12 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಹೇಮಾ ಮಾಲಿನಿ- ಧರ್ಮೇಂದ್ರ ಪುತ್ರಿ ಇಶಾ ಡಿಯೋಲ್ – Vishwanews24
12 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಹೇಮಾ ಮಾಲಿನಿ- ಧರ್ಮೇಂದ್ರ ಪುತ್ರಿ ಇಶಾ ಡಿಯೋಲ್
ಮುಂಬೈ(Vishwanews24): ಹಿರಿಯ ನಟರಾದ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಅವರ ಪುತ್ರಿ ನಟಿ ಇಶಾ ಡಿಯೋಲ್ ಮಂಗಳವಾರ ತಮ್ಮ ಪತಿ ಭರತ್ ತಖ್ತಾನಿಗೆ ಡೈವೋರ್ಸ್ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಇಬ್ಬರು ಪರಸ್ಪರ ಮತ್ತು ಸೌಹಾರ್ದಯುತವಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
2012ರಲ್ಲಿ ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. 2017ರಲ್ಲಿ ಮಗಳು ರಾಧ್ಯಗೆ ಇಶಾ ಡಿಯೋಲ್ ಜನ್ಮ ನೀಡಿದರು. 2019ರಲ್ಲಿ ಎರಡನೇ ಮಗುವನ್ನ ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ಬರಮಾಡಿಕೊಂಡಿದ್ದರು. ಇದೀಗ 12 ವರ್ಷಗಳ ದಾಂಪತ್ಯ ಜೀವನಕ್ಕೆ ಇಶಾ ಡಿಯೋಲ್ ಮತ್ತು ಭರತ್ ತಖ್ತಾನಿ ಅಂತ್ಯ ಹಾಡಿದ್ದಾರೆ.
ಹೆಲಿಕಾಪ್ಟರ್ ಅಪಘಾತ – ಚಿಲಿಯ ಮಾಜಿ ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ ನಿಧನ – Vishwanews24
ವಿಚ್ಛೇದನದ ಬಗ್ಗೆ ಇಶಾ ಡಿಯೋಲ್ ಮತ್ತು ಭರತ್ ತಖ್ತಾನಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ ಎಂದು ದೆಹಲಿ ಟೈಮ್ಸ್ ವರದಿ ಮಾಡಿದೆ. ‘’ನಾವು ಪರಸ್ಪರ ಒಪ್ಪಿಗೆಯ ಮೇರೆಗೆ ಸೌಹಾರ್ದಯುತವಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮ ಜೀವನ ಬದಲಾಗುತ್ತಿರುವ ಈ ಸಮಯದಲ್ಲಿ ನಮ್ಮ ಇಬ್ಬರು ಮಕ್ಕಳ ಉತ್ತಮ ಹಿತಾಸಕ್ತಿ ಮತ್ತು ಯೋಗಕ್ಷೇಮ ನಮಗೆ ಅತ್ಯಂತ ಮಹತ್ವದ್ದಾಗಿದೆ. ನಮ್ಮ ಗೌಪ್ಯತೆಯನ್ನ ಗೌರವಿಸುವುದನ್ನು ನಾವು ಪ್ರಶಂಸಿಸುತ್ತೇವೆ’’ ಎಂದು ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ಜಂಟಿ ಹೇಳಿಕೆ ನೀಡಿದ್ಧಾರೆ ಎಂದು ವರದಿಯಾಗಿದೆ.
