ಉಡುಪಿ: ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಸಮಾಜ ಸೇವಕ ಲೀಲಾಧರ ಶೆಟ್ಟಿ ಯವರಿಂದ ಕಲಾವಿದರಿಗೆ ನೆರವು – Vishwanews24
ಉಡುಪಿ: ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಸಮಾಜ ಸೇವಕ ಲೀಲಾಧರ ಶೆಟ್ಟಿ ಯವರಿಂದ ಕಲಾವಿದರಿಗೆ ನೆರವು – Vishwanews24
ಉಡುಪಿ, : ಜಿಲ್ಲೆಯ ನಾಟಕ ಕಲಾವಿದರ ಒಕ್ಕೂಟ ಇದರ ಅಧ್ಯಕ್ಷರಾಗಿರುವ ಸಮಾಜ ಸೇವಕ ಲೀಲಾಧರ ಶೆಟ್ಟಿ ಜಿಲ್ಲೆಯ ಹತ್ತು ನಾಟಕ ತಂಡದ ಸುಮಾರು 48 ಕಲಾವಿದರಿಗೆ ಕಿಟ್ ವಿತರಿಸಿದರು.
ದಾನಿಗಳ ಸಹಕಾರ ಪಡೆಯದೆ ಸ್ವತ: ಕಿಟ್ ನ ಖರ್ಚು ವೆಚ್ಚಗಳನ್ನು ಭರಿಸಿ, ಜಿಲ್ಲೆಯ ರಂಗಭೂಮಿ ತಂಡಗಳ ಕಲಾವಿದರಿಗೆ ಸಹಾಯ ಹಸ್ತ ಚಾಚಿದ್ದಾರೆ. ವಿವಿಧ ತಂಡಗಳ ಕಲಾವಿದರಿಗೆ ಉಡುಪಿಯಲ್ಲಿ ಕಿಟ್ ವಿತರಿಸಲಾಯಿತು. ಕೊರೊನಾ ಸಂಕಷ್ಟ ಕಾಲದಲ್ಲಿ ಕಲಾವಿದರು ಯಾವುದೇ ಅವಕಾಶಗಳಿಲ್ಲದೆ, ಕಂಗಾಲಾಗಿದ್ದಾರೆ. ಸತತ ಎರಡು ವರ್ಷ ಆದಾಯವಿಲ್ಲದೆ ಕಳೆದ ಕಲಾವಿದರಿಗೆ ಒಕ್ಕೂಟದ ಅಧ್ಯಕ್ಷರು ಬೆಂಬಲವಾಗಿ ನಿಂತಿದ್ದಾರೆ.
ಉತ್ತಮ ಮೌಲ್ಯದ ಕಿಟ್ ನೀಡುವುದರ ಮೂಲಕ ಒಂದಷ್ಟು ಆಶಾದಾಯಕ ಬದುಕಿಗೆ ಸಹಕರಿಸಿದ್ದಾರೆ.
