ಇಂದು ಈ ವರ್ಷದ ಅತಿದೊಡ್ಡ ಸೂಪರ್ ಮೂನ್ ಗೋಚರ – vishwanews24
ಇಂದು ಈ ವರ್ಷದ ಅತಿದೊಡ್ಡ ಸೂಪರ್ ಮೂನ್ ಗೋಚರ
ಉಡುಪಿ: ಕಾರ್ತಿಕ ಹುಣ್ಣಿಮೆಯಾದ ನ.5 ರಂದು ಈ ವರ್ಷ ಅತಿದೊಡ್ಡ ಸೂಪರ್ ಮೂನ್ ಕಾಣಿಸಲಿದೆ.
ಶರತ್ಕಾಲದ ರಾತ್ರಿ ತಂಪು ತಂಪಾಗಿ ತೇವಭರಿತ ಹವಾಮಾನದಲ್ಲಿ ಶುಭ್ರ ಆಕಾಶ ನೋಡಲು ಆಹ್ಲಾದಕರ. ಅದರಲ್ಲೂ ಹುಣ್ಣಿಮೆ ಚಂದ್ರ ಬೆಳದಿಂಗಳ ಹಾಲು ಹೊಯ್ದಂತೆ ಕಾಣುತ್ತಾನೆ.
ಈ ವರ್ಷದ ಅಕ್ಟೋಬರ್, ನವಂಬರ್ ಹಾಗೂ ಡಿಸೆಂಬರ್ ಮೂರು ಸೂಪರ್ ಮೂನ್ಗಳಲ್ಲಿ ನ.5ರಂದು ಕಾಣುವ ಸೂಪರ್ ಮೂನ್ ಭೂಮಿಗೆ ಸಮೀಪವಿದ್ದು ದೊಡ್ಡದು. ಭೂಮಿಗೆ ದೀರ್ಘವೃತ್ತದಲ್ಲಿ 28 ದಿನಗಳಿಗೊಮ್ಮೆ ತಿರುಗುವ ಚಂದ್ರ ಭೂಮಿಗೊಮ್ಮೆ ಸಮೀಪವಾಗುತ್ತಾನೆ (3,56,400ಕಿ.ಮೀ.) ಆಗ ಹುಣ್ಣಿಮೆಯಾದಲ್ಲಿ ಚಂದ್ರ ಮಾಮೂಲಿಗಿಂತ ದೊಡ್ಡದಾಗಿ ಕಾಣುವನು.
ನ.5ರ ಹುಣ್ಣಿಮೆಯ ಚಂದ್ರ 3, 57,000 ಕಿಮೀಗೆ ಬಂದು ಸರಾಸರಿ ದೂರಕ್ಕಿಂತ 27,000 ಕಿ.ಮೀ. ಭೂಮಿಗೆ ಹತ್ತಿರ ಬರಲಿದ್ದಾನೆ. 14 ಅಂಶ ದೊಡ್ಡದಾಗಿ ಕಂಡು 27 ಅಂಶ ಹೆಚ್ಚಿನ ಬೆಳದಿಂಗಳಿಂದ ಚಂದ್ರ ಹೊಳೆಯಲಿದ್ದಾನೆ. ಅಂದು ಅಕಾಲಿಕ ಮಳೆಯಿಲ್ಲದಿದ್ದಲ್ಲಿ ನಮ್ಮ ಹುಣ್ಣಿಮೆಯ ಸೂಪರ್ ಸೂಪರ್ ಮೂನ್ , ಚಂದ್ರ ತುಂಬಾ ಖುಷಿ ಕೊಡಲಿದ್ದಾನೆ ಎಂದು ಖಗೋಳಶಾಸ್ತ್ರಜ್ಞ ಡಾ|ಎ.ಪಿ. ಭಟ್ ತಿಳಿಸಿದ್ದಾರೆ.
