಿ ದುರಂತದಲ್ಲಿ ಮೂವರು ಮೃತಪಟ್ಟಿದ್ದರು. ಪ್ರಸಾಸೋದ್ಯಮ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದಿರುವುದು ಕಂಡುಬಂದಿದೆ. ಅಲ್ಲದೆ, ಬೋಟ್ ಪ್ರವಾಸಿಗರ ವಿಹಾರಕ್ಕೆ ಯೋಗ್ಯವಾಗಿದೆ ಎಂಬ ಧೃಢೀಕರಣ ಪತ್ರವನ್ನು ಹೊಂದಿರಲಿಲ್ಲ. ಪ್ರವಾಸಿಗರನ್ನು ಕರೆದುಕೊಂಡು ಹೋಗುವಾಗ ಸಂದರ್ಭದಲ್ಲಿಯೂ ಲೈಫ್ ಜಾಕೆಟ್ ನಂತಹ ಯಾವುದೇ ಮುಂಜಾಗೃತಾ ಕ್ರಮಗಳನ್ನು ಅನುಸರಿಸದೆ ಇರುವುದು ಕೂಡ ತನಿಖೆಯಲ್ಲಿ ಕಂಡುಬಂದಿದೆ. ಆರೋಪಿಗಳ ವಿರುದ್ಧ ಅಜಾಗರೂಕತೆ ಹಾಗೂ ನಿರ್ಲಕ್ಷತನದ ಸೆಕ್ಷನ್ ನಡಿ ಪ್ರಕರಣ ದಾಖಲಾಗಿದೆ.

Leave a Reply