ನಾನು ಕಾಂಗ್ರೆಸ್ ಗಾಗಿ ನನ್ನ ಜೀವನವನ್ನೇ ತೆತ್ತಿದ್ದೇನೆ : ಎಚ್ಡಿಡಿ – vishwanews24
ನಾನು ಕಾಂಗ್ರೆಸ್ ಗಾಗಿ ನನ್ನ ಜೀವನವನ್ನೇ ತೆತ್ತಿದ್ದೇನೆ : ಎಚ್ಡಿಡಿ
ಮುಸಲ್ಮಾನ ಬಂದುಗಳು ನನ್ನ ಅಣ್ಣ ತಮ್ಮಂದಿರು, ಅವರಿಗಾಗಿ ಈ ಶರೀರವನ್ನ ತ್ಯಾಗ ಮಾಡಿದ್ದೇನೆ
ಹಾಸನ: ಜಿಲ್ಲೆಯ ಬೇಲೂರು ಪಟ್ಟಣದ ಚನ್ನಕೇಶವ ದೇವಾಲಯದ ಆವರಣದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಎಚ್ಡಿಡಿ, ನಾನು ಕಾಂಗ್ರೆಸ್ ಗಾಗಿ ನನ್ನ ಜೀವನವನ್ನೇ ತೆತ್ತಿದ್ದೇನೆ.
ಒಂದು ಪುರಸಭೆ ಚುನಾವಣೆ ಗೆಲ್ಲಿಸೋಕೆ ದೇಶದ ಮಾಜಿ ಪ್ರಧಾನಿ ಆದವನು ಇಲ್ಲಿ ಬಂದು ಕೂತೆ. ಮುಸಲ್ಮಾನ ಬಂದುಗಳು ನನ್ನ ಅಣ್ಣ ತಮ್ಮಂದಿರು. ನಿಮಗಾಗಿ ಈ ಶರೀರವನ್ನ ತ್ಯಾಗ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಎಚ್.ಡಿ.ಡಿ, ಹಾಸನದಿಂದ ದೇವೇಗೌಡರು ನಿಲ್ಲಬೇಕು ಎಂದರು. ನಾನು ಕಳೆದಬಾರಿಯೇ ಹೇಳಿದ್ದೇನೆ, ನಾನು ಚುನಾವಣೆಗೆ ನಿಲ್ಲುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದೇನೆ. ನಾನು ವ್ಹೀಲ್ ಚೇರ್ ನಲ್ಲೇ ಬಂದೆ, ದೇವಾಲಯದಲ್ಲಿ ನಡೆದುಕೊಂಡೆ ಹೋದೆ. ದೇವೇಗೌಡರೆ ನೀವು 15 ಚುನಾವಣೆ ಕಳೆದಿದ್ದೀರಿ, ಜಾತ್ಯಾತೀತ ತತ್ವದ ಅಡಿಯಲ್ಲಿ ರಾಜಕೀಯ ಮಾಡಿದ್ದೀರಿ. ಈಗ ಏಕೆ ಮಾರ್ಪಾಡು ಮಾಡಿಕೊಂಡಿದ್ದೀರಿ ಎನ್ನುತ್ತಾರೆ. ಕುಮಾರಸ್ವಾಮಿ ಪ್ರತಿ ಪಂಚಾಯಿತಿಗೆ ಆಧುನಿಕ ಶಾಲೆ, ಆಸ್ಪತ್ರೆ ಕಟ್ಟುತ್ತೇನೆ ಎಂದರು.
ಮಂಗಳೂರು: ಕಂಕನಾಡಿ ನಗರ ಠಾಣೆ ಇನ್‌ಸ್ಪೆಕ್ಟರ್ ಎಸ್.ಎಚ್. ಭಜಂತ್ರಿ ಅಮಾನತು – vishwanews24
ನಾನು ಈ ಜಿಲ್ಲೆಗೆ ಬಂದಿರೋದು ನನ್ನ ಮೊಮ್ಮಗನ್ನ ಗೆಲ್ಲಿಸೋದಕ್ಕಲ್ಲ, ಈ ಜಿಲ್ಲೆಯ ಅಭಿವೃದ್ಧಿಗಾಗಿ. ನಾವು ಏನು ಮೋಸ ಮಾಡಿದ್ದೇವೆ ಹೇಳಲಿ, ನಮ್ಮ ಸಮಾಜದವರನ್ನ ದೊಡ್ಡ ದೊಡ್ಡ ಸ್ಥಾನಕ್ಕೆ ಕಳಿಸಿದ್ದೇನೆ. ಅವರೆಲ್ಲಾ ಸೇರಿ ನಮ್ಮನ್ನ ಸೋಲಿಸಿದರು, ನಾನು ಕಾಂಗ್ರೆಸ್ ಗಾಗಿ ನನ್ನ ಜೀವನವನ್ನೇ ತೆತ್ತಿದ್ದೇನೆ. ಒಂದು ಪುರಸಭೆ ಚುನಾವಣೆ ಗೆಲ್ಲಿಸೋಕೆ ದೇಶದ ಮಾಜಿ ಪ್ರಧಾನಿ ಆದವನು ಇಲ್ಲಿ ಬಂದು ಕೂತೆ ಎಂದರು.
ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದು ನಾನು
ಮುಸಲ್ಮಾನ ಬಂದುಗಳು ನನ್ನ ಅಣ್ಣ ತಮ್ಮಂದಿರು, ನಿಮಗಾಗಿ ಈ ಶರೀರವನ್ನ ತ್ಯಾಗ ಮಾಡಿದ್ದೇನೆ. ನಿಮಗೆ ಮೀಸಲಾತಿ ನೀಡಿದ್ದೇನೆ, ಖರ್ಗೆಯವರು ಒಮ್ಮೆ ಮಾತ್ರ ಮೀಸಲಾತಿ ಕೊಡೋಣಾ ಎಂದಿದ್ದರು. ನಾನು ಕೊಟ್ಟ ಮೀಸಲಾತಿಯನ್ನ ಇಲ್ಲಿಯವರೆಗೂ ತೆಗೆದು ಹಾಕಲಿಕ್ಕೆ ಆಗಿಲ್ಲ, ಬೆಟ್ಟದ ರಂಗನಾಥ ಸ್ವಾಮಿಗೆ ಹರಕೆ ಮಾಡಿಕೊಂಡ ನಂತರ ನಾನು ಹುಟ್ಟಿದ್ದೇನೆ. ಎಲ್ಲಾ ಸಮುದಾಯದ ದೇವಾಲಯಗಳಿಗೂ ಹೋಗಿದ್ದೇನೆ. ನನಗೆ ಎಲ್ಲಾ ದೇವಸ್ಥಾನಗಳೂ ಒಂದೇ, ಯಾರೋ ಒಬ್ಬ ರೇವಣ್ಣವರ ಮೇಲೆ ಆಪಾದನೆ ಮಾಡಿದ್ದಾರೆ. ಮಾಡಲಿ ಅವರು ದೊಡ್ಡವರು ನೋಡೋಣಾ ಎಂದರು.
ಪಡುಬಿದ್ರಿ: ಸೈಬರ್ ಕ್ರೈಮ್ ಅಧಿಕಾರಿಗಳ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ – ಪ್ರಕರಣ ದಾಖಲು – vishwanews24
