‘DOLO 650’ ಮಾತ್ರೆ ತಯಾರಿಕಾ ಮತ್ತು ಮಾರಾಟ ಘಟಕಗಳ ಮೇಲೆ ಐಟಿ ದಾಳಿ – Vishwanews24
‘DOLO 650’ ಮಾತ್ರೆ ತಯಾರಿಕಾ ಮತ್ತು ಮಾರಾಟ ಘಟಕಗಳ ಮೇಲೆ ಐಟಿ ದಾಳಿ – Vishwanews24
ಬೆಂಗಳೂರು: ‘DOLO 650’ ಮಾತ್ರೆ ತಯಾರಿಕಾ ಮತ್ತು ಮಾರಾಟ ಘಟಕಗಳ ಮೇಲೆ ಬೆಂಗಳೂರು ಸೇರಿ ದೇಶಾದ್ಯಂತ 40ಕ್ಕೂ ಹೆಚ್ಚು ಕಡೆ ಬುಧವಾರ ಬೆಳ್ಳಂಬೆಳಗ್ಗೆ ಐಟಿ(ಆದಾಯ ತೆರಿಗೆ) ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸಂಸ್ಥೆಯ ಸಿಎಂಡಿ ದಿಲೀಪ್ ಸುರಾನಾ, ಡೈರೆಕ್ಟರ್ ಆನಂದ್ ಸುರಾನ ನಿವಾಸದ ಮೇಲೂ ಐಟಿ ದಾಳಿ ಆಗಿದೆ.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಮೈಕ್ರೋ ಲ್ಯಾಬ್ಸ್ ಕೇಂದ್ರ ಕಚೇರಿ ಸೇರಿ ತಮಿಳುನಾಡು, ಗೋವಾ, ಪಂಜಾಬ್, ಮುಂಬೈ, ದೆಹಲಿ, ಸಿಕ್ಕಿಂ ಸೇರಿ ದೇಶದ 40 ಕಡೆಗಳಲ್ಲಿ ಐಟಿ ದಾಳಿಯಾಗಿದೆ. ಕರೊನಾ ಸಂದರ್ಭದಲ್ಲಿ ಡೋಲೊ 650 ಮಾತ್ರೆ ಅತೀ ಹೆಚ್ಚು ಮಾರಾಟವಾಗಿತ್ತು. ಈ ಮಾತ್ರೆಗೆ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇದೆ.
ಕರೊನಾ ವೇಳೆ 350 ಕೋಟಿ ಡೋಲೊ ಮಾತ್ರೆ ಮಾರಾಟವಾಗಿದ್ದು, ಇದರಿಂದ ಮೈಕ್ರೋ ಲ್ಯಾಬ್ಸ್ ಕಂಪನಿಗೆ 570 ಕೋಟಿ ರೂ. ಆದಾಯ ಗಳಿಸಿತ್ತು. ಇದಕ್ಕೆ ಸರಿಯಾಗಿ ಆದಾಯ ತೆರಿಗೆ ಪಾವತಿಸಿರಲಿಲ್ಲ. ಈ ಹಿನ್ನೆಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
