7 ಮಂದಿಯ ಭೀಕರ ಹತ್ಯೆ  : ಸಿಲಿಕಾನ್ ಸಿಟಿಯನ್ನೇ ಬೆಚ್ಚಿಬೀಳಿಸಿದ ಮರ್ಡರ್‌ ಕೇಸ್‌ ಬಗ್ಗೆ ಪೊಲೀಸ್‌ ಆಯುಕ್ತರ ಹೇಳಿಕೆ – vishwanews24

Featured, ರಾಜ್ಯ ನ್ಯೂಸ್

 7 ಮಂದಿಯ ಭೀಕರ ಹತ್ಯೆ  : ಸಿಲಿಕಾನ್ ಸಿಟಿಯನ್ನೇ ಬೆಚ್ಚಿಬೀಳಿಸಿದ ಮರ್ಡರ್‌ ಕೇಸ್‌ ಬಗ್ಗೆ ಪೊಲೀಸ್‌ ಆಯುಕ್ತರ ಹೇಳಿಕೆ

ಬೆಂಗಳೂರು: ಸಿಲಿಕಾನ್‌ ಸಿಟಿಯನ್ನೇ ಬೆಚ್ಚಿಬೀಳಿಸುವಂತ ಹತ್ಯಾಕಾಂಡ ನಡೆದಿದೆ. ಕ್ಯಾಬ್‌ ಡ್ರೈವರ್‌ ಒಂದೇ ಕುಟುಂಬದ 7 ಮಂದಿಯನ್ನ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಇಂದುಶೇಖರ್ ರುಬ್ಬುಗುಂಡಿನಿಂದ ಇಡೀ ಕುಟಂಬವನ್ನೇ ಹತ್ಯೆ ಮಾಡಿದ್ದಾನೆ. ಹೆಂಡ್ತಿ, ಹೆಂಡ್ತಿ ತಾಯಿ, ಹೆಂಡ್ತಿಯ ಅಣ್ಣಂದಿರು, ಅತ್ತಿಗೆಯರನ್ನ ಇಂದುಶೇಖರ್ ಕೊಲೆಗೈದಿದ್ದಾನೆ. ಈ ಪ್ರಕರಣದ ಪ್ರಾಥಮಿಕ ತನಿಖೆಯ ಬಗ್ಗೆ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಮಾಹಿತಿ ನೀಡಿದ್ದಾರೆ.

ರಾಜಾಜೀನಗರ ಪೊಲೀಸ್‌ ಠಾಣೆಗೆ ಭೇಟಿ ನೀಡಿದ ಪೊಲೀಸ್‌ ಆಯುಕ್ತರು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

ಪೆರ್ಡೂರು ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣ: ಕರ್ತವ್ಯಲೋಪ ಎಸಗಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಮಾನತು – vishwanews24

ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ 3ನೇ ತಾರೀಖು ಮಿಸ್ಸಿಂಗ್ ಕಂಪ್ಲೆಂಟ್ ದಾಖಲಾಗಿತ್ತು. 7 ಜನರನ್ನು ಒಬ್ಬನೇ ಆರೋಪಿ ಸಾಯಿಸಿದ್ದಾನೆ. ರಾಜಾಜಿನಗರ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಕೇಸ್‌ ದಾಖಲಾಗಿದೆ. ಇದುವರೆಗೆ ಒಂದು ಬಾಡಿ ಮಾತ್ರ ಸಿಕ್ಕಿದೆ. ಇನ್ನೂ 6 ಬಾಡಿ ಸಿಗಬೇಕಿದೆ ಎಂದು ತಿಳಿಸಿದ್ದಾರೆ.

ಆರೋಪಿಯ ಸ್ವಇಚ್ಚಾ ಹೇಳಿಕೆ ಪ್ರಕಾರ 7 ಜನರ ಸಾಯಿಸಿದ್ದೀನಿ ಅಂದಿದ್ದಾನೆ. ವೈಯುಕ್ತಿಕ ಕಾರಣಕ್ಕೆ ಕೊಲೆ ಅಂದಿದ್ದಾನೆ. ಆರೋಪಿಯನ್ನ ಹಿಡಿಯುವಾಗ ಮಗು ಒಬ್ಬನನ್ನ ರಕ್ಷಣೆ ಮಾಡಲಾಗಿದೆ. ಮಗುವನ್ನು ಸಾಯಿಸೋ ಪ್ಲಾನ್‌ ಕೂಡ ಮಾಡಿದ್ದ. ಅಲ್ಲದೇ ಆರೋಪಿಗೆ 7 ವರ್ಷದ ಮಗಳು ಸಾಥ್‌ ನೀಡಿದ್ದಾಳೆ. ಅಪ್ರಾಪ್ತ ಮಗಳಿಗೆ ಆರೋಪಿ ಬ್ರೈನ್ ವಾಷ್ ಮಾಡಿದ್ದಾನೆ. ನಂತರ 15 ರಿಂದ 20 ದಿನಗಳ ಅಂತರದಲ್ಲಿ ಒಬ್ಬೊಬ್ಬರೇ ಮಿಸ್ ಆಗಿದ್ದಾರೆ. ನವೆಂಬರ್ 3ಕ್ಕೆ ಮಿಸ್ಸಿಂಗ್ ಕಪ್ಲೆಂಟ್ ಆಗಿದೆ. ಆರೋಪಿಯೇ ಡಿಸಿಸ್ ಮೊಬೈಲ್ ಇಂದ ಮಾಡಿದ್ದಾನೆ ಅಂತಾ ವಿವರಿಸಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಬೆಚ್ಚಿ ಬೀಳಿಸುವ ಮರ್ಡರ್‌ : ಹೆಂಡತಿ ಮೇಲಿನ ಸಿಟ್ಟಿಗೆ ಪತಿಯಿಂದ ಏಳು ಜನರ ಕೊಲೆ – vishwanews24 https://wp.me/p9KQap-vaX

ಆರೋಪಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. 5 ವರ್ಷದ ಹಿಂದೆ ಮಾದನಾಯಕನಹಳ್ಳಿಯಲ್ಲಿ ಈತನ ವಿರುದ್ಧ ಚೈನ್ ಸ್ನ್ಯಾಚ್ ಕೇಸ್ ದಾಖಲಾಗಿದೆ ಎಂದು ಕೂಡ ಮಾಹಿತಿ ನೀಡಿದ್ದಾರೆ.

Leave a Reply