PFI ನಿಷೇಧ : ನವರಾತ್ರಿ ಸಂದರ್ಭ ದೇಶಕ್ಕೆ ಶುಭಸುದ್ದಿ ;  ನಮ್ಮ ಸಹೋದರ ಪ್ರವೀಣ್ ನೆಟ್ಟಾರು ಮತ್ತು ಹರ್ಷ ಹತ್ಯೆಗೆ ನ್ಯಾಯ ಸಿಕ್ಕಿದೆ : ಯಶ್ ಪಾಲ್ ಸುವರ್ಣ

Featured, ಉಡುಪಿ

PFI ನಿಷೇಧ : ನವರಾತ್ರಿ ಸಂದರ್ಭ ದೇಶಕ್ಕೆ ಶುಭಸುದ್ದಿ ;  ನಮ್ಮ ಸಹೋದರ ಪ್ರವೀಣ್ ನೆಟ್ಟಾರು ಮತ್ತು ಹರ್ಷ ಹತ್ಯೆಗೆ ನ್ಯಾಯ ಸಿಕ್ಕಿದೆ

ದೇಶವಿರೋಧಿ ಚಟುವಟಿಕೆಯಲ್ಲಿ ಎಸ್ ಡಿಪಿಐ ಶಾಮೀಲಾಗಿದ್ದರೆ ಕೇಂದ್ರ ಬ್ಯಾನ್ ಮಾಡಲಿದೆ..

ಕಠಿಣ ಕ್ರಮ ಮೋದಿ ಸರಕಾರದಿಂದ ಮಾತ್ರ ಸಾಧ್ಯ..

ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಸತತ ಪ್ರಯತ್ನ ಪಟ್ಟಿದ್ದಾರೆ..

ಎನ್ ಐಎ ಮತ್ತು ಎನ್ ಐ ಎ ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ ಯಶ್ ಪಾಲ್ ಸುವರ್ಣ

ಉಡುಪಿ: ‘ಕಾನೂನು ಬಾಹಿರ ಸಂಘಟನೆ ಬ್ಯಾನ್ ಮಾಡಿದ್ದರಿಂದ ನಮ್ಮ ಸಹೋದರ ಪ್ರವೀಣ್ ನೆಟ್ಟಾರು ಮತ್ತು ಹರ್ಷ ಹತ್ಯೆಗೆ ನ್ಯಾಯ ಸಿಕ್ಕಿದೆ. ಎನ್‌ ಐ ಎ ಕಾರ್ಯಾಚರಣೆಯಿಂದ ಫಲ ಸಿಕ್ಕಿದೆ ಎನ್ನುವುದು ನನ್ನ ಭಾವನೆ. ಇದಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಸತತ ಪ್ರಯತ್ನ ಪಟ್ಟಿದ್ದಾರೆ’ ಎಂದು ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ” ಹೇಳಿದ್ದಾರೆ.

“ಕಾನೂನು ಬಾಹಿರ ಚಟುವಟಿಕೆ ಮಾಡುವ ಸಂಘಟನೆಗಳನ್ನು ಬ್ಯಾನ್ ಮಾಡಲಾಗಿದೆ. ಪಿಎಫ್ಐ ದೇಶದ ಪರ, ಸಮಾಜದ ಉದ್ಧಾರಕ್ಕೆ ಎಂದೂ ಕೆಲಸ ಮಾಡಿಲ್ಲ. ಗಲಭೆ ಸೃಷ್ಟಿಸೋದೆ ಪಿಎಫ್ ಐ ಕೆಲಸ. ಎಸ್ ಡಿಪಿಐ ಒಂದು ರಾಜಕೀಯ ಪಕ್ಷ. ದೇಶವಿರೋಧಿ ಚಟುವಟಿಕೆಯಲ್ಲಿ ಎಸ್ ಡಿಪಿಐ ಶಾಮೀಲಾಗಿದ್ದರೆ ಕೇಂದ್ರ ಬ್ಯಾನ್ ಮಾಡಲಿದೆ” ಎಂದು ಹೇಳಿದ್ದಾರೆ.

ಉಡುಪಿಯಲ್ಲಿ ಆರಂಭವಾದ ಹಿಜಾಬ್ ಪ್ರಕರಣ ಕೂಡ PFI ನಿಷೇಧಕ್ಕೆ ಒಂದು ಕಾರಣ : ಶಾಸಕ ರಘುಪತಿ ಭಟ್ – Vishwanews24

ಇದೇ ವೇಳೆ ದೇಶಾದ್ಯಂತ ಕಾರ್ಯಾಚರಣೆ ಮಾಡಿದ ಎನ್ ಐಎ ಮತ್ತು ಎನ್ ಐ ಎ ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಮಾತಾಂಧ ಶಕ್ತಿಗಳನ್ನು ದೇಶದಲ್ಲಿ ನಿಷೇಧ ಮಾಡಲಾಗಿದೆ. ಕಠಿಣ ಕ್ರಮ ಮೋದಿ ಸರಕಾರದಿಂದ ಮಾತ್ರ ಸಾಧ್ಯ. ನವರಾತ್ರಿ ಸಂದರ್ಭ ದೇಶಕ್ಕೆ ಶುಭಸುದ್ದಿ ನೀಡಿದ್ದಾರೆ. ನವರಾತ್ರಿ ಸಂದರ್ಭ ದೇಶದ್ರೋಹಿಗಳನ್ನು ಮಟ್ಟ ಹಾಕುವ ನಿರ್ಧಾರ ಮಾಡಲಾಗಿದೆ. ಇದು ಇಡೀ ದೇಶದ ಜನ ಸಿಹಿ ಹಂಚುವ ಕ್ಷಣ, ಎನ್ ಐಎ ತನಿಖೆ ಸಂದರ್ಭ ಹಲವಾರು ವಿಚಾರ ಬೆಳಕಿಗೆ ಬಂದಿದೆ. ಹಿಜಾಬ್ ನ ಬೆನ್ನೆಲುಬು ಸಂಘಟನೆಯನ್ನು ಬ್ಯಾನ್ ಮಾಡಲಾಗಿದೆ‌. ಕರಾವಳಿ ಭಾಗದಲ್ಲಿ ಶಾಂತಿಯುತವಾಗಿರಲು ಎನ್ ಐಎ ಗೆ ಬೆಂಬಲಿಸುತ್ತೇವೆ. ಅಮಿತ್ ಶಾ ಸೂಕ್ತ ದಾಖಲೆಗಳನ್ನು ಪಡೆದು ಕ್ರಮ ಕೈಗೊಂಡಿದ್ದಾರೆ.

ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವ ಸಂಘಟನೆಗೆ ದೇಶದಲ್ಲಿ ಅವಕಾಶ ಇಲ್ಲ. ವಿದೇಶಿ ಹಣ ವರ್ಗಾವಣೆ, ಹಿಂಸೆ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕಾಂಗ್ರೆಸ್ ಸರಕಾರ ಪಿಎಫ್ ಐ ಗೆ ಬೆಂಬಲವಾಗಿ ನಿಂತಿತ್ತು. ದುಷ್ಕೃತ್ಯ ದೇಶದ್ರೋಹಿ ಚಟುವಟಿಕೆಗೆ ಕಾಂಗ್ರೆಸ್ ಕಾರಣ. ಸಿದ್ದರಾಮಯ್ಯ ಸರಕಾರ 150 ಜನರ ಕೇಸು ವಾಪಾಸ್ ತೆಗೆದಿತ್ತು.

ಕರಾವಳಿ ಭಾಗ ಶಾಂತವಾಗಿರಲು ಇನ್ನು ಮುಂದೆಯೂ ಎನ್ ಎ ಏಜೆನ್ಸಿ ಗೆ ಸಹಕಾರ ನೀಡಲು ಬದ್ದರಿದ್ದವೆ ಎಂದು ಹೇಳಿದ್ದಾರೆ.

ಭಾರತ್‌ ಜೋಡೋ ಐಕ್ಯತಾ ಯಾತ್ರೆ – ಗಾಂಧೀಜಿ ಬ್ರಿಟಿಷರನ್ನು ದೇಶ ಬಿಟ್ಟು ತೊಲಗಿಸಿದಂತೆ ರಾಹುಲ್‌ ಗಾಂಧಿಯಿಂದ ಬಿಜೆಪಿ ಅಧಿಕಾರದಿಂದ ತೊಲಗಲಿದೆ : ಮಯೂರ್‌ ಜಯಕುಮಾರ್‌ – Vishwanews24

Leave a Reply