RSS ‌ನ‌ ಪ್ರಧಾನ ಕಾರ್ಯದರ್ಶಿಯಾಗಿ ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಆಯ್ಕೆ -Vishwanews24

Featured, ರಾಜ್ಯ ನ್ಯೂಸ್

RSS ‌ನ‌ ಪ್ರಧಾನ ಕಾರ್ಯದರ್ಶಿಯಾಗಿ ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಆಯ್ಕೆ -Vishwanews24

ಬೆಂಗಳೂರು: ಆರ್‌ಎಸ್‌ಎಸ್‌ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ದಲ್ಲಿ ದತ್ತಾತ್ರೇಯ ಹೊಸಬಾಳೆಯವರ ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ)ಯಾಗಿ ಆಯ್ಕೆ ಮಾಡಲಾಯಿತು.

ಇದು ಆರ್‌ಎಸ್‌ಎಸ್‌ನ ಎರಡನೇ ಅತ್ಯುನ್ನತ ಜವಾಬ್ದಾರಿ ಆಗಿದ್ದು ಹೆಚ್ಚಿನ ಜವಾಬ್ಧಾರಿ ಇದೀಗ ಕನ್ನಡಿಗ ಹೊಸಬಾಳೆ ಹೆಗಲಿಗೇರಿದೆ.
ದತ್ತಾತ್ರೇಯ ಹೊಸಬಾಳೆಯವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಸಬಾಳೆಯವರು. ಕಾಲೇಜು ಶಿಕ್ಷಣದ ನಂತರ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ : ಮಂಗಳೂರು ಕಪಿಲ ಗೋಶಾಲೆ :ತಾತ್ಕಾಲಿಕ ನಿರ್ಮಾಣಕ್ಕಾಗಿ 1 ಲಕ್ಷ ರೂ. ಚೆಕ್‌ ನೀಡಿದ ಮೋಯ್ದಿನ್‌ ಬಾವಾ -Vishwanews24

ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.RSSನಲ್ಲಿ ಸರಸಂಘಚಾಲಕ್ ಹಾಗೂ ಸರಕಾರ್ಯವಾಹ ಇವೆರಡೂ ಅತ್ಯುನ್ನತ ಹುದ್ದೆ ಹಾಗೂ ಜವಾಬ್ದಾರಿಯುತವಾಗಿವೆ. ಡಾ. ಮೋಹನ್ ಭಾಗವತ್ RSSನ ಸರ ಸಂಘ ಚಾಲಕರಾಗಿದ್ದು, ಭೈಯಾಜಿ ಜೋಶಿ 2009ರಿಂದ ಸರಕಾರ್ಯವಾಹರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಇದೀಗ ಈ ಜವಾಬ್ಧಾರಿ ಇವರಿಗೆ ಸಿಕ್ಕಿದೆ. ಈ ಹಿಂದೆ ಕರ್ನಾಟಕದಿಂದ ಹೋ.ವೇ.ಶೇಷಾದ್ರಿ ಅವರು ಸರಕಾರ್ಯವಾಹರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು. ಈಗ ಮತ್ತೊಮ್ಮೆ ಕನ್ನಡಿಗ ದತ್ತಾತ್ರೇಯ ಹೊಸಬಾಳೆಯವರು ಇದೇ ಹುದ್ದೆಗೆ ನೇಮಕಗೊಂಡಿದ್ದಾರೆ.

ಇದನ್ನೂ ಓದಿ : ಉಪಚುನಾವಣೆಗೆ ಕೊರೊನಾ ನಿಯಮ ಹಾಗೂ ಜನಸಂಖ್ಯೆ ಮಿತಿ ಅನ್ವಯಿಸುವುದಿಲ್ಲ : ಸಿಎಂ BSY -Vishwanews24