ಇತಿಹಾಸ ಪ್ರಸಿದ್ದ ಪುತ್ತೂರು ಜಾತ್ರೆ ವೇಳೆ ಮುಸ್ಲಿಂ ವಿರುದ್ಧ ಹೊಸ ಅಭಿಯಾನ – Vishwanews24
ಮುಸ್ಲಿಂ ಆಟೋ, ಕ್ಯಾಬ್ಗಳನ್ನು ಬಳಕೆ ಮಾಡದಂತೆ ಹಿಂದೂ ಆಟೋ ಚಾಲಕ ಸಂಘಟನೆಗಳಿಂದ ಕೇಸರಿ ಧ್ವಜ ನೀಡುವ ಮೂಲಕ ಹೊಸ ಅಭಿಯಾನಕ್ಕೆ ಚಾಲನೆ..
ಪುತ್ತೂರು, : ಇತಿಹಾಸ ಪ್ರಸಿದ್ದ ಪುತ್ತೂರು ಜಾತ್ರೆಗೂ ಧರ್ಮ ಸಂಘರ್ಷದ ಕಿಡಿ ಹಬ್ಬಿದ್ದು, ಹಿಜಾಬ್ , ಹಲಾಲ್, ವ್ಯಾಪಾರ ನಿರ್ಬಂಧ ಬೆನ್ನಲ್ಲೇ ಇದೀಗ ಆಟೋ , ಕ್ಯಾಬ್ಗಳಿಗೂ ನಿರ್ಬಂಧ ಹೇರಲು ಮುಂದಾಗಿದ್ದಾರೆ.
ಪುತ್ತೂರು ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮುಸ್ಲಿಂ ಆಟೋ, ಕ್ಯಾಬ್ಗಳನ್ನು ಬಳಕೆ ಮಾಡದಂತೆ ಹಿಂದೂ ಆಟೋ ಚಾಲಕ ಸಂಘಟನೆಗಳಿಂದ ಕೇಸರಿ ಧ್ವಜ ನೀಡುವ ಮೂಲಕ ಹೊಸ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಈ ಬ್ಗಗೆ ಎಲ್ಲೆಡೆ ವ್ಯಾಪಕ ಚರ್ಚೆ ಆಗುತ್ತಿದ್ದು, ಧರ್ಮ ಸಂಘರ್ಷಕ್ಕೆ ಮತ್ತೊಂದು ಕಾರಣ ಸಿಕ್ಕಂತಾಗಿದೆ.


