KSRTC ಯ ಮೊದಲ ಎಲೆಕ್ಟ್ರಿಕ್ ಬಸ್‌ಗೆ ಚಾಲನೆ : ಮೊಬೈಲ್‌ ಚಾರ್ಜಿಂಗ್‌, ಟಿವಿ, ಹವಾನಿಯಂತ್ರಿತ ವ್ಯವಸ್ಥೆ – Vishwanews24

Featured, ರಾಜ್ಯ ನ್ಯೂಸ್

ಕೆಎಸ್‌ಆರ್‌ಟಿಸಿಯ ಮೊದಲ ಎಲೆಕ್ಟ್ರಿಕ್ ಬಸ್‌ಗೆ ಚಾಲನೆ : ಮೊಬೈಲ್‌ ಚಾರ್ಜಿಂಗ್‌, ಟಿವಿ, ಹವಾನಿಯಂತ್ರಿತ ವ್ಯವಸ್ಥೆ

ಬೆಂಗಳೂರು: ಇಂದು ಕೆಎಸ್‌ಆರ್‌ಟಿಸಿಯ ಮೊದಲ ಎಲೆಕ್ಟ್ರಿಕ್ ಬಸ್‌ಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಯಿತು. ಬೆಂಗಳೂರಿನಿಂದ  ರಾಮನಗರಕ್ಕೆ  ಈ ಬಸ್‌ ಸಂಚಾರ ಮಾಡುತ್ತೆ.

ಶಾಂತಿನಗರದ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಿಂದ EV ಪವರ್ ಪ್ಲಸ್ ಹೊರಟಿತ್ತು. ಮೇಕ್ ಇನ್ ಇಂಡಿಯಾ ವಿದ್ಯುತ್ ಬಸ್ ಫೇಮ್-2 ಯೋಜನೆಯಡಿ 50 ಅಂತರ ನಗರ ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್‌ಗಳನ್ನು ಕಾರ್ಯಚರಣೆಗೊಳಿಸಿದೆ.

KSRTC ಇಲೆಕ್ಟ್ರಿಕ್ ಬಸ್

ಓಲೆಕ್ಟಾ ಕಂಪನಿಯು ಈ ಬಸ್‌ನ್ನು ನಿಯೋಜನೆ‌ ಮಾಡಿದೆ. ದೇಶದ ಮೊದಲನೇ ಅಂತರ ನಗರ ಇಲೆಕ್ಟ್ರಿಕ್ ವಾಹನ ಇದಾಗಿದೆ. ಡಿಸೆಂಬರ್ 31ರಂದು ಈ ಬಸ್‌ನ್ನು ಸಾರಿಗೆ ಸಚಿವ ಶ್ರೀರಾಮುಲು ಲೋಕಾರ್ಪಣೆ‌ ಮಾಡಿದ್ದರು. ಹೊಸ ಬಸ್‌ಗೆ EV ಪವರ್ ಪ್ಲಸ್ ಎಂದು KSRTC ಹೆಸರಿಟ್ಟಿದೆ.

BJP ಸರ್ಕಾರ ಇರೋದು ಎರಡು ತಿಂಗಳು ; ಅದಕ್ಕೆ ಪ್ರತಿಮೆ ಸ್ಥಾಪನೆ ಮಾಡ್ತಿದ್ದಾರೆ: ಡಿಕೆಶಿ – Vishwanews24

 

KSRTC EV ಪವರ್ ಪ್ಲಸ್ ವಿಶೇಷತೆ ಏನು?

1. ಎರಡೂವರೆ ತಾಸು ಚಾರ್ಜ್ ಮಾಡಿದರೆ 300 km ಕ್ರಮಿಸುವಷ್ಟು ಸಾಮರ್ಥ್ಯ
2. ಬಸ್ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ
3. ನೂತನ ತಂತ್ರಜ್ಞಾನವಾದ ರಿ ಜನರೇಷನ್ ಸಿಸ್ಟಮ್ ಅಳವಡಿಕೆ
4. ಸಂಚರಿಸುವ ಹೊತ್ತಲ್ಲೇ ಅರ್ಧದಷ್ಟು ಬ್ಯಾಟರಿ ರಿ ಚಾರ್ಜ್ ಆಗುವ ರಿ ಜನರೇಷನ್ ಆಗುವ ಸಿಸ್ಟಮ್
5. ಬಸ್ ಒಳಗೆ ಪ್ರಯಾಣಿಕರ ಅನುಕೂಲಕ್ಕೆ ಮೊಬೈಲ್ ಚಾರ್ಜಿಂಗ್ ಸ್ಪಾಟ್ಸ್
6. ಮನರಂಜನೆಗಾಗಿ ಬಸ್ ನಲ್ಲಿ ಎರಡು ಟಿವಿ ಅಳವಡಿಕೆ
7. ಬಸ್ ನಲ್ಲಿ 43 + 2 ಸೀಟಿಂಗ್ ಕೆಪಾಸಿಟಿಯಿದೆ
8. ಬಸ್ ಸಂಪೂರ್ಣ ಸೆನ್ಸಾರ್ ಹಿಡಿತದಲ್ಲಿ ಇರಲಿದೆ
9. ಫ್ರಂಟ್ ಲಾಗ್ & ಬ್ಯಾಕ್ ಲಾಗ್ ಕ್ಯಾಮೆರಾ ವ್ಯವಸ್ಥೆ
10. ಡ್ರೈವರ್ ಎಂಡ್ ಸಂಪೂರ್ಣವಾಗಿ ಡಿಜಿಟಲೈಸ್ಡ್ ಸಿಸ್ಟಮ್

ಮಕರ ಜ್ಯೋತಿ ದರ್ಶನಕ್ಕೆ ಸಜ್ಜಾದ ಶಬರಿಮಲೆ : ಭಾರಿ ಸಂಖ್ಯೆಯಲ್ಲಿ ಭಕ್ತರ ಆಗಮನ – Vishwanews24

ಕೆಎಸ್‌ಆರ್‌ಟಿಸಿ ಎಂಡಿ‌ ಅನ್ಬುಕುಮಾರ್ ಮಾತನಾಡಿ, ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕ ಸಂಚಾರ ಮಾಡುತ್ತದೆ. ಮೊದಲ ಬಸ್ ಇಂದು ಟ್ರಾಯಲ್ ರನ್ ಮಾಡಲಾಗುತ್ತೆ. ಬೆಂಗಳೂರಿನಿಂದ ದಾವಣಗೆರೆವರೆಗೂ ಪ್ರಯೋಗಿಕವಾಗಿ ಸಂಚಾರ ಮಾಡುತ್ತೆ. ಸೋಮವಾರದಿಂದ ವಾಣಿಜ್ಯ ಸಂಚಾರ ಶುರುವಾಗುತ್ತೆ. ಬೆಂಗಳೂರು-ಮೈಸೂರು ಬಸ್ ಸಂಚಾರ ಆರಂಭವಾಗುತ್ತೆ. ಈ ತಿಂಗಳ‌‌ ಕೊನೆಯಲ್ಲಿ ಇನ್ನಷ್ಟು ಕಡೆ ಬಸ್ ಬಿಡಲಾಗುತ್ತೆ. ಮೈಸೂರು-ಬೆಂಗಳೂರಿಗೆ 300 ರೂಪಾಯಿ‌‌ ದರ‌ ನಿಗದಿ‌ ಮಾಡಿದ್ದೇವೆ. ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್ ಬಸ್ ಖರೀದಿ‌‌ ಮಾಡಲಾಗಿದೆ. ರಾಜ್ಯದ 6 ಕಡೆ ಚಾರ್ಜಿಂಗ್ ಪಾಯಿಂಟ್ ಮಾಡಲಾಗುತ್ತೆ ಎಂದರು.

Join our Whatsapp group by clicking the below link 👇👇

https://chat.whatsapp.com/KfUmhXQKZb114i4QHNvqEK 

Leave a Reply