ಐದು ಕೋಟಿ ವೆಚ್ಚದ ಪೆಲತ್ತೂರು ನಿತ್ಯಾನಂದ ಆಶ್ರಮಕ್ಕೆ ನಾಳೆ ಭೂಮಿ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ:vishwanews24
ಐದು ಕೋಟಿ ವೆಚ್ಚದ ಪೆಲತ್ತೂರು ನಿತ್ಯಾನಂದ ಆಶ್ರಮಕ್ಕೆ ನಾಳೆ ಭೂಮಿ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ:vishwanews24
ಉಡುಪಿ: ಕಾರ್ಕಳ ತಾಲೂಕಿನ ಗುಡ್ಡೆ ಅಂಗಡಿ ಕಣಜಾರು ಗ್ರಾಮದ ಪೆಲತ್ತೂರು ಎಂಬಲ್ಲಿ ಐದು ಕೋಟಿ ವೆಚ್ಚದ ನಿತ್ಯಾನಂದ ಆಶ್ರಮಕ್ಕೆ ಮಾರ್ಚ್ ೨೮ ರಂದು ಬೆಳಗ್ಗೆ ೧೦ ಗಂಟೆಗೆ ಹಾರನಹಳ್ಳಿ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರಿಂದ ಭೂಮಿ ಪೂಜೆ ನಡೆಯಲಿದೆ. https://www.facebook.com/snspelathur

ಪೆಲತ್ತೂರು ನಿತ್ಯಾನಂದ ಸಂಸ್ಥಾ ಸಂಸ್ಥಾಪಕ ಉದಯಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದು ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಸ್ವಾಮೀಜಿ , ಶಂಕರಪುರ ದ್ವಾರಕಮಯಿ ಸಾಯಿಮಂದಿರದ ಗುರೂಜಿ ಸಾಯಿ ಈಶ್ವರ್,ಶ್ರೀ ಶ್ರೀಧರಕೃಪಾ ಆಯುರ್ವೇದ ಆಶ್ರಮದ ಕುಂಭಾಶಿಯ ಸದ್ಗುರು ಆಚಾರ್ಯ ಡಾ .ಕೇ ಶ್ರೀಧರದಾಸ್ ಗುರೂಜಿ, ಕೊಡವೂರು ಸಾಯಿಬಾಬಾ ಮಂದಿರದ ಅಧ್ಯಕ್ಷ ಕೊಡವೂರು ದಿವಾಕರ ಶೆಟ್ಟಿ, ಶ್ರೀಮತಿ ನಿರ್ಮಲ ಹರಿಕೃಷ್ಣ ಮತ್ತು ಹರಿಕೃಷ್ಣ ರಾವ್ ಉಡುಪಿ, ಮಾಜಿ ತಾ.ಪಂ. ಸದಸ್ಯ ವಿಕ್ರಮ್ ಹೆಗ್ಡೆ,ನೀರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಾಲಿನಿ ರವೀಂದ್ರ, ಡಿ. ಗಣೇಶ್ ದೇವದಾಸ್ ಪೈ ಉಪಸ್ಥಿತರಿರುವರು. ಭೂ ದಾನದ ಪ್ರಯುಕ್ತ ಶ್ರೀಮತಿ ಕಲ್ಯಾಣಿ ಮತ್ತುಶ್ಯಾಮನಾಯಕ್ ನಿತ್ಯಾನಂದ ಪ್ರಸಾದ ಜರಗಲಿದೆ. ಈ ಕಾರ್ಯಕ್ರಮದ ಅಂಗವಾಗಿ ಸ್ವಾಮೀಜಿಯವರಿಂದ ಬೆಳಿಗ್ಗೆ ೧೦ ಗಂಟೆಗೆ ಆರ್ಶೀವಚನ ಮತ್ತು ಮಧ್ಯಾಹ್ನ ೧೨.೩೦ ಕ್ಕೆ ಸರಿಯಾಗಿ ಮಹಾಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ .https://www.facebook.com/VishwaNews24

