2022-23ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ : ಮೇ.14ರಿಂದ ಶಾಲೆ ಪ್ರಾರಂಭ ; ಅ. 3 ರಿಂದ 16 ದಸರಾ ರಜೆ – Vishwanews24

Featured, ರಾಜ್ಯ ನ್ಯೂಸ್

2022-23ನೇ ಸಾಲಿನ ‘ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ : ಮೇ.14ರಿಂದ ಶಾಲೆ ಪ್ರಾರಂಭ, ಅ. 3 ರಿಂದ 16 ದಸರಾ ರಜೆ

ಬೆಂಗಳೂರು: 2022-23ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಕಾರ್ಯಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿನ ಕಲಿಕಾ ಕೊರತೆಯನ್ನು ಸರಿದೂಗಿಸೋ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.

ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ2022-23ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಕಾರ್ಯಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಈ ವೇಳಾಪಟ್ಟಿಯಂತೆ ಪ್ರಸಕ್ತ ವರ್ಷವನ್ನು ಕಲಿಕಾ ಚೇತರಿಕೆ ವರ್ಷವೆಂದು ಸಂಕಲ್ಪಿಸಲಾಗಿದ್ದು, ವಾರ್ಷಿಕ ಪಠ್ಯವಸ್ತು ಬೋಧನೆಯನ್ನು ಕಲಿಕಾ ಚೇತರಿಕೆ ಕಾರ್ಯಕ್ರಮದೊಂದಿಗೆ ಸಂಯೋಜಿಸಿ, ವಾರ್ಷಿಕ ಕಾರ್ಯಸೂಚಿಯನ್ನು ತಯಾರಿಸಲಾಗಿದೆ ಎಂದು ತಿಳಿಸಿದೆ.

ಭಾರತಕ್ಕೆ ಆಗಮಿಸಿದ ಬ್ರಿಟನ್ ಪ್ರಧಾನಿ ಜಾನ್ಸನ್‌ ; ಗುಜರಾತ್‌ನ ಸಬರಮತಿ ಆಶ್ರಮಕ್ಕೆ ಭೇಟಿ – Vishwanews24

2022-23ನೇ ಶೈಕ್ಷಣಿಕ ವೇಳಾಪಟ್ಟಿಯಂತೆ ದಿನಾಂಕ 14-05-2022ರಿಂದ ಶಾಲೆ ಪ್ರಾರಂಭ ಮತ್ತು ಪ್ರಾರಂಭೋತ್ಸವದ ಪೂರ್ವ ಸಿದ್ಧತೆ ಆರಂಭಗೊಳ್ಳಲಿದೆ. ದಿನಾಂಕ 16-05-2022ರಿಂದ ಶಾಲಾ ಪ್ರಾರಂಭೋತ್ಸವ ಶುರುವಾಗಲಿದೆ. ಅಲ್ಲದೇ ದಿನಾಂಕ 03-10-2022 ರಿಂದ ದಿನಾಂಕ 16-10-2022ರವರೆಗೆ ದಸರಾ ರಜೆಯನ್ನು ಘೋಷಿಸಲಾಗಿದೆ.

ಹೀಗಿದೆ.. 2022-23ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಕಾರ್ಯಸೂಚಿ ಪಟ್ಟಿ

ಮೇ 16 – ಶಾಲೆಗಳು ಪ್ರಾರಂಭ
ಮೇ 16 ರಿಂದ 20 – ಶಾಲಾ ದಾಖಲಾತಿ ಪ್ರಕ್ರಿಯೆ
ಮೇ 17 ರಿಂದ 31 – ಕಲಿಕಾ ಚೇತರಿಕೆ ಕಾರ್ಯಕ್ರಮ
ಮೇ 28 – ಪೋಷಕರು, ತಾಯಂದಿರ ಸಭೆ
ಜೂನ್ 1 – ಪ್ರಸಕ್ತ ಸಾಲಿನ ಪಠ್ಯ ಬೋಧನೆಗೆ ಚಾಲನೆ
ಅಕ್ಟೋಬರ್ 3 ರಿಂದ 16 – ದಸರಾ ರಜೆ
ಅಕ್ಟೋಬರ್ 17 ರಿಂದ 25 – ಅರ್ಧ ವಾರ್ಷಿಕ ಪರೀಕ್ಷೆಗಳು
2023 ಫೆಬ್ರವರಿ 20 ರಿಂದ 25 – ಪೂರ್ಣ ಸಿದ್ದತಾ ಪರೀಕ್ಷೆ
2023 ಮಾರ್ಚ್ 23 ರಿಂದ 31 – ವಾರ್ಷಿಕ ಪರೀಕ್ಷೆ

ಮಂಗಳೂರು: ಏ.22ರಿಂದ ಮೇ.18ರ ವರೆಗೆ  ದ್ವಿತೀಯ ಪಿಯುಸಿ ಪರೀಕ್ಷೆ : ನಿಷೇಧಾಜ್ಞೆ ಜಾರಿ – Vishwnaews24

Leave a Reply