ಅತ್ಯಂತ ಕೆಟ್ಟವರ ಕೈಯಲ್ಲಿ ಅಧಿಕಾರ ಸಿಕ್ಕಿದೆ, ಪ್ರಜಾಪ್ರಭುತ್ವ ಉಳಿಸುವುದು ನಮ್ಮ ಜವಾಬ್ದಾರಿ : ಸಿದ್ದರಾಮಯ್ಯ -Vishwanews24
ಬೆಂಗಳೂರು: ಗೃಹ ಸಚಿವ ಅಮಿತ್ ಶಾ ಹೇಳುವುದೆಲ್ಲಾ ಸುಳ್ಳು. ಮೋದಿ ಪ್ರಧಾನಿಯಾಗಿ ಸುಳ್ಳು ಹೇಳ್ತಿದ್ದಾರೆ. ಅತ್ಯಂತ ಕೆಟ್ಟವರ ಕೈಯಲ್ಲಿ ಅಧಿಕಾರ ಸಿಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಸಿಎಎ ವಿರುದ್ಧದ ಮಹಿಳಾ ಕಾಂಗ್ರೆಸ್ ಕಾರ್ಯಾಗಾರದಲ್ಲಿ ಸಿದ್ದರಾಮಯ್ಯ ಮಾತನಾಡಿದರು. ಮನುಷ್ಯತ್ವ ಇಲ್ಲದವರ ಕೈಯಲ್ಲಿ ಅಧಿಕಾರವಿದೆ. ದೆಹಲಿಯಲ್ಲಿ 35 ಮಂದಿ ಸತ್ತಿದ್ದಾರೆ. ಪ್ರಚೋದನಕಾರಿ ಭಾಷಣ ಮಾಡಿದವರ ಮೇಲೆ ಕೇಸ್ ಹಾಕಿದ್ರಾ ಎಂದು ಕೇಳಿದ ಜಡ್ಜ್ ರನ್ನು ವರ್ಗಾವಣೆ ಮಾಡಿದ್ದಾರೆ. ದೆಹಲಿ ವಿವಿಗೆ ಬಿಜೆಪಿ ಅವರೇ ಒಳ ಹೋಗಿ ನುಗ್ಗಿ ಹೊಡೆದರು. ಅವರ ಮೇಲೆ ಕೇಸ್ ದಾಖಲಾಗಿಲ್ಲ. ಇವರು ಅತ್ಯಂತ ಕ್ರೂರಿಗಳು, ಸಂವಿಧಾನ ವಿರೋಧಿಗಳು ಎಂದು ಆರೋಪಿಸಿದ್ದಾರೆ.
ಇದು ಸಂವಿಧಾನ ಮತ್ತು ಮನುಸ್ಮೃತಿ ನಡುವೆ ನಡೆಯುತ್ತಿರುವ ಯುದ್ಧ. ಪ್ರಜಾಪ್ರಭುತ್ವ ಉಳಿಸುವುದು ನಮ್ಮ ಜವಾಬ್ದಾರಿ. ಸಂವಿಧಾನ ವಿರೋಧಿ ಮತ್ತು ಕಾನೂನು ವಿರುದ್ಧ ಇದ್ದರೆ ಪ್ರಶ್ನೆ ಮಾಡಲು ಅವಕಾಶ ಬಿಡಬೇಕು. ಆದರೆ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ ಎಂದ ಸಿದ್ದರಾಮಯ್ಯ ಮೋದಿ ಮತ್ತು ಅಮಿತ್ ಶಾ ವಿನಾಶಕಾರಿಗಳು. ವಿನಾಶಕಾರಿ ವಿಪರೀತ ಬುದ್ಧಿ ಅನ್ನೋ ಗಾದೆ ಇವರಿಗೆ ಅನ್ವಯಿಸುತ್ತೆ ಎಂದು ಕಿಡಿಕಾರಿದ್ದಾರೆ.
