ನಮ್ಮಂತೇ ಹಾಡಲು ಯತ್ನಿಸುವ ಗಾಯಕರು ಅಲ್ಪಾವಧಿ ಮಟ್ಟಿಗೆ ಜನರನ್ನು ಆಕರ್ಷಿಸಬಹುದು. ಇದು ಕೊನೆಯವರೆಗೂ ಇರುವುದಿಲ್ಲ: ರಾಣು ಮಂಡಲ್ ಗಾಯನದ ಬಗ್ಗೆ ಲತಾ ಮಂಗೇಶ್ಕರ್ -Vishwanews24

ಮುಂಬೈ: ರಾಣು ಮಂಡಲ್​ ಅವರ ಬಗ್ಗೆ ಗಾಯಕಿ ಲತಾ ಮಂಗೇಶ್ಕರ್​ ಅವರು  ಸಂತಸ ವ್ಯಕ್ತಪಡಿಸಿದ್ದರೂ ನೇರವಾಗಿ ಕಿವಿಮಾತೊಂದನ್ನು ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಮಾತನಾಡುತ್ತ, ಯಾರಾದರೂ ನನ್ನ ಹೆಸರು ಮತ್ತು ಕೆಲಸವನ್ನು ಹೇಳಿಕೊಂಡು ಲಾಭ ಪಡೆದರೆ ಅದು ನನ್ನ ಅದೃಷ್ಟವೆಂದೇ ಭಾವಿಸುತ್ತೇನೆ. ಆದರೆ, ಹೀಗೆ […]

ರಾಷ್ಟ್ರದ ಹಿತದೃಷ್ಟಿಯಿಂದ ಮನಮೋಹನ್ ಸಿಂಗ್ ಅವರ ಸಲಹೆಗಳನ್ನು ಕೇಳಿಸಿಕೊಳ್ಳಬೇಕು : ಬಿಜೆಪಿಗೆ ಶಿವಸೇನೆ ಕಿವಿಮಾತು -Vishwanews24

ಮುಂಬೈ, : ಆರ್ಥಿಕತೆ ನಿಭಾಯಿಸುವ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೀಡಿರುವ ಎಚ್ಚರಿಕೆಯ ಮಾತನ್ನು ಆಲಿಸಿ ಎಂದು ಶಿವಸೇನೆ ಬಿಜೆಪಿಗೆ ಕಿವಿಮಾತು ಹೇಳಿದೆ. ಮನಮೋಹನ್ ಸಿಂಗ್ ಅವರ ಸಲಹೆಯನ್ನು ಕೇಳುವುದರಲ್ಲಿ ರಾಷ್ಟ್ರೀಯ ಹಿತಾಸಕ್ತಿ ಇದೆ. ಆರ್ಥಿಕ ಕುಸಿತದ ಸುತ್ತ ಯಾವುದೇ […]

ಕಾಂಗ್ರೆಸ್ ಪಕ್ಷವನ್ನು ಮುಗಿಸುವ ಸಂಚಿನಿಂದ ನನ್ನನ್ನು ಬಂಧಿಸಲಾಗಿದೆ : ಬಂಧನದ ನಂತರ ಡಿಕೆ ಶಿ -Vishwanews24

ನವದೆಹಲಿ: ಬಿಜೆಪಿಯ ಷಡ್ಯಂತ್ರ್ಯದಿಂದ  ತಮ್ಮ ಬಂಧನವಾಗಿರುವುದಾಗಿ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿಕೆ ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ. ಇಡಿ ಬಂಧನದ ನಂತರ  ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷವನ್ನು ಮುಗಿಸುವ ಸಂಚಿನಿಂದ ರಾಜಕೀಯ ಪ್ರೇರಿತದಿಂದ ಬಂಧಿಸಲಾಗಿದೆ ಎಂದು ಹೇಳಿದರು. ಇದಕ್ಕೂ ಮುನ್ನ ಟ್ವೀಟ್ […]

ದೇಶದ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರ ಡಿಕೆ ಶಿವಕುಮಾರ್ ಅವರನ್ನು ಬಂಧಿಸಿ ಹೈಡ್ರಾಮಾ ಸೃಷ್ಟಿ ಮಾಡಿದೆ : ಕಾಂಗ್ರೆಸ್ ಆಕ್ರೋಶ -Vishwanews24

ನವದೆಹಲಿ: ಆರ್ಥಿಕ ಹಿಂಜರಿತದಿಂದ ದೇಶ ಜರ್ಜರಿತವಾಗುತ್ತಿದ್ದು, ಇದನ್ನು ಮರೆಮಾಚಲು ದೇಶದ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರ ಡಿಕೆ ಶಿವಕುಮಾರ್ ಅವರನ್ನು ಬಂಧಿಸಿ ಹೈಡ್ರಾಮಾ ಸೃಷ್ಟಿ ಮಾಡಿದೆ ಎಂದು ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಸುದ್ದಿಸಂಸ್ಛೆಯೊಂದಿಗೆ ಮಾತನಾಡಿರುವ ಕಾಂಗ್ರೆಸ್ […]

ನೂರು ಬಾರಿ ಸುಳ್ಳು ಹೇಳೋದ್ರಿಂದ ಅದು ಸತ್ಯವಾಗೋದಿಲ್ಲ : ದೇಶದ ಆರ್ಥಿಕ ಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಪ್ರಿಯಾಂಕಾ ಗಾಂಧಿ ವಾದ್ರಾ -Vishwanews24

ನವದೆಹಲಿ: ದೇಶದ ಆರ್ಥಿಕ ಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ಇದು ‘ಐತಿಹಾಸಿಕ ಆರ್ಥಿಕ ಕುಸಿತ’ ಎಂದು ಬಣ್ಣಿಸಿದ್ದಾರೆ. ನೂರು ಬಾರಿ ಸುಳ್ಳು ಹೇಳೋದ್ರಿಂದ ಅದು ಸತ್ಯವಾಗೋದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಬಿಜೆಪಿ ಸರ್ಕಾರ ಐತಿಹಾಸಿಕ ಆರ್ಥಿಕ ಕುಸಿತವನ್ನು ಒಪ್ಪಿಕೊಳ್ಳಬೇಕು. ಜೊತೆಗೆ […]

ಸೆ.19 ರಂದು ಫ್ರಾನ್ಸ್ ನ ರಫೇಲ್ ಸಮರ ವಿಮಾನ ಭಾರತೀಯ ವಾಯುಪಡೆಗೆ ಸೇರ್ಪಡೆ -Vishwanews24

ನವದೆಹಲಿ:  ಫ್ರಾನ್ಸ್ ನ ರಫೇಲ್ ಸಮರ ವಿಮಾನ ಭಾರತೀಯ ವಾಯುಪಡೆಗೆ ಇದೇ 9 ರಂದು ಔಪಚಾರಿಕವಾಗಿ ಸೇರ್ಪಡೆಯಾಗಲಿದೆ. ಇದಕ್ಕಾಗಿ ರಕ್ಷಣಾ  ಸಚಿವ  ರಾಜನಾಥ್ ಸಿಂಗ್ ಮತ್ತು  ಮುಖ್ಯ ವಾಯುಪಡೆಯ ಮುಖ್ಯಸ್ಥ ಬಿಎಸ್ ಧನೋವಾ ಫ್ರಾನ್ಸ್ ಗೆ  ಭೇಟಿ ನೀಡಲಿದ್ದಾರೆ  ಎನ್ನಲಾಗಿದೆ.   9 […]

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಸಲ್ಲಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡದ ಹಿರಿಯ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ -Vishwanews24

ಮುಂಬಯಿ: ಭಾರತ ಮಹಿಳಾ ಕ್ರಿಕೆಟ್ ತಂಡದ ಹಿರಿಯ ಅನುಭವಿ ಆಟಗಾರ್ತಿ ಮಿಥಾಲಿ ರಾಜ್, ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಸಲ್ಲಿಸಿದ್ದಾರೆ. ಭಾರತೀಯ ಮಹಿಳಾ ಟ್ವೆಂಟಿ-20 ಕ್ರಿಕೆಟ್ ತಂಡದ ಮಾಜಿ ನಾಯಕಿಯೂ ಆಗಿರುವ ಮಿಥಾಲಿ 32 ಟ್ವೆಂಟಿ-20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.  ಹಾಗೆಯೇ […]

5 ಬಂಗಾರದ ಪದಕಗಳೊಂದಿಗೆ ಐಎಸ್ಎಸ್​ಎಫ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಭಾರತ -Vishwanews24

ನವದೆಹಲಿ: ಬ್ರೆಜಿಲ್​ನ ರಿಯೋ ಡಿ ಜನೈರೋದಲ್ಲಿ ಮುಕ್ತಾಯಗೊಂಡ ಇಂಟರ್​​ನ್ಯಾಷನಲ್ ಶೂಟಿಂಗ್ ಸ್ಪೋರ್ಟ್​ ಫೆಡರೇಷನ್ (ಐಎಸ್ಎಸ್​ಎಫ್) ವರ್ಲ್ಡ್ ಕಪ್ ಅಭಿಯಾನದಲ್ಲಿ 5 ಬಂಗಾರದ ಪದಕಗಳೊಂದಿಗೆ ಭಾರತ ಟೂರ್ನಿಗೆ ವಿದಾಯ ಹೇಳಿದೆ. ಕ್ರೀಡಾಕೂಟದ ಅಂತಿಮ ದಿನವಾದ ಮಂಗಳವಾರ ಮನು ಬಾರ್ಕರ್ ಮತ್ತು ಸೌರಭ್ ಚೌಧರಿ […]

ವೈದ್ಯರ ಮೇಲೆ ಹಲ್ಲೆ ನಡೆಸಿದರೆ 10 ವರ್ಷ ಜೈಲು, 10 ಲಕ್ಷ ದಂಡ : ಕೇಂದ್ರ ಸರ್ಕಾರದಿಂದ ಹೊಸ ಕಾನೂನು ಜಾರಿಗೆ -Vishwanews24

ನವದೆಹಲಿ:ಇನ್ನು ಮುಂದೆ ಕರ್ತವ್ಯ ನಿರತ ವೈದ್ಯರು ಅಥವಾ ಆರೋಗ್ಯ ವೃತ್ತಿಪರರ ಮೇಲೆ ಹಲ್ಲೆ ಅಥವಾ ದಾಳಿ ನಡೆಸಿದರೆ 10 ವರ್ಷ ಜೈಲು ಶಿಕ್ಷೆ ಅಥವಾ 10 ಲಕ್ಷ ರೂ ದಂಡ ಕಟ್ಟಬೇಕಾಗುತ್ತದೆ. ಕರ್ತವ್ಯ ನಿರತ ವೈದ್ಯರು ಅಥವಾ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ಅಥವಾ ದಾಳಿ […]

ಪಾಕಿಸ್ತಾನ ಭಯೋತ್ಪಾದನೆ ನಿಲ್ಲಿಸುವವರೆಗೆ ಸಂಧಾನ ಮಾತುಕತೆಯ ಪ್ರಶ್ನೆಯೇ ಇಲ್ಲ : ವಿದೇಶಾಂಗ ಸಚಿವ ಎಸ್ ಜೈಶಂಕರ್ -Vishwanews24

ಬ್ರುಸೆಲ್: ಪಾಕಿಸ್ತಾನ ಬಹಿರಂಗವಾಗಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದ್ದು, ಭಯೋತ್ಪಾದಕ ಗುಂಪುಗಳನ್ನು ಹುಟ್ಟುಹಾಕುವುದು ಮತ್ತು ಅಂತಹ ಸಂಘಟನೆಗಳಿಗೆ ಹಣಕಾಸಿನ ನೆರವು ನೀಡುವುದನ್ನು ನಿಲ್ಲಿಸುವವರೆಗೆ ಆ ದೇಶದೊಂದಿಗೆ ಸಂಧಾನ ಮಾತುಕತೆಯ ಪ್ರಶ್ನೆಯೇ ಇಲ್ಲ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. […]