ಇನ್ಮುಂದೆ ಮೆಟ್ರೋ ನಿಲ್ದಾಣದಲ್ಲಿ ಸಿಗಲಿದೆ ಪ್ರಿಪೇಯ್ಡ್ ಆಟೋ ಸೇವೆ – Vishwanews24

Featured, ರಾಜ್ಯ ನ್ಯೂಸ್

ಇನ್ಮುಂದೆ ಮೆಟ್ರೋ ನಿಲ್ದಾಣದಲ್ಲಿ ಸಿಗಲಿದೆ ಪ್ರಿಪೇಯ್ಡ್ ಆಟೋ ಸೇವೆ

ಬೆಂಗಳೂರು:  ಮೆಟ್ರೋ ಪ್ರಯಾಣಿಕರು ಸಂಚಾರ ಮುಗಿಸಿ ನಿಲ್ದಾಣದಿಂದ ಆಚೆ ಬಂದ್ರೆ ಹತ್ತಾರು ಆಟೋಗಳು ಕಾಣುತ್ತವೆ. ಆದರೆ ಕೆಲ ಆಟೋಗಳು ಕರೆದ ಕಡೆ ಬರಲ್ಲ, ಇನ್ನೂ ಕೆಲವರು ಕೇಳಿದ ರೇಟ್ ನೀಡೋಕೆ ಆಗಲ್ಲ. ಈ ಎಲ್ಲಾ ಸಮಸ್ಯೆಗೆ ಕೊನೆ ಕಾಣಿಸಲೇಬೇಕೆಂದು ನಮ್ಮ ಮೆಟ್ರೋ ನಿರ್ಧಾರ ಮಾಡಿದೆ..

ಹೀಗಾಗಿ ಮೆಟ್ರೋ ನಿಲ್ದಾಣದಲ್ಲೇ ಪ್ರಿಪೇಯ್ಡ್ ಆಟೋ ಸೇವೆ ಒದಗಿಸಲು ಮುಂದಾಗಿದೆ. ಟ್ರಾಫಿಕ್ ಪೊಲೀಸರ ಈ ಬಗ್ಗೆ ಗಮನ ಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದರು.

ಈ ಬಗ್ಗೆ ಇತ್ತೀಚಿನ ಸಭೆಯಲ್ಲಿ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೆಷನ್ ಲಿಮಿಟೆಡ್ ಅಧಿಕಾರಿಗಳು ಸಹ ಚರ್ಚೆ ನಡೆಸಿದರು. ಈ ವಿಚಾರವಾಗಿ ನಗರದ ಕೆಲ ನಿಲ್ದಾಣಗಳನ್ನು ಗುರುತು ಮಾಡಲಾಗಿದೆ. ಈ ಬಗ್ಗೆ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಫರ್ವೇಜ್ ಕೂಡ ಬೆಂಗಳೂರು ಸಂಚಾರಿ ಪೊಲೀಸ್ ಜಂಟಿ ಆಯುಕ್ತ ರವಿಕಾಂತೇಗೌಡರಿಗೆ ಪತ್ರ ಬರೆದಿದ್ದಾರೆ.

ಸದ್ಯ ಪೊಲೀಸ್ ಇಲಾಖೆ ಕೂಡ ಈ ಯೋಜನೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ ಎನ್ನಲಾಗ್ತಿದೆ. ಎಲ್ಲಾವು ಸರಿ ಆದರೆ ಮುಂದಿನ ತಿಂಗಳೊಳಗೆ ಬೆಂಗಳೂರಿನ ಮೆಟ್ರೋ ನಿಲ್ದಾಣಗಳ ಬಳಿ ಪ್ರಿಪೇಯ್ಡ್ ಆಟೋ ಸೇವೆ ಆರಂಭಗೊಳ್ಳಲಿದೆ.

ಸುರತ್ಕಲ್‌: ವೀರ ಸಾವರ್ಕರ್‌ ಹೆಸರಿನಲ್ಲಿ ಒಂದು ವೃತ್ತ, ಒಂದು ಸೇತುವೆ ನಿರ್ಮಿಸುವುದು ಖಚಿತ : ಶಾಸಕ ಡಾ. ವೈ. ಭರತ್‌ ಶೆಟ್ಟಿ – Vishwanews24

Leave a Reply