2019 – 2023ರ ವರೆಗೆ ಮುಡಾದಿಂದ ಹಂಚಿಕೆಯಾದ ಎಲ್ಲಾ 50:50 ಸೈಟುಗಳು ರದ್ದು : ಯತೀಂದ್ರ ಸಿದ್ದರಾಮಯ್ಯ – vishwanews24

Featured, ರಾಜ್ಯ ನ್ಯೂಸ್

2019 – 2023ರ ವರೆಗೆ ಮುಡಾದಿಂದ ಹಂಚಿಕೆಯಾದ ಎಲ್ಲಾ 50:50 ಸೈಟುಗಳು ರದ್ದು ..

ಅಕ್ರಮ ನಡೆದಿದ್ದರೆ 2018ರ ಹಿಂದೆ ಹಂಚಿಕೆಯಾದ ಸೈಟುಗಳೂ ರದ್ದು : ಯತೀಂದ್ರ ಸಿದ್ದರಾಮಯ್ಯ

ಮೈಸೂರು: 2019 ರಿಂದ 2023ರ ವರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ  50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಎಲ್ಲಾ ಸೈಟುಗಳನ್ನು ರದ್ದುಪಡಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮುಡಾ ಸೈಟು ಹಂಚಿಕೆ ಹಗರಣ  ಸಂಬಂಧ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ದಿಂದ 50:50 ಅನುಪಾತದಲ್ಲಿ ಸೈಟು ಪಡೆದ ಗ್ರಾಹಕರಿಗೆ ಶಾಕ್‌ ಕೊಟ್ಟಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ: 87 ಎಚ್1ಎನ್1 ಪ್ರಕರಣ: ಮುಂಜಾಗ್ರತೆ ಅವಶ್ಯ: ಡಿಎಚ್‌ಒ – vishwanews24

2019 ರಿಂದ 2023ರ ವರೆಗಿನ ಎಲ್ಲಾ 50:50 ಸೈಟುಗಳನ್ನ ರದ್ದುಪಡಿಸಲಾಗಿದೆ. 1,000 ಕ್ಕೂ ಹೆಚ್ಚು ಸೈಟುಗಳನ್ನ ರದ್ದುಮಾಡಲಾಗಿದೆ. 50:50 ಸೈಟುಗಳು ಮತ್ತು ಸೈಟುಗಳಲ್ಲಿ ಮನೆ ಕಟ್ಟಿದವರ ಲಿಸ್ಟ್ ತರಿಸುತ್ತಿದ್ದೇನೆ. ಸದ್ಯಕ್ಕೆ ಎಲ್ಲವನ್ನೂ ರದ್ದು ಮಾಡಲಾಗಿದೆ. ಕಾನೂನಾತ್ಮಕ ಹೋರಾಟ ಇರುವ ಸೈಟುಗಳ ಬಗ್ಗೆ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

 ಉಡುಪಿ :  ರೈತರು ಆರ್ಥಿಕ ನೆರವು ಪಡೆಯಲು ಇ-ಕೆವೈಸಿ ಕಡ್ಡಾಯ – vishwanews24

Leave a Reply