ಉಡುಪಿ : ಮುಖದ ಮೇಲೆ ಗಾಯವಾದ ಫೋಟೊ ವೈರಲ್ ; ಸ್ಪಷ್ಟನೆ ನೀಡಿದ ರವಿ ಕಟಪಾಡಿ -Vishwanews24

Featured, ಉಡುಪಿ

ಉಡುಪಿ :ಮುಖದ ಮೇಲೆ ಗಾಯವಾದ ಫೋಟೊ ವೈರಲ್ ; ಸ್ಪಷ್ಟನೆ ನೀಡಿದ ರವಿ ಕಟಪಾಡಿ -Vishwanews24

ಉಡುಪಿ : ಕಟಪಾಡಿಯ ರವಿಯಣ್ಣ ಕಳೆದ ಕೆಲವು ವರ್ಷಗಳಿಂದ ಇತರರಿಗಾಗಿ ಭಿನ್ನವಾದ ವೇಷಗಳನ್ನು ತೊಟ್ಟು ಲಕ್ಷಾಂತರ ರೂಪಾಯಿಗಳನ್ನು ಸಂಗ್ರಹಿಸಿ ಒಂದು ಪೈಸೆಯನ್ನೂ ಕೂಡ ತನ್ನಲ್ಲಿರಿಸದೆ ಅನಾರೋಗ್ಯದಿಂದ ಬಳಲುವ ಮಕ್ಕಳಿಗೆ ನೀಡುತ್ತಿದ್ದಾರೆ. ಈ ನಮ್ಮ ರವಿಯಣ್ಣನ ಮುಖಕ್ಕೆ ಗಾಯವಾಗಿರುವ ಫೋಟೋವೊಂದು ವೈರಲ್ ಆಗುತ್ತಿದ್ದು, ಆ ಬಗ್ಗೆ ಕಟಪಾಡಿಯವರು  ಸ್ಪಷ್ಟನೆ ನೀಡಿದ್ದಾರೆ.

ಮುಖದಲ್ಲೊಂದಿಷ್ಟು ಗಾಯಗಳಿರುವ ಫೋಟೋ ಗಮನಿಸಿದ ಬಳಿಕ ಅನೇಕ ಮಂದಿ ಮರುಕಪಟ್ಟಿದ್ದಾರೆ. ತುಂಬಾ ಜನರು ಈ ಬಗ್ಗೆ ಮುಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದ್ದರೆ, ರವಿಯಣ್ಣನಂತ ವ್ಯಕ್ತಿಗಳಿರಬೇಕೆಂದು ಹಲವು ಜನ ಹೇಳಿದ್ದು ಆಗಿದೆ. ಮಾತ್ರವಲ್ಲದೆ ಸಾಮಾಜಿಕ ಜಾಲ ತಾಣಗಳಲ್ಲೂ ಹರಿಯಬಿಟ್ಟಿದ್ದಾರೆ. ಈ ಬಗ್ಗೆ ರವಿಯಣ್ಣನ ಯೋಗ ಕ್ಷೇಮ ವಿಚಾರಿಸಿ ಅವರನ್ನು ಸಂಪರ್ಕಿಸಿದ ಸಂದರ್ಭದಲ್ಲಿ ತಾನು ಆರೋಗ್ಯವಾಗಿದ್ದು, ಮೂರು ವರ್ಷಗಳ ಹಳೆಯ ಫೋಟೋವೊಂದನ್ನು ಯಾರೋ ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.