BIG MORNING NEWS:- ಉಡುಪಿಗೆ ಎಂಟ್ರಿ ಕೊಟ್ಟೆ ಬಿಡ್ತು ಟೊಮೇಟೊ ಜ್ವರ-ನಾಲ್ಕು ವರ್ಷದ ಮಗುವಿನಲ್ಲಿ ಜ್ವರದ ಶಂಕೆ..?: vishwanews24

Featured, ಉಡುಪಿ

ಉಡುಪಿಗೆ ಎಂಟ್ರಿ ಕೊಟ್ಟೆ ಬಿಡ್ತು ಟೊಮೇಟೊ ಜ್ವರ-ನಾಲ್ಕು ವರ್ಷದ ಮಗುವಿನಲ್ಲಿ ಜ್ವರದ ಶಂಕೆ..?

ಉಡುಪಿ : ಕೊರೊನಾ 4ನೇ ಅಲೆಯ ಭೀತಿಯಲ್ಲಿರುವ ಕರ್ನಾಟಕದ ಜನತೆಗೆ ಇದೀಗ ಮತ್ತೊಂದು ಆತಂಕ ಶುರುವಾಗಿದೆ.

ಇಂದಿನಿಂದ ಶಾಲೆಗಳು ಪುನರಾರಂಭಗೊಳ್ಳುತ್ತಿದ್ದು, ಈ ಹೊತ್ತಿನಲ್ಲೇ ಟೊಮೆಟೊ ಜ್ವರ ಕಾಣಿಸಿಕೊಂಡಿದೆ. ಕೇರಳದಲ್ಲಿ ಈಚೆಗಷ್ಟೇ ಕಾಣಿಸಿಕೊಂಡ ಟೊಮೆಟೋ ಜ್ವರ ಉಡುಪಿ ಜಿಲ್ಲೆಯಲ್ಲಿ 4 ವರ್ಷದ ಮಗುವಿನಲ್ಲಿ ಕಾಣಿಸಿಕೊಂಡ ಶಂಕೆ ವ್ಯಕ್ತವಾಗಿದೆ.

ಸದ್ಯ ರಾಜ್ಯದಲ್ಲಿ ಈ ಜ್ವರ ಕಾಣಿಸಿಕೊಂಡಿರುವ ಬಗ್ಗೆ ಆರೋಗ್ಯ ಇಲಾಖೆ ಯಾವುದೇ ಅಧಿಕೃತ ಪ್ರಕಟಣೆ ಬಿಡುಗಡೆಯಾಗಿಲ್ಲ. ಸೋಂಕಿತ ಮಗುವನ್ನು ಐಸಿಯು (ನಿಗಾ ಘಟಕ) ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಂಕಿತ ಪ್ರಕರಣ ಪತ್ತೆಯ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ

ಆರೋಗ್ಯ ಇಲಾಖೆಗೆ ತಲೆನೋವು: ಟೊಮೆಟೊ ಫ್ಲೂ ಆರೋಗ್ಯಾಧಿಕಾರಿಗಳಿಗೆ ತಲೆನೋವು ತರಿಸಿದೆ. ಅದಕ್ಕಾಗಿ ಜ್ವರ ಬಂದವರನ್ನು ಹೇಗೆ ಗುರುತಿಸಬೇಕು? ಹೇಗೆ ಪರೀಕ್ಷೆ ಮಾಡಿಸಬೇಕು? ಎನ್ನುವ ಬಗ್ಗೆ ಇನ್ನೂ ಪ್ರಚಾರ ಕೈಗೊಳ್ಳಬೇಕಿದೆ. ಈ ಬಗ್ಗೆ ಇನ್ನೂ ಆರೋಗ್ಯಾಧಿಕಾರಿಗಳಲ್ಲಿಯೇ ಗೊಂದಲ ಇವೆ. ಕೇರಳದಲ್ಲಿ ಈವರೆಗೆ 50 ಪ್ರಕರಣ ಕಾಣಿಸಿಕೊಂಡಿದೆ.

ಜ್ವರ ಲಕ್ಷಣಗಳೇನು?

 ವಿಪರೀತ ಜ್ವರ, ನಿರ್ಜಲೀಕರಣ, ಚರ್ಮದ ತುರಿಕೆ, ಕೈ ಮತ್ತು ಕಾಲುಗಳ ಚರ್ಮದ ಬಣ್ಣವೂ ಬದಲು, ಗುಳ್ಳೆಗಳು, ಕಿಬ್ಬೊಟ್ಟೆಯ ಸೆಳತ ವಾಕರಿಕೆ, ವಾಂತಿ – ಅತಿಸಾರ, ಸ್ರವಿಸುವ ಮೂಗು, ಕೆಮ್ಮು, ಸೀನು ಆಯಾಸ, ದೇಹದಲ್ಲಿ ನೋವು.

Leave a Reply