Category: ಉಡುಪಿ
ಮುಂಗಾರು ಮೇಘಸ್ಪೋಟ ಮೊದಲ ದಿನವೇ ಮುಳುಗಿದ ಕರಾವಳಿ
ಮಂಗಳೂರು/ಉಡುಪಿ: ಮೆಕುನು ಚಂಡಮಾರುತದ ಪ್ರಭಾವ ತಗ್ಗಿದ ಬೆನ್ನಲ್ಲೇ ಮಂಗಳವಾರ ಕರಾವಳಿಗೆ ಅಬ್ಬರಿಸಿ ಕಾಲಿಟ್ಟ ಮುಂಗಾರು ಮಾರುತಕ್ಕೆ ಅವಿಭಜಿತ ಜಿಲ್ಲೆ ಅಕ್ಷರಶಃ ಬೆಚ್ಚಿದ್ದು,ಇಡೀ ಮಂಗಳೂರು ನಗರ ಮುಳುಗೆದ್ದಿದೆ. ಭಾರಿ ಮಳೆ ಜತೆಗೆ ಉಡುಪಿಯಲ್ಲಿ ಬಿರುಗಾಳಿ ಆರ್ಭಟದಿಂದಾಗಿ ಅಪಾರ ಹಾನಿಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರತ್ಯೇಕ ಮಳೆ […]
ಪಡುಬಿದ್ರಿ ಭಾರಿ ಮಳೆಗೆ ಕೊಚ್ಚಿ ಹೋದ ಬಾಲಕಿ,ಒರ್ವಳ ರಕ್ಷಣೆ, ಪತ್ತೆ ಕಾರ್ಯ ಪ್ರಗತಿ
ಕಾಪು: ವಿದ್ಯಾರ್ಥಿಗಳು ನೀರು ಪಾಲು. ಓರ್ವಳ ರಕ್ಷಣೆ. ಮತ್ತೊಬ್ಬಳು ನಾಪತ್ತೆ. ಪಡುಬಿದ್ರಿ ಠಾಣಾ ವ್ಯಾಪ್ತಿ ಪಾದೆಬೆಟ್ಟು ಪಟ್ಲ ಎಂಬಲ್ಲಿ ನಡೆದ ಘಟನೆ.. ಪಡುಬಿದ್ರಿ ಗಣಪತಿ ಶಾಲೆಯ ನಾಲ್ಕನೆಯ ತರಗತಿ ವಿದ್ಯಾರ್ಥಿನಿ ನಿಧಿ ತನ್ನ ಅಕ್ಕ ನಿಶಾ ಜೊತೆ ಪಟ್ಲ ಕಿರುಸೇತುವೆ ದಾಟುತ್ತಿದ್ದ […]
ಉಡುಪಿ ಜಿಲ್ಲೆ ಇಂದು,ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಘೋಷನೆ.
ಉಡುಪಿ, : ಕಳೆದ ಎರಡು ದಿನಗಳಿಂದ ಉಡುಪಿ ಜಿಲ್ಲಾದ್ಯಂತ ಸುರಿಯುತ್ತಿರುವ ಭಾರೀ ಗಾಳಿಮಳೆಯ ಹಿನ್ನೆಲೆಯಲ್ಲಿ ಇಂದು(ಮೇ 29) ಮತ್ತು ನಾಳೆ(ಮೇ 30) ಜಿಲ್ಲೆಯ ಎಲ್ಲ ಶಾಲೆ- ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ […]
ಮೆಕುನು ಚಂಡಮಾರುತಕ್ಕೆ ಕರಾವಳಿ ತತ್ತರ – ನದಿಯಂತಾದ ರಸ್ತೆ, ಎರಡು ದಿನ ಮಳೆ
ಮಂಗಳೂರು: ಮೆಕುನು ಚಂಡಮಾರುತ ಪರಿಣಾಮದಿಂದಾಗಿ ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಮಂಗಳೂರಿನಲ್ಲಿ ನೆರೆಯ ಭೀತಿ ಆವರಿಸಿದೆ. ಮಂಗಳೂರು ನಗರದ ಹಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ರಸ್ತೆಯಿಡೀ ನೀರಿನಿಂದ ಆವೃತವಾಗಿದೆ. ತಗ್ಗು ಪ್ರದೇಶದ ಅಂಗಡಿ, ವ್ಯಾಪಾರ ಕೇಂದ್ರಗಳಿಗೆ ನೀರು ನುಗ್ಗಿದೆ. ಹಲವು ಮನೆಗಳಿಗೂ […]
ಅರಬ್ಬೀ ಸಮುದ್ರದ ನೀರಿನ ಬಣ್ಣ ಬದಲು- ಸ್ಥಳೀಯರಲ್ಲಿ ಆತಂಕ
ಉಡುಪಿ: ಜಿಲ್ಲೆಯಲ್ಲಿ ಅರಬ್ಬಿ ಸಮುದ್ರ ಅಬ್ಬರಿಸುತ್ತಿದೆ. ಮೆಕ್ನೂ ಚಂಡಮಾರುತ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಸಮುದ್ರದ ನೀರು ಬಣ್ಣ ಬದಲಾಯಿಸಿದ್ದು ಸ್ಥಳೀಯರು ಆತಂಕಗೊಂಡಿದ್ದಾರೆ. ಗಲ್ಫ್ ರಾಷ್ಟ್ರಗಳನ್ನು ಬೆಚ್ಚಿಬೀಳಿಸಿರುವ ಚಂಡಮಾರುತ, ಈಗ ಕರ್ನಾಟಕ ಕರಾವಳಿಯನ್ನು ನಡುಗಿಸುತ್ತಿದೆ. ಕಡಲ ಅಬ್ಬರ ತೀರದಿಂದ ಅರ್ಧ ಕಿ.ಮೀ ದೂರದಿಂದಲೇ […]
ಗಾಳಿ ಮಳೆಯ ರೌದ್ರ ನರ್ತನ ಕೊರಂಗ್ರಾಪಡಿಯಲ್ಲಿ ಮನೆಗುರುಳಿದ ದೈತ್ಯ ಮರ,ಅಪಾರ ನಷ್ಟ
ಉಡುಪಿ: ನಿನ್ನೆ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಉದ್ಯವಾರ ಕೊರಂಗ್ರಪಾಡಿ ವಿಜಯ ಬ್ಯಾಂಕ್ ಬಳಿ ನಿವಾಸಿ ಇಂದಿರಾ ಅವರ ಮನೆಗೆ ಮರವೊಂದು ಉರುಳಿ ಬಿದ್ದ ಪರಿಣಾಮ ಮನೆಯ ಮಾಡು ಕುಸಿದು ಸುಮಾರು ಮೂರು ಲಕ್ಷ ರೂಪಾಯಿ ನಷ್ಟ ಸಂಭವಿಸಿರುವ ಬಗ್ಗೆ […]
ಮುಂದುವರಿದ ಗಾಳಿ ಮಳೆ, ಉದ್ಯಾವರದಲ್ಲಿ ಶಾಲೆಗಳಿಗೆ ರಜೆ ಘೋಷಣೆ..
ಉಡುಪಿ,: ಉದ್ಯಾವರ ಪರಿಸರದಲ್ಲಿ ನಿನ್ನೆ ರಾತ್ರಿ ಭಾರೀ ಗಾಳಿಯೊಂದಿಗೆ ಸುರಿದ ಮಳೆಗೆ ಹಲವೆಡೆ ಬೃಹತ್ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಇದರಿಂದ ಹಲವೆಡೆ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿರುವ ಹಿನ್ನೆಲೆಯಲ್ಲಿ ಉದ್ಯಾವರ ಪರಿಸರದ ಶಾಲೆಗಳಿಗೆ ಇಂದು ರಜೆ ಸಾರಲಾಗಿದೆ. ರಾತ್ರಿ ಬೀಸಿದ ಭಾರೀ […]
ಕರ್ನಾಟಕ ಬಂದ್ ಬೆಂಬಲಿಸಿ ಕಾಪುವಿನಲ್ಲಿ ಬಿಜೆಪಿ ಪ್ರತಿಭಟನೆ,. ಕಾಂಗ್ರೇಸ್ ಮತ್ತು ಜೆಡಿಎಸ್ ನ ಅನೈತಿಕ ಸಂಬಂಧದ ಪರಮಾವಧಿ ಎಂದು ಲೇವಡಿ.
ಕಾಪು: ರಾಜ್ಯ ಬಿಜೆಪಿ ರೈತರ ಸಾಲ ಮನ್ನ ಆಗ್ರಹಿಸಿ ಇಂದು ಕರ್ನಾಟಕ ಬಂದ್ ಕೊಟ್ಟಿರುವ ಹಿನ್ನಲೆಯಲ್ಲಿ ಬಂದ್ ಬೆಂಬಲಿಸಿ ಕಾಪುವಿನಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಉದ್ದೇಶಿಸಿ ಕಾಪು ಶಾಸಕ ಲಾಲಾಜಿ ಮೆಂಡನ್ ಮಾತನಾಡಿ” ಚುನಾವಣಾ ಪೂರ್ವಭಾವಿಯಾಗಿ ನೀಡಿದ ಪ್ರಣಾಲಿಕೆ […]
ಮೂಳೂರಿನಲ್ಲಿ ಗಾಳಿಮಳೆಯ ರೌದ್ರವತಾರ, ಮನೆಮೇಲೆ ಮರಬಿದ್ದು ನಷ್ಟ.
ಕಾಪು : ಭಾನುವಾರ ತಡರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಕಾಪು ಸಮೀಪದ ಮೂಳೂರಿನಲ್ಲಿ ವಿಶ್ವನಾಥ ಸನಿಲ್ ರ ಕಾಂತುಮನೆಗೆ ಭಾರಿ ಗಾತ್ರದ ಹಲಸಿನ ಮರವೊಂದು ಉರುಳಿ ಬಿದ್ದ ಘಟನೆ ನಡೆದಿದೆ ಈ ಪರಿಣಾಮ ಮನೆಯ ಹಂಚುಗಳು ಮತ್ತು ದೈವದ ಕಟ್ಟೆ […]
ತಡರಾತ್ರಿ ಬಿರುಗಾಳಿ ಮಳೆ ರೌದ್ರಾವತಾರ – ಉಡುಪಿ ಜನಜೀವನ ಅಸ್ತವ್ಯಸ್ಥ
ಉಡುಪಿ: ಭಾನುವಾರ ತಡರಾತ್ರಿ ಉಡುಪಿ ಜಿಲ್ಲೆಯಾದ್ಯಂತ ಸುರಿದ ಬಿರುಗಾಳಿ ಮಳೆಗೆ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಗುಡುಗು ಸಿಡಿಲಿನಿಂದ ಕೂಡಿದ ಗಾಳಿ ಮಳೆಗೆ ಅನೇಕ ಕಡೆಗಳಲ್ಲಿ ಮರಗಳು ಧರೆಗುರುಳಿವೆ. ಭಾರೀ ಗಾಳಿಗೆ ವಿದ್ಯುತ್ ಕಂಬಗಳೂ ಬಿದ್ದಿದೆ. ಪರಿಣಾಮ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ […]
