180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

Featured, ರಾಷ್ಟ್ರ ನ್ಯೂಸ್

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ

ನವದೆಹಲಿ : ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಹ-ಪೈಲಟ್ ನಡೆಸಿದ ದಾಳಿಯ ಪ್ರಯತ್ನವನ್ನು ವಿಫಲಗೊಳಿಸುವ ಮೂಲಕ 180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ‘ಮ್ಯಾನ್‌ಕೈಂಡ್ ಫಾರ್ಮಾ’ ಕಂಪನಿಯು 1 ಕೋಟಿ ರೂ. ಘೋಷಿಸಿದೆ.

ದುಬೈ-ಟೆಲ್ ಅವಿವ್ ನಡುವೆ ಸಂಚರಿಸುತ್ತಿದ್ದ ಫ್ಲೈದುಬೈ ವಿಮಾನವನ್ನು ಪತನಗೊಳಿಸುವ ಪ್ರಯತ್ನ ನಡೆದಿತ್ತು. ಸಹ-ಪೈಲಟ್‌ನಿಂದ ಚಾಕು ಇರಿತಕ್ಕೆ ಒಳಗಾಗಿದ್ದರೂ ಮಚ್ಚಾರ್ ವಿಮಾನ ಸುರಕ್ಷಿತವಾಗಿ ಸೌದಿಯಲ್ಲಿ ಲ್ಯಾಂಡ್ ಆಗುವಂತೆ ನೋಡಿಕೊಂಡರು. ಅವರ ಧೈರ್ಯ ಮತ್ತು ಮಾನವೀಯತೆಯನ್ನು ಮೆಚ್ಚಿ, ಕೃತಜ್ಞತೆಯ ಸಂಕೇತವಾಗಿ 1 ಕೋಟಿ ರೂಪಾಯಿ ನೀಡಿ ಫಾರ್ಮಾ ಕಂಪನಿಯು ಗೌರವ ಸಲ್ಲಿಸಿದೆ.

ಉಡುಪಿ ನಗರಸಭೆ ವ್ಯಾಪ್ತಿಯ ಮೂಲ ಸೌಕರ್ಯ ಅಭಿವೃದ್ಧಿಗೆ ರೂ. 30 ಕೋಟಿ ಅನುದಾನ ಮಂಜೂರು ಮಾಡುವಂತೆ  ಶಾಸಕ ಯಶ್ ಪಾಲ್ ಮನವಿ – vishwanews24

“ಒಬ್ಬ ಭಾರತೀಯನಾಗಿ, ಇಡೀ ಜಗತ್ತಿನ ಮುಂದೆ ಒಬ್ಬ ಭಾರತೀಯ ಇಂತಹ ಧೈರ್ಯ, ಮಾನವೀಯತೆ ಮತ್ತು ಜವಾಬ್ದಾರಿಯನ್ನು ಪ್ರದರ್ಶಿಸುವುದನ್ನು ನೋಡಿ ನನಗೆ ಅಪಾರ ಹೆಮ್ಮೆ ಎನಿಸುತ್ತಿದೆ. ನೀವು ರಕ್ಷಿಸಿದ ಜೀವಗಳ ಮೌಲ್ಯಕ್ಕಾಗಲಿ ಅಥವಾ ಲಕ್ಷಾಂತರ ಜನರಿಗೆ ನೀವು ನೀಡಿದ ಸ್ಫೂರ್ತಿಗಾಗಲಿ ಯಾವುದೇ ಹಣದ ಮೊತ್ತಕ್ಕೆ ಸಮವಾಗಲಾರದು. ನಿಮ್ಮ ಧೈರ್ಯ ಮತ್ತು ಮಾನವೀಯತೆಯ ಕುರಿತಾದ ನಮ್ಮ ಅಪಾರ ಗೌರವ, ಕೃತಜ್ಞತೆ ಮತ್ತು ಮೆಚ್ಚುಗೆಯ ಒಂದು ಸಣ್ಣ ಅಭಿವ್ಯಕ್ತಿ ಮಾತ್ರವೇ ಈ ಕೊಡುಗೆಯಾಗಿದೆ” ಎಂದು ಮ್ಯಾನ್‌ಕೈಂಡ್ ಫಾರ್ಮಾದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಜುನೇಜಾ ಅವರು ಮಚ್ಚಾರ್ ಅವರಿಗೆ ಪತ್ರ ಬರೆದಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟಕ್ಕೆ ಲೈಸನ್ಸ್ : ಅರ್ಜಿ ಸಲ್ಲಿಸಲು ಅ.26 ಕೊನೆಯ ದಿನ – vishwanews24

“ಕ್ಯಾಪ್ಟನ್ ಸ್ಮಿತ್.. ಒಬ್ಬ ಭಾರತೀಯರಾಗಿ ನಾವು ನಿಮಗೆ ನಮಸ್ಕರಿಸುತ್ತೇವೆ. ನೀವು ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ್ದೀರಿ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Leave a Reply