EXCLUSIVE – ಬಿಜೆಪಿ ಸಚಿವ ಈಶ್ವರಪ್ಪ ಕಮಿಷನ್ ಡಿಮಾಂಡ್ ಗೆ ಬೇಸತ್ತು ಕೇಸರಿ ಶಾಲು ಧರಿಸಿಕೊಂಡೆ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಬಿಜೆಪಿ ಕಾರ್ಯಕರ್ತ ಸಂತೋಷ ಪಾಟೀಲ್: vishwanews24
ಬಿಜೆಪಿ ಸಚಿವ ಈಶ್ವರಪ್ಪ ಕಮಿಷನ್ ಡಿಮಾಂಡ್ ಗೆ ಬೇಸತ್ತು ಕೇಸರಿ ಶಾಲು ಧರಿಸಿಕೊಂಡೆ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಬಿಜೆಪಿ ಕಾರ್ಯಕರ್ತ ಸಂತೋಷ ಪಾಟೀಲ್: vishwanews24
ಉಡುಪಿ: ಸಂತೋಷ್ ಪಾಟೀಲ್ ಮೃತದೇಹ ಇರುವ ಶಾಂಭವಿ ಲಾಡ್ಜ್ ಗೆ ಸಂತೋಷ್ ಪಾಟೀಲ್ ಕುಟುಂಬಸ್ಥರು ಆಗಮಿಸಿದ್ದಾರೆ. ಎಫ್ ಎಸ್ ಎಲ್ ಟೀಮ್ ಆಗಮಿಸಿರುವ ಹಿನ್ನೆಲೆಯಲ್ಲಿ ಲಾಡ್ಜ್ ಗೆ ಬಂದಿದ್ದಾರೆ ಸಂತೋಷ ಪಾಟೀಲ್ ಕುಟುಂಬಸ್ಥರು.
ಸಂತೋಷ್ ಕುಟುಂಬಸ್ಥರು ಬಂದಿರುವ ಹಿನ್ನೆಲೆ ಅವರ ಸಮ್ಮುಖದಲ್ಲಿ ಎಫ್.ಎಸ್.ಎಲ್ ತಂಡ ಪಂಚನಾಮೆ ಆರಂಭಿಸಿದೆ. ಸಂತೋಷ್ ಸಂಬಂಧಿಕರ ನೇತೃತ್ವದಲ್ಲಿ ಪಂಚನಾಮೆ ನಡೆಯುತ್ತಿದೆ. ಲಾಡ್ಜ್ ಒಳಗೆ ಎಫ್.ಎಸ್.ಎಲ್ ಸಿಬ್ಬಂದಿ, ಎಎಸ್ಪಿ ಸಿದ್ದಲಿಂಗಪ್ಪ, ತನಿಖಾಧಿಕಾರಿ ಪ್ರಮೋದ್ ಪಂಚನಾಮೆಯಲ್ಲಿ ಭಾಗಿಯಾಗಿದ್ದಾರೆ.

ಸ್ಥಳದಲ್ಲಿ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ದನ್,IGP ದೆವ್ ಜ್ಯೋತಿ ರೇ ಇದ್ದಾರೆ.
ಇನ್ನು ಹಾಸಿಗೆ ಮೇಲೆ ಮಲಗಿರುವಂತೆ ಸಂತೋಷ್ ಪಾಟೀಲ್ ಶವವಿದೆ. ಹಸಿರು ಶರ್ಟ್ ಮತ್ತು ರೆಗ್ಯೂಲರ್ ಪ್ಯಾಂಟ್, ಕೇಸರಿ ಶಾಲು ಹಾಕಿದ ಸ್ಥಿತಿಯಲ್ಲಿ ಮೃತದೇಹವಿದ್ದು, ರೂಂ ನ ಡಸ್ಟ್ ಬಿನ್ ನಲ್ಲಿ ವಿಷದ ಬಾಟಲಿ ತರದ ಡಬ್ಬಿ ಪತ್ತೆಯಾಗಿದೆ.
ಉಡುಪಿ ಲಾಡ್ಜ್ ಗೆ ಬಂದ ಎಫ್ಎಸ್ಎಲ್ ತಂಡ : ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ : vishwanews24
