ಉಡುಪಿ: ಧರ್ಮಸ್ಥಳ ಬುರುಡೆ ಗ್ಯಾಂಗ್ ರಕ್ಷಣೆಗೆ ಎಸ್‌ಎಎಫ್ ರಚನೆ : ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಗಂಭೀರ ಆರೋಪ – vishwanews24
ಉಡುಪಿ: ಧರ್ಮಸ್ಥಳ ಬುರುಡೆ ಗ್ಯಾಂಗ್ ರಕ್ಷಣೆಗೆ ಎಸ್‌ಎಎಫ್ ರಚನೆ : ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಗಂಭೀರ ಆರೋಪ
ಉಡುಪಿ: ರಾಜ್ಯ ಸರ್ಕಾರ ರಚಿಸಿರುವ ಸ್ಪೆಷಲ್ ಆಕ್ಷನ್ ಫೋರ್ಸ್ ಕುರಿತು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, “ಎಸ್‌ಎಎಫ್ ವಿಶೇಷ ಕಾರ್ಯಪಡೆ ಯಾಕೆ? ಈ ವಿಶೇಷ ಪೊಲೀಸ್ ಕಾರ್ಯಪಡೆಗೆ ಕಾನೂನಿನಲ್ಲಿ ಯಾವ ಮಾನ್ಯತೆ ಇದೆ?” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದರು.
ಕೇಂದ್ರದಿಂದ ಗುಡ್ ನ್ಯೂಸ್ : ಮಧುಮೇಹ ಸೇರಿ 39 ಔಷಧಿಗಳ ಬೆಲೆಯಲ್ಲಿ ಭಾರಿ ಇಳಿಕೆ – vishwanews24
ಕಳೆದ ವರ್ಷದ ಜೂನ್ ತಿಂಗಳಲ್ಲಿ ಸರ್ಕಾರ ಸ್ಪೆಷಲ್ ಆಕ್ಷನ್ ಫೋರ್ಸ್ ಅನ್ನು ರಚಿಸಿತ್ತು. ನಕ್ಸಲ್ ನಿಗ್ರಹಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದ ಎಎನ್‌ಎಫ್ ಅಗತ್ಯವಿಲ್ಲ ಎಂದು ಹೇಳಿ, ಅದರ ಸಿಬ್ಬಂದಿಯನ್ನು ಕಡಿತಗೊಳಿಸಿ ಎಸ್‌ಎಎಫ್ ರಚಿಸಲಾಗಿತ್ತು.
ಉಡುಪಿ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಎಸ್‌ಎಎಫ್ ಅನ್ನು ನಿಯೋಜಿಸಲಾಗಿತ್ತು. ಎಸ್‌ಎಎಫ್ ಸ್ಥಾಪನೆಯಾದ ಕೇವಲ 20 ದಿನಗಳಲ್ಲಿ ಚೆನ್ನಯ್ಯನನ್ನು ಬಂಧಿಸಲಾಗಿತ್ತು. “ಬುರುಡೆ ಗ್ಯಾಂಗ್‌ಗೆ ವಿಶೇಷ ರಕ್ಷಣೆ ನೀಡಲು ಎಸ್‌ಎಎಫ್ ಸ್ಥಾಪಿಸಲಾಗಿತ್ತೇ? ಎಂದು ಅವರು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಅಕ್ಟೋಬರ್-ನವೆಂಬರ್’ನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ : ಸಚಿವ ಈಶ್ವರ್ ಖಂಡ್ರೆ – vishwanews24
ಈ ವಿಶೇಷ ಕಾರ್ಯಪಡೆಯನ್ನು ಬಿಳಿಯಾನೆಯಂತೆ ನಿರ್ವಹಿಸುವ ಬದಲು ರದ್ದುಪಡಿಸಿ, ಅದರ ಅನುದಾನವನ್ನು ಸರ್ಕಾರದ ಯೋಜನೆಗಳಿಗೆ ಬಳಸಬೇಕು ಎಂದು ಅನುಪಮಾ ಶೆಣೈ ಸರ್ಕಾರವನ್ನು ಆಗ್ರಹಿಸಿದರು.
