Post Office Jobs 2022-23: ಅರ್ಜಿ ಸಲ್ಲಿಸಲು ಡಿ.14 ಕೊನೇ ದಿನ – Vishwanews24
Post Office Jobs 2022-23: ಅರ್ಜಿ ಸಲ್ಲಿಸಲು ಡಿ.14 ಕೊನೇ ದಿನ
ನವದೆಹಲಿ: ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ನ್ಯೂಸ್. ಅಂಚೆ ಇಲಾಖೆ(Post Office)ಯಿಂದ 60,544 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, 10ನೇ ತರಗತಿ ಪಾಸಾದವರೂ ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೌದು, ಭಾರತೀಯ ಅಂಚೆ ವೃತ್ತ ಭಾರತ ಸರ್ಕಾರದ ಸಂವಹನ ಇಲಾಖೆ ನವದೆಹಲಿಯು ಇತ್ತೀಚಿನ ಉದ್ಯೋಗಗಳ ಅಧಿಸೂಚನೆಯನ್ನು ಘೋಷಿಸಿದ್ದು, 60,544 ಮೇಲ್ ಗಾರ್ಡ್(Mail Guard), ಪೋಸ್ಟ್ಮ್ಯಾನ್(Postman) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.
ಮುಂಬೈ: ಶಾಲಾ ಪ್ರವಾಸಕ್ಕೆ ತೆರಳಿದ್ದ ಮಕ್ಕಳ ಬಸ್ ಪಲ್ಟಿ – ಇಬ್ಬರು ವಿದ್ಯಾರ್ಥಿಗಳು ಮೃತ್ಯು – Vishwanews24
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುತ್ತದೆ. 10ನೇ ತರಗತಿ ಪಾಸಾಗಿರುವ ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರಿ ಹುದ್ದೆ ಹುಡುಕುತ್ತಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14/12/2022.
ಅರ್ಹತೆ, ಪರೀಕ್ಷೆಯ ದಿನಾಂಕ, ಅರ್ಜಿ ಸಲ್ಲಿಸುವುದು ಹೇಗೆ?, ವಯಸ್ಸಿನ ಮಿತಿ, ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು, ಪ್ರವೇಶ ಕಾರ್ಡ್, ಫಲಿತಾಂಶ, ಪಠ್ಯಕ್ರಮ, ಉತ್ತರ ಕೀ ಮತ್ತು ಹೆಚ್ಚಿನ ಇತರ ವಿವರಗಳಿಗಾಗಿ ನಿಮ್ಮ ಅಧಿಕೃತ ವೆಬ್ಸೈಟ್: www.appost.in ಪರಿಶೀಲಿಸಿ..
ಮ್ಯಾಂಡಸ್ ಚಂಡಮಾರುತ : ರಾಜ್ಯದಲ್ಲಿ ಇನ್ನೂ 3 ದಿನ ಮಳೆ, 15 ಜಿಲ್ಲೆಗಳಲ್ಲಿ `ಯಲ್ಲೋ ಅಲರ್ಟ್’ ಘೋಷಣೆ – Vishwanews24
