72ನೇ ಗಣರಾಜ್ಯೋತ್ಸವ ಸಂಭ್ರಮ: ರಾಜಪಥ್‌ನಲ್ಲಿ ರಾಷ್ಟ್ರಪತಿ ಕೋವಿಂದ್‌ರಿಂದ ಧ್ವಜಾರೋಹಣ -Vishwanews24
72ನೇ ಗಣರಾಜ್ಯೋತ್ಸವ ಸಂಭ್ರಮ: ರಾಜಪಥ್‌ನಲ್ಲಿ ರಾಷ್ಟ್ರಪತಿ ಕೋವಿಂದ್‌ರಿಂದ ಧ್ವಜಾರೋಹಣ -Vishwanews24
ನವದೆಹಲಿ: ದೇಶವು ಇಂದು 72ನೇ ಗಣರಾಜ್ಯೋತ್ಸವ ಆಚರಿಸುತ್ತಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಜ್ಪಥ್ನಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ.
ದೆಹಲಿಯ ರಾಜಪಥ್‌ನಲ್ಲಿ ವಿಜಯ್‌ಕುಮಾರ್ ಮಿಶ್ರಾ ನೇತೃತ್ವದಲ್ಲಿ ಪರೇಡ್ ಆರಂಭಗೊಂಡಿದೆ. ಎರಡು ಸಾಲುಗಳಲ್ಲಿ ವಾಯುಪಡೆ & ನೌಕಾಪಡೆ ತುಕಡಿ ಶಕ್ತಿ ಅನಾವರಣಗೊಳ್ಳುತ್ತಿದೆ. ಇನ್ನು ಪರೇಡ್ನಲ್ಲಿ 122 ಮಂದಿ ಸೈನಿಕರ ಬಾಂಗ್ಲಾದೇಶ ಸೇನಾ ತುಕಡಿ ಭಾಗಿಯಾಗಿದೆ.
600 ಬದಲು ಈ ಬಾರಿ 160 ವಿದ್ಯಾರ್ಥಿಗಳಷ್ಟೇ ಭಾಗಿಯಾಗಲು ಅವಕಾಶ ನೀಡಲಾಗಿದೆ. ಪ್ರತಿವರ್ಷ 1 ಲಕ್ಷ 15 ಸಾವಿರ ಮಂದಿ ಪರೇಡ್ ವೀಕ್ಷಣೆ ಮಾಡುತ್ತಿದ್ದರು. ಆದ್ರೆ ಈ ಬಾರಿ ಕೊರೊನಾ ಸೋಂಕು ಹಿನ್ನೆಲೆ ದೈಹಿಕ ಅಂತರ ಪಾಲನೆಯಾಗಬೇಕು ಹೀಗಾಗಿ 25,000 ಮಂದಿಗಷ್ಟೇ ಪರೇಡ್ ವೀಕ್ಷಣೆಗೆ ಅವಕಾಶ ನೀಡಲಾಗಿದೆ.
Delhi: The Tricolour unfurled at Rajpath in the presence of President Ram Nath Kovind, Prime Minister Narendra Modi and other dignitaries, on 72nd #RepublicDay pic.twitter.com/h4FjOzRI2B
— ANI (@ANI) January 26, 2021
