ನಮ್ಮಂತೇ ಹಾಡಲು ಯತ್ನಿಸುವ ಗಾಯಕರು ಅಲ್ಪಾವಧಿ ಮಟ್ಟಿಗೆ ಜನರನ್ನು ಆಕರ್ಷಿಸಬಹುದು. ಇದು ಕೊನೆಯವರೆಗೂ ಇರುವುದಿಲ್ಲ: ರಾಣು ಮಂಡಲ್ ಗಾಯನದ ಬಗ್ಗೆ ಲತಾ ಮಂಗೇಶ್ಕರ್ -Vishwanews24
ಮುಂಬೈ: ರಾಣು ಮಂಡಲ್ ಅವರ ಬಗ್ಗೆ ಗಾಯಕಿ ಲತಾ ಮಂಗೇಶ್ಕರ್ ಅವರು ಸಂತಸ ವ್ಯಕ್ತಪಡಿಸಿದ್ದರೂ ನೇರವಾಗಿ ಕಿವಿಮಾತೊಂದನ್ನು ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ಮಾತನಾಡುತ್ತ, ಯಾರಾದರೂ ನನ್ನ ಹೆಸರು ಮತ್ತು ಕೆಲಸವನ್ನು ಹೇಳಿಕೊಂಡು ಲಾಭ ಪಡೆದರೆ ಅದು ನನ್ನ ಅದೃಷ್ಟವೆಂದೇ ಭಾವಿಸುತ್ತೇನೆ. ಆದರೆ, ಹೀಗೆ ಅನುಕರಣೆ ಮಾಡುವುದು ಒಳ್ಳೆಯದಲ್ಲ ಎಂದಿದ್ದಾರೆ.
ಅನುಕರಣೆ ಮಾಡುವುದು ವಿಶ್ವಾಸಾರ್ಹವಲ್ಲ, ಹಾಗೇ ಅದು ಬಾಳಿಕೆ ಬರುವುದೂ ಇಲ್ಲ. ನಾನು ಹಾಡಿರುವ ಹಾಡುಗಳಾಗಿರಲಿ, ಕಿಶೋರ್ ಕುಮಾರ್, ಮೊಹಮ್ಮದ್ ರಫಿ, ಮುಕೇಶ್ ಅಥವಾ ಆಶಾ ಭೋಸ್ಲೆಯವರು ಹಾಡಿರುವ ಹಾಡುಗಳೇ ಆಗಿರಲಿ. ಅವುಗಳನ್ನು ನಮ್ಮಂತೇ ಹಾಡಲು ಯತ್ನಿಸುವ ಗಾಯಕರು ಅಲ್ಪಾವಧಿ ಮಟ್ಟಿಗೆ ಜನರನ್ನು ಆಕರ್ಷಿಸಬಹುದು. ಇದು ಕೊನೆಯವರೆಗೂ ಇರುವುದಿಲ್ಲ ಎಂದಿದ್ದಾರೆ.
ನಿಮ್ಮ ಮೂಲ ಧ್ವನಿ ಹೇಗಿದೆಯೋ ಹಾಗೇ ಹಾಡಿ. ನನ್ನ ಮತ್ತು ನನ್ನ ಸಹೋದ್ಯೋಗಿಗಳ ಎವರ್ಗ್ರೀನ್ ಹಾಡುಗಳನ್ನು ಹಾಡಿ. ಆದರೆ, ಒಂದು ಹಂತದ ಬಳಿಕ ಅವರದ್ದೇ ಆದ ಹಾಡುಗಳನ್ನು ಹಾಡಬೇಕು ಎಂದಿದ್ದಾರೆ.
