ಉಡುಪಿ: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಮಣಿಪಾಲದ ರಶ್ಮಿ ಸಮಂತ್ -Vishwanews24

Featured, ಉಡುಪಿ

ಉಡುಪಿ: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಮಣಿಪಾಲದ ರಶ್ಮಿ ಸಮಂತ್ -Vishwanews24

ಉಡುಪಿ: ಮಣಿಪಾಲ ಮೂಲದ ಮಣಿಪಾಲ ಎಂಐಟಿಯ ಹಳೆ ವಿದ್ಯಾರ್ಥಿ ರಶ್ಮಿ ಸಮಂತ್ ಅವರು ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ಫೆಬ್ರವರಿ 11 ರಂದು ರಶ್ಮಿ ಅವರು ಯೂನಿಯನ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದು, ಭಾರತೀಯ ಯುವತಿಯೊಬ್ಬರಿಗೆ ಈ ಗೌರವ ಪ್ರಾಪ್ತವಾಗುತ್ತಿರುವುದು ಇದೇ ಮೊದಲು.

ರಶ್ನಿ ಇತರ ಮೂರು ಮಂದಿ ಸ್ಪರ್ಧಾಳುಗಳಿಗಿಂತ ಇವರಿಗೆ ಹೆಚ್ಚು ಮತಗಳು ಲಭಿಸಿದ್ದು, ಅಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಸಾಮಂತ್‌ ಈ ಹುದ್ದೆಗಾಗಿ ಸ್ಪರ್ಧಿಸಿದ್ದ ಇತರ ಮೂವರು ಪ್ರತಿಸ್ಪರ್ಧಿಗಳ ಒಟ್ಟು ಮತಗಳಿಗಿಂತ ಹೆಚ್ಚಿನ ಮತಗಳನ್ನು ಪಡೆದುಕೊಂಡಿದ್ದಾರೆ.

ಮಂಗಳೂರು: ಖಾಸಗಿ ಆಸ್ಪತ್ರೆಯ ಶೌಚಾಲಯದಲ್ಲಿ ಕದ್ದು ವೀಡೀಯೋ ಮಾಡುತ್ತಿದ್ದ ಕಾಮುಕ ಅಬ್ದುಲ್ ಮುನೀರ್ ಬಂಧನ -Vishwanews24

ಚುನಾವಣೆಯಲ್ಲಿ 4,881 ವಿದ್ಯಾರ್ಥಿಗಳು 36,405 ಮತಗಳನ್ನು ಚಲಾಯಿಸಿದ್ದಾರೆ, ಇದು ಎಸ್‌ಯು ದಾಖಲೆಯಾಗಿದ್ದು, ಇದು ಅತಿ ಹೆಚ್ಚು ಮತದಾನವಾಗಿದೆ. ಅಧ್ಯಕ್ಷ ಸ್ಥಾನಕ್ಕಾಗಿ 3,708 ಮತಗಳಲ್ಲಿ 1,966 ಮತಗಳನ್ನು ಸಾಮಂತ್ ಪಡೆದರು, ಇತರ ಎಲ್ಲ ಅಭ್ಯರ್ಥಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭರ್ಜರಿ ಜಯಗಳಿಸಿದರು.