Category: ಉಡುಪಿ
ಹಿರಿಯಡ್ಕ: ಹುಸೇನಬ್ಬ ಸಂಶಯಾಸ್ಪದ ಸಾವೀನ ಹಿನ್ನಲೆ ಸಬ್ ಇನ್ಸ್ ಪೆಕ್ಟರ್ ಅಮಾನತು
ಹಿರಿಯಡ್ಕ: ಬುಧವಾರ ಜಾನುವಾರು ವ್ಯಾಪರಿ ಹುಸೇನಬ್ಬ(61) ಸಂಶಯಾಸ್ಪದ ಸಾವಿನ ಪ್ರಕರಣದ ಹಿನ್ನಲೆ ಕರ್ತವ್ಯ ಲೋಪದಡಿಯಲ್ಲಿ ಹಿರಿಯಡ್ಕ ಠಾಣೆಯ ಸಬ್ ಇನ್ಸ್ ಪೆಕ್ಟರ್ ಡಿ.ಎನ್ ಕುಮಾರನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ರಮ ಕೈಗೊಂಡ ಬಗ್ಗೆ ತಿಳಿಸಿದ್ದಾರೆ. […]
ಯಾವ ಪಕ್ಷಗಳ ಬಗ್ಗೆಯೂ ನನಗೆ ಒಳ್ಳೆ ಅಭಿಪ್ರಾಯವಿಲ್ಲ: ಪೇಜಾವರ ಶ್ರೀ
ಉಡುಪಿ: ರಾಜಕೀಯ ಪಕ್ಷಗಳ ಇಂದಿನ ಆಪರೇಷನ್, ರೆಸಾರ್ಟ್ ರಾಜಕಾರಣದಿಂದಾಗಿ ಪ್ರಜಾಪ್ರಭುತ್ವ ವಿಕೃತಗೊಂಡಿದೆ. ಹೀಗಾಗಿ ಯಾವುದೇ ಪಕ್ಷಗಳ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿಲ್ಲ ಎಂದು ಉಡುಪಿಯ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿರುವ ಅವರು, “ಕುಮಾರಸ್ವಾಮಿ ಅವರು ಅನುಭವಿಗಳು. […]
ದಕ್ಷಿಣ ಕನ್ನಡ ಜಿಲ್ಲೆಗೆ ಖಡಕ್ ಎಸ್ಪಿ ಅಣ್ಣಾಮಲೈ ಬರಲಿದ್ದಾರೆಯೇ…??
ಮಂಗಳೂರು : ಖಡಕ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿ ವರ್ಗಾವಣೆ ಆಗಲಿರುವ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿರುವ ಅವರು ಜಿಲ್ಲೆಯಲ್ಲಿನ ಅನೇಕ ಅಕ್ರಮ ಚಟುವಟಿಕೆಗಳಿಗೆ […]
ಸೊರಕೆ ಅಧಿಕಾರ ದುರ್ಬಳಕೆ ಫಲ ಹೆಜಮಾಡಿ -ಪಡುಬಿದ್ರಿ ಅವೈಜ್ಞಾನಿಕ ಸೇತುವೆ : ಶೋಭಾ
ಪಡುಬಿದ್ರಿ : “ಹೆಜಮಾಡಿ ಸಮುದ್ರ ತೀರದ ಮುಟ್ಟಾಲುವೆ ಬಳಿ ಹೆಜಮಾಡಿ ಹಾಗೂ ಪಡುಬಿದ್ರಿ ಸಂಪರ್ಕ ರಸ್ತೆ ನಡೆಸುವ ನಿಟ್ಟಿನಲ್ಲಿ ಮಾಜಿ ಶಾಸಕರ ಉಸ್ತುವಾರಿಯಲ್ಲಿ ನಡೆದ ಸೇತುವೆ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಇದು ಅಂದಿನ ಶಾಸಕರ ಅಧಿಕಾರ ದುರುಪಯೋಗದ ಫಲ” ಎಂದು ಸಂಸದೆ ಶೋಭಾ […]
ಕಾಪು ಸಿಡಿಲು ಬಡಿದು ಎರಡು ದನಗಳ ಸಾವು, ಇನ್ನೊಂದು ಗಂಭೀರ
ಕಾಪು, : ಸಿಡಿಲು ಬಿಡಿದ ಪರಿಣಾಮ ಒಂದು ಕರು ಹಾಗೂ ಹಸುವೊಂದು ಮೃತಪಟ್ಟರೆ, ಇನ್ನೊಂದರ ಸ್ಥಿತಿ ಗಂಭೀರವಾಗಿರುವ ಘಟನೆ ಕಾಪುವಿನ ಪಡುಗ್ರಾಮದ ಲೈಟ್ ಹೌಸ್ ರೋಡ್ ನಲ್ಲಿ ಮಂಗಳವಾರ ನಡೆದಿದೆ. ಇಲ್ಲಿನ ಲೈಟ್ ಹೌಸ್ ರೋಡ್ ನಿವಾಸಿ ಶಂಸುದ್ದೀನ್ ಎಂಬವರ ಮನೆಯಲ್ಲಿದ್ದ […]
” ಅನಾರೋಗ್ಯ ಪೀಡಿತ , ಅಸಹಾಯಕ ಮಹಿಳೆಯ ರಕ್ಷಣೆ, ಜಿಲ್ಲಾಸ್ಪತ್ರೆಗೆ ದಾಖಲು “
ಉಡುಪಿ: – ಸುಮಾರು 45 ವರ್ಷದ ಮಹಿಳೆಯು ಕಳೆದ ಒಂದು ವಾರದಿಂದ ಸರಿಯಾದ ಆಹಾರವಿಲ್ಲದೆ , ಅನಾರೋಗ್ಯದಿಂದ ಅಸಹಾಯಕರಾಗಿ ಉಡುಪಿಯ ಬಸ್ ಸ್ಟಾಂಡ್ ನಲ್ಲಿ ಬಿದ್ದಿಕೊಂಡಿರುವುದು ಸಮಾಜ ಸೇವಕ ವಿಶು ಶೆಟ್ಟಿಯವರ ಗಮನಕ್ಕೆ ಬಂದಿರುತ್ತದೆ. ಸ್ಪಂದಿಸಿದ ವಿಶುಶೆಟ್ಟಿಯವರು ಆ ಕೂಡಲೆ ಮಹಿಳೆಯನ್ನು […]
ಸರಕಾರ ನರಸತ್ತಂತಿದೆ ,ಅಧಿಕಾರಿಗಳು ನಿಧಾನಗತಿಯಲ್ಲಿದ್ದಾರೆ ಉಡುಪಿಯಲ್ಲಿ ಸಂಸದೆ ಶೋಬಾ ಕರಂದ್ಲಾಜೆ ಕಿಡಿ
ಉಡುಪಿ: ರಾಜ್ಯದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಷ್ಟೇ ಸೀಮಿತವಾಗಿರುವ ಸರಕಾರ ಸತ್ತಿದೆ, ಅಧಿಕಾರಿಗಳು ನಿಧಾನಗತಿಯಲ್ಲಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ. ಅವರು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ 10 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ರೈತರ ರಾಷ್ಟ್ರೀಕೃತ ಬ್ಯಾಂಕ್, […]
ಸೋಲಿನಿಂದ ಕಂಗೆಟ್ಟಿಲ್ಲ,ಸದಾ ಕಾರ್ಯಕರ್ತರ ಜತೆಗಿರುವೆ: ವಿನಯ್ ಕುಮಾರ್ ಸೊರಕೆ
ಕಾಪು: ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ದುಡಿದ ಕಾರ್ಯಕರ್ತರಿಗೆ ಕೃತಜ್ಞತಾ ಸಭೆ ಉಚ್ಚಿಲ ತುಂಬೆ ಕರ್ಕೆರ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕಾಪು ಕ್ಷೇತ್ರದ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಮಾತನಾಡಿ” ಬಿಜೆಪಿಯವರು ಕೇವಲ ಮೋದಿ […]
ಕಾಪು ನಗರಭಾಗದಲ್ಲಿ ಮರಣಗುಂಡಿಗಳ ಕಾರುಬಾರು, ಎಚ್ಚರ ಪ್ರಯಾಣಿಕರೆ ಎಚ್ಚರ…!
ಕಾಪು: ಕಾಪು ಪುರಸಭಾ ವ್ಯಾಪ್ತಿಯ ಕಳಪೆ ಒಳಚರಂಡಿ ಕಾಮಗಾರಿಯಿಂದಾಗಿ ನಿನ್ನೆ ಸುರಿದ ಭಾರಿಮಳೆಗೆ ಕಾಪು ನಗರಭಾಗದಲ್ಲಿ ಸುಮಾರು ನಾಲ್ಲು ಕಡೆ ಒಳಚರಂಡಿ ಹಾಗೂ ಮ್ಯಾನ್ ಹೋಲ್ ಕುಸಿದು ಹೋದ ಘಟನೆ ನಡೆದಿದೆ. ಘಟನೆಯಿಂದಾಗಿ ನಗರಭಾಗದೊಳಗಿನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಪ್ರಯಾಣಿಕರಿಗೆ ಮತ್ತು […]
ನೀರುಪಾಲಾದ ಬಾಲೆ ಶವವಾಗಿ ಪತ್ತೆ – ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ
ಉಡುಪಿ: ಮಂಗಳವಾರ ಸಂಜೆ ಮಳೆಯ ಹೊಡೆತಕ್ಕೆ ನೀರುಪಾಲಾದ ಬಾಲಕಿಯ ಮೃತದೇಹ ಇಂದು ಉಡುಪಿ ಜಿಲ್ಲೆ ಕಾಪು ತಾಲೂಕಿನ ಪಡುಬಿದ್ರೆಯಲ್ಲಿ ಪತ್ತೆಯಾಗಿದೆ. ನಿಧಿ ಆಚಾರ್ಯ(9) ನೀರುಪಾಲಾಗಿದ್ದ ಬಾಲಕಿಯಾಗಿದ್ದು, ಘಟನಾ ಸ್ಥಳದಿಂದ 100 ಮೀ ದೂರದಲ್ಲಿ ನಿಧಿ ಮೃತದೇಹ ಪತ್ತೆಯಾಗಿದೆ. 4ನೇ ವಿದ್ಯಾರ್ಥಿನಿ ನಿಧಿ ಆಚಾರ್ಯ […]
