ಉಡುಪಿ ಉಚ್ಚಿಲ ದಸರಾ -2026 ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ; ಟ್ರೋಫಿ ಗೆದ್ದುಕೊಂಡ ಉಡುಪಿಯ ಎಕ್ಸ್ಟ್ರಿಮ್ ಡ್ಯಾನ್ಸ್ ಅಕಾಡೆಮಿ – vishwanews24
ಉಡುಪಿ ಉಚ್ಚಿಲ ದಸರಾ -2026 ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ; ಟ್ರೋಫಿ ಗೆದ್ದುಕೊಂಡ ಉಡುಪಿಯ ಎಕ್ಸ್ಟ್ರಿಮ್ ಡ್ಯಾನ್ಸ್ ಅಕಾಡೆಮಿ
ಇಂದು ಕುಸ್ತಿ ಪಂದ್ಯಾಟ, ಭಜನ್ ಪ್ಯೂಷನ್
ಕಾಪು: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ 5 ನೇ ವರ್ಷದ ಉಡುಪಿ ಉಚ್ಚಿಲ ದಸರಾ-2026 ಅಂಗ ವಾಗಿ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ “ದಸರಾ ನೃತ್ಯೋತ್ಸವ’ದಲ್ಲಿ ಉಡುಪಿಯ ಎಕ್ಸ್ಟ್ರಿಮ್ ಡ್ಯಾನ್ಸ್ ಅಕಾಡೆಮಿ ಪ್ರಥಮ ಪ್ರಶಸ್ತಿಯೊಂದಿಗೆ 1,55,555 ರೂ. ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ಗೆದ್ದುಕೊಂಡಿತು.
ಸಾಸ್ತಾನ ಸ್ಟೆಪ್ ಆ್ಯಂಡ್ ಸ್ಟೈಲ್ ಡಾನ್ಸ್ ಕ್ರೂ ದ್ವಿತೀಯ ಸ್ಥಾನ (1,05,555 ರೂ.-ಟ್ರೋಫಿ), ಮಂಗಳೂರು ಎಡ ಪದವು ಡ್ಯಾನ್ಸಿಂಗ್ ಸ್ಟಾರ್ಸ್ ಸ್ಟುಡಿಯೋ ತೃತೀಯ (55,555 ರೂ.- ಮತ್ತು ಟ್ರೋಫಿ), ಬೆಂಗಳೂರು ಎ.ಎಂ.ಡಿ.ಎಸ್. ಡ್ಯಾನ್ಸ್ ಸ್ಟುಡಿಯೋ ಚತುರ್ಥ (25,555 ರೂ.-ಟ್ರೋಫಿ ಸ್ಥಾನ ಗಳಿಸಿತು. ಭಾಗವಹಿಸಿದ ಎಲ್ಲ ತಂಡಗಳಿಗೆ 5 ಸಾ. ರೂ. ನೀಡಿ ಪ್ರೋತ್ಸಾಹಿಸಲಾಯಿತು.
ಪ್ರಶಸ್ತಿ ವಿತರಣೆ
ವಿಜೇತರಿಗೆ ಬಹುಮಾನ ವಿತರಿಸಿದ ಉಡುಪಿ ಉಚ್ಚಿಲ ದಸರಾ ರೂವಾರಿ, ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ| ಜಿ.ಶಂಕರ್, ಉಡುಪಿ ಉಚ್ಚಿಲ ದಸರಾ ಸಂಭ್ರಮೋತ್ಸವಕ್ಕೆ ನಾಡಹಬ್ಬದ ಸ್ಪರ್ಶ ನೀಡಿ, ವಿಶ್ವವ್ಯಾಪಿಯಾಗಿ ವಿಸ್ತರಿಸಲು ದಸರಾ ನೃತ್ಯೋತ್ಸವವನ್ನು ಆಯೋಜಿಸಲಾಗುತ್ತಿದೆ
ಎಂದರು.
ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿ ಕಾರಿ ರತ್ನಾಕರ್ಸಾಲ್ಯಾನ್, ಮಹಿಳಾ ವಿಭಾಗದ ಅಧ್ಯಕ್ಷೆ ಕವಿತಾ ಶರತ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ್ ಎಸ್. ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ ಮಲ್ಪೆ, ಪ್ರಧಾನ ಕಾರ್ಯದರ್ಶಿ ಸತೀಶ್ ಕುಂದರ್, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನಿಲ್, ಉದ್ಯಮಿಗಳಾದ ಸುನಿಲ್ ಜೋನಸ್, ಶೇಖರ್ಸಾಲ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ್ ಎಸ್.ಸುವರ್ಣ, ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಗೌತಮ್ ಕೋಡಿಕಲ್, ಯಜ್ಜೆಶ್ ಕರ್ಕೇರ ಮಿತ್ರಪಟ್ಟ, ದಿನೇಶ್ ಎರ್ಮಾಳು, ಪ್ರಮುಖರಾದ ಸುಗುಣಾ ಕರ್ಕೇರ, ಸತೀಶ್ ಅಮೀನ್ ಪಡುಕರೆ, ವಿಶ್ವಾಸ್ ಅಮೀನ್, ಕಿರಣ್ ಕುಮಾರ್ ಉದ್ಯಾವರ ಉಪಸ್ಥಿತರಿದ್ದರು. ರಾಜ್ಯ ಮಟ್ಟದ ಆಹ್ವಾನಿತ 16 ತಂಡಗಳು ಭಾಗವಹಿಸಿದ್ದವು.
`ಬ್ರೇಕಿಂಗ್ ಬ್ಯಾಡ್’ ಖ್ಯಾತಿಯ ಹಾಲಿವುಡ್ ನಟ ಆರ್ಜೆ ಮಿಟ್ಟೆ ನಿಧನ – vishwanews24
ಇಂದು ಕುಸ್ತಿ ಪಂದ್ಯಾಟ, ಭಜನ್ ಪ್ಯೂಷನ್
ಶ್ರೀ ಚಂದ್ರಘಂಟಾ ದೇವಿ ಆರಾಧನೆ. ಮಹಾಮಂಗಳಾರತಿ, ಮಹಾಪೂಜೆ, ಅನ್ನಸಂತರ್ಪಣೆ, ಮಧ್ಯಾಹ್ನ 2.30ರಿಂದ ಭಕ್ತಿ ಗಾನಸುಧೆ, ಭಜನೆ ಸಂಕೀರ್ತ ನೆ, ಸಂಜೆ 5 ಕ್ಕೆ ಧಾರ್ಮಿಕ ಸಭೆ, 5.45ರಿಂದ ಸುಮಂಗಲೆಯರಿಂದ ಸಾಮೂ ಹಿಕ ಕುಂಕುಮಾರ್ಚನೆ, 6.30 ರಿಂದ ಪ್ರಸಾದ ವಿತರಣೆ, 7.30ರಿಂದ ನವದುರ್ಗೆ ಯರಿಗೆ ರಾತ್ರಿ ಪೂಜೆ, ಶ್ರೀ ಭಗವತೀ ಕಲ್ಲೋಕ್ತ ಪೂಜೆ ನಡೆಯಲಿದೆ. ಬೆಳಗ್ಗೆ 8ರಿಂದ ದೇವಸ್ಥಾನದ ಎದುರಿನ ವೇದಿಕೆಯಲ್ಲಿ ಕುಸ್ತಿ ಪಂದ್ಯಾಟ, ಸಂಜೆ 6.30 ರಿಂದ ಸ್ಯಾಕ್ರೋಫೋನ್ ವಾದನ, ರಾತ್ರಿ 8ರಿಂದ ಭಜನ್ ಪ್ಯೂಷನ್ ಇದೆ.
ದಸರಾ ರಜೆ ವೇಳೆ ಪರೀಕ್ಷೆ ವಿವಾದ: ಅ.19 ಮತ್ತು 22ರ ಪರೀಕ್ಷೆ ಮುಂದೂಡಿದ ಸೈಂಟ್ ಆಗ್ನೆಸ್ ಕಾಲೇಜು – vishwanews24
