BREAKING NEWS-ರಾಜ್ಯದಲ್ಲಿ ಇಂದಿನಿಂದ ಗೋ ಮಸೂದೆ ಜಾರಿ-ಉಡುಪಿಯಲ್ಲಿ ಗೋಪೂಜೆ ಮಾಡಿ ಗೋಮಸೂದೆ ಜಾರಿಗೆ ತಂದ ಯಡಿಯೂರಪ್ಪ.vishwanews24
ರಾಜ್ಯದಲ್ಲಿ ಇಂದಿನಿಂದ ಗೋ ಮಸೂದೆ ಜಾರಿ-ಉಡುಪಿಯಲ್ಲಿ ಗೋಪೂಜೆ ಮಾಡಿ ಗೋಮಸೂದೆ ಜಾರಿಗೆ ತಂದ ಯಡಿಯೂರಪ್ಪ.
ಉಡುಪಿ: ಕರ್ನಾಟಕ ರಾಜ್ಯದಲ್ಲಿ ಇಂದಿನಿಂದ ಗೋಮಸೂದೆ ಜಾರಿ ಬಂದಿದ್ದು ಆ ಪ್ರಯುಕ್ತ ಉಡುಪಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಡುಪಿಯ ಕರಂಬಳ್ಳಿ ಶ್ರೀ ವೆಂಕಟರಮಣ ದೇಗುಲದಲ್ಲಿ ದೇವರ ದರ್ಶನ ಪಡೆದು ತದನಂತರ ಹಸು-ಕರುವಿಗೆ ಪೂಜೆ ಮಾಡುವ ಮೂಲಕ ಗೋ ಮಸೂದೆ ಜಾರಿಗೆ ತಂದರು.
ತದನಂತರ ಮಾತನಾಡಿ” ರಾಜ್ಯದ ಜನರ ಅಪೇಕ್ಷೆಯಂತೆ ಗೋ ಮಸೂದೆ ಜಾರಿಗೆ ತರಲಾಗಿದೆ ಜನರೆಲ್ಲರೂ ಸಹಕರಿಸಬೇಕು ಮತ್ತು ಮಹಾತ್ಮ ಗಾಂಧಿಯವರ ರಾಮರಾಜ್ಯದ ಕನಸು ನನಸಾಗುತ್ತಿದೆ ಎಂದರು.
ಈ ಸಂಧರ್ಭದಲ್ಲಿ ಸಚಿವ ಕೋಟಾ ಶ್ರಿನಿವಾಸ್ ಪೂಜಾರಿ,ವಿಶ್ವೇಶರ ಕಾಗೇರಿ,ಉಡುಪಿ ಶಾಸಕ ರಘಪತಿ ಭಟ್,ಯಶ್ಪಾಲ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
https://www.facebook.com/193132874519477/posts/777600236072735/







