NIA ದಾಳಿ ವಿರೋಧಿಸಿ ಸುರತ್ಕಲ್ ಬಳಿ ಹೆದ್ದಾರಿ ತಡೆ : ಶಾಸಕ ಭರತ್ ತೀವ್ರ ಆಕ್ರೋಶ ; ಸೂಕ್ತ ಕ್ರಮಕ್ಕೆ ಆಗ್ರಹ – Vishwanews24
NIA ದಾಳಿ ವಿರೋಧಿಸಿ ಸುರತ್ಕಲ್ ಬಳಿ ಹೆದ್ದಾರಿ ತಡೆ : ಶಾಸಕ ಭರತ್ ತೀವ್ರ ಆಕ್ರೋಶ -ಸೂಕ್ತ ಕ್ರಮಕ್ಕೆ ಆಗ್ರಹ
ಮಂಗಳೂರು: ಪಿಎಫ್ಐ ಹಾಗೂ ಎಸ್ಡಿಪಿಐ ಕಛೇರಿ ಮೇಲಿನ ದಾಳಿ ಹಾಗೂ ಪ್ರಮುಖ ನಾಯಕರ ಬಂಧನ ವಿರೋಧಿಸಿ ಸುರತ್ಕಲ್ ಗೋವಿಂದ ದಾಸ್ ಕಾಲೇಜು ಬಳಿ ಸಂಘಟನೆಯ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು.
ಈ ಸಂದರ್ಭ ಕೆಲ ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತು. ಕೂಡಲೇ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿ ನಿಯಂತ್ರಿಸಿ ಪ್ರತಿಭಟನಾಕಾರರನ್ನು ಚದುರಿಸಿದರು.
ಇದನ್ನೂ ಓದಿ : ಅನವಶ್ಯಕ ಚರ್ಚೆ ಬೇಡ, ಸಹನೆಯನ್ನು ಕಾಪಾಡಿ..ನೋಡಿ ಇಂದಿನ ದಿನ ಭವಿಷ್ಯ..ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564
ಸಂಘಟನೆಯ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಸೇರಿ ಏಕಾಏಕಿ ಹೆದ್ದಾರಿ ತಡೆ ನಡೆಸಿರುವುದನ್ನು ಶಾಸಕ ಭರತ್ ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಂಗಳೂರು: ಮಳಲಿ ಮಸೀದಿ ವಿವಾದ : ಸೆಪ್ಟೆಂಬರ್ 27ಕ್ಕೆ ತೀರ್ಪು ಪ್ರಕಟ – Vishwanews24
