RRR ಸಿನಿಮಾದ ‘ನಾಟು ನಾಟು‘ ಹಾಡಿಗೆ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೌರವ – Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್, ರಾಷ್ಟ್ರ ನ್ಯೂಸ್

RRR ಸಿನಿಮಾದ ‘ನಾಟು ನಾಟು‘ ಹಾಡಿಗೆ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೌರವ

ವಾಷಿಂಗ್ಟನ್‌: ಎಸ್‌.ಎಸ್‌ ರಾಜಮೌಳಿ ನಿರ್ದೇಶನದ ಜ್ಯೂನಿಯರ್‌ ಎನ್. ಟಿ.ಆರ್ ಮತ್ತು ರಾಮ್ ಚರಣ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಆರ್‌.ಆರ್.ಆರ್‌ ಸಿನಿಮಾಗೆ ಮತ್ತೊಂದು ಗರಿ ಲಭಿಸಿದೆ.

ಸಿನಿಮಾದ ‘ನಾಟು ನಾಟು‘ ಹಾಡಿಗೆ 2023ರ ಗೋಲ್ಡನ್‌ ಗ್ಲೋಬ್‌ ಅವಾರ್ಡ್ಸ್‌ ಪ್ರಾಪ್ತವಾಗಿದೆ. ‘ಬೆಸ್ಟ್‌ ಒರಿಜಿನಲ್‌ ಸಾಂಗ್‌‘ ವಿಭಾಗದಲ್ಲಿ ಈ ಹಾಡಿಗೆ ಪ್ರಶಸ್ತಿ ಲಭಿಸಿದೆ. ತೆಲುಗು ಹಾಡಿಗೆ ಈ ಗೌರವ ಲಭಿಸಿದೆ.

ತೆಲುಗು ಭಾಷೆಯ ‘ನಾಟು ನಾಟು‘ ಹಾಡನ್ನು ದಿಗ್ಗಜ ಸಂಗೀತ ನಿರ್ದೇಶಕ ಎಂ.ಎಂ ಕೀರವಾಣಿ ಅವರು ಸಂಯೋಜಿಸಿದ್ದು, ಕಾಲ ಭೈರವ ಹಾಗೂ ರಾಹುಲ್‌ ಸಿಪ್ಲಿಗುಂಜ್‌ ಅವರು ಬರೆದಿದ್ದಾರೆ.

ಬೆಳ್ತಂಗಡಿ: ನದಿಯಲ್ಲಿ ಕುಳಿತ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ – Vishwanews24

Golden Globes 2023: ಅತ್ಯುತ್ತಮ ಒರಿಜಿನಲ್ ಸಾಂಗ್ ಪ್ರಶಸ್ತಿ ಬಾಚಿಕೊಂಡ ಆರ್​ಆರ್​ಆರ್​ನ ನಾಟು ನಾಟು ಹಾಡು

ಇಂಗ್ಲಿಷ್ ಹೊರತಾದ ಅತ್ಯುತ್ತಮ ಸಿನಿಮಾ’ ಹಾಗೂ ‘ಅತ್ಯುತ್ತಮ ಹಾಡು’ ವಿಭಾಗದಲ್ಲಿ ಈ ಚಿತ್ರ ಆಯ್ಕೆಯಾಗಿತ್ತು. ಹಲವು ಇಂಗ್ಲಿಷೇತರ ಸಿನಿಮಾಗಳನ್ನು ಹಿಂದಿಕ್ಕಿ ಇದೀಗ ಅತ್ಯುತ್ತಮ ಹಾಡು ವಿಭಾಗದಲ್ಲಿ ‘ನಾಟು ನಾಟು‘ ಹಾಡು ಪ್ರಶಸ್ತಿ ಬಾಚಿಕೊಂಡಿದೆ.

RRR' ಚಿತ್ರದ 'Naatu Naatu' ಗೀತೆಗೆ ವಿಶ್ವಮನ್ನಣೆ- Kannada Prabha

ಇನ್ನು ಪ‍್ರಶಸ್ತಿ ಗೆದ್ದ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ‘ಎಂತಹ ಐತಿಹಾಸಿಕ ಸಾಧನೆ! ಗೋಲ್ಡನ್ ಗ್ಲೋಬ್ಸ್ ಅತ್ಯುತ್ತಮ ಮೂಲ ಹಾಡು – ಮೋಷನ್ ಪಿಕ್ಚರ್ ಪ್ರಶಸ್ತಿ ಲಭಿಸಿದೆ. ಕೀರವಾಣಿ ಅವರಿಗೆ, ರಾಜಮೌಳಿ ಅವರಿಗೆ ಹಾಗೂ ಆರ್‌.ಆರ್.ಆರ್ ಸಿನಿಮಾ ತಂಡಕ್ಕೆ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು! ಭಾರತವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ‘ ಎಂದು ಮೆಗಾಸ್ಟಾರ್‌ ಚಿರಂಜೀವಿ ಟ್ವೀಟ್‌ ಮಾಡಿದ್ದಾರೆ.

ಉಡುಪಿ : ಜ.20ರಿಂದ 22ರವರೆಗೆ ಮಲ್ಪೆಯಲ್ಲಿ ಬೀಚ್‌ ಉತ್ಸವ  – Vishwanews24

Leave a Reply