BIG BREAKING NEWS ಕಾಪು ಬಂಟಕಲ್ಲು ಬಿಜೆಪಿ ಕಾರ್ಯಕರ್ತನಿಗೆ ತಲವಾರು ಬೀಸಲು ಬಂದ ದುಷ್ಕರ್ಮಿಗಳು- ಸಾರ್ವಜನಿಕರಿಂದ ಗೂಸ
ಕಾಪು ಬಂಟಕಲ್ಲು ಬಿಜೆಪಿ ಕಾರ್ಯಕರ್ತನಿಗೆ ತಲವಾರು ಬೀಸಲು ಬಂದ ದುಷ್ಕರ್ಮಿಗಳು- ಸಾರ್ವಜನಿಕರಿಂದ ಗೂಸ
ಕಾಪು: ಮಜೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗಣೇಶ್ ಶೆಟ್ಟಿ ಹೆರೂರು ಅವರ ಬಂಟಕಲ್ಲಿನ ತನ್ನ ಅಂಗಡಿ ಬಂದ್ ಮಾಡುವ ಸಮಯದಲ್ಲಿ ರಾತ್ರಿ ಸುಮಾರು 9.15 ರ ಸುಮಾರಿಗೆ ತಲವಾರು ಹಿಡಿದು ದಾಳಿ ನಡೆಸಲು ಬಂದ ಇಬ್ಬರು ದುಷ್ಕರ್ಮಿಗಳಿಗೆ ಸಾರ್ವಜನಿಕರು ಗೂಸ ನೀಡಿರುವ ಘಟನೆ ನಡೆದಿದೆ.
ಮಜೂರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಹಾಗೂ ಕಳೆದ ಐದು ಅವಧಿಯಲ್ಲಿ ಸದಸ್ಯರಾಗಿ ಕಾರ್ಯನಿರ್ವಸಿದ್ದ ಗಣೇಶ್ ಶೆಟ್ಟಿ ಭಾಜಪದ ಸಕ್ರಿಯ ಕಾರ್ಯಕಾರ್ತರಾಗಿದ್ದಾರೆ.


ಅಂಗಡಿ ಬಂದ್ ಮಾಡಿ ಹೊರಡುವ ಸಮಯದಲ್ಲಿ ಬಂದ ದುಷ್ಕರ್ಮಿಗಳು ಗಣೇಶ್ ಶೆಟ್ಟಿಯ ಮೇಲೆ ಹಲ್ಲೆ ನಡೆಸಿದರು ಎನ್ನಲಾಗಿದೆ ಈ ಸಂಧರ್ಭದಲ್ಲಿ ಬೊಬ್ಬೆ ಹಾಕಿದ ಗಣೇಶ್ ಶೆಟ್ಟಿಯವರ ಸ್ವರ ಕೇಳಿ ಸ್ಥಳೀಯರು ಒಟ್ಟಾಗಿ ದುಷ್ಕರ್ಮಿಗಳಿಗೆ ಗೂಸ ನೀಡಿದರು ಎನ್ನಲಾಗಿದೆ.
ಸ್ಥಳದಲ್ಲಿ ಸಾರ್ವಜನಿಕರು ಸೇರಿದ್ದು ಶಿರ್ವ ಪೋಲಿಸರು ಘಟನಾ ಸ್ಥಳಕ್ಕಾಗಮಿಸಿದ್ದಾರೆ.
ಹಲ್ಲೆ ಹಾಗೂ ಪ್ರತಿ ಹಲ್ಲೆಗೆ ನಿಖರವಾದ ಕಾರಣ ಇನ್ನಷ್ಟೆ ಲಭ್ಯವಾಗಬೇಕಿದೆ.

ಕ್ರೈಮ್ ಬ್ಯೂರೋ ವಿಶ್ವನ್ಯೂಸ್24

