ಉಡುಪಿ : ಯಕ್ಷನಿಧಿ ಡೈರಿ ಬಿಡುಗಡೆ -Vishwanews24

Featured, ಉಡುಪಿ

ಉಡುಪಿ :ಯಕ್ಷನಿಧಿ ಡೈರಿ ಬಿಡುಗಡೆ –Vishwanews24

ಉಡುಪಿ : ಎಲ್ಲಾ ವೃತ್ತಿ ಕಲಾವಿದರ ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳನ್ನು ಹೊಂದಿದ ಯಕ್ಷನಿಧಿ ಡೈರಿ – 2021ನ್ನು  ಯಕ್ಷಗಾನ ಕಲಾರಂಗದ ಕಛೇರಿಯಲ್ಲಿ ಖ್ಯಾತ ಕೂಚುಪುಡಿ ನೃತ್ಯ ಹಾಗೂ ಕಿರುತೆರೆ ಕಲಾವಿದೆ ಶ್ರೀಮತಿ ವೈಜಯಂತಿ ಕಾಶಿಯವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ಕೋಶಾಧಿಕಾರಿ ಮನೋಹರ ಕೆ. ಹಾಗೂ ವೈಜಯಂತಿ ಕಾಶಿಯವರ ಪುತ್ರಿ ಪ್ರತೀಕ್ಷಾ ಕಾಶಿ ಮತ್ತು ಈರ್ವರು
ಶಿಷ್ಯೆಯರು ಉಪಸ್ಥಿತರಿದ್ದರು. ಸಂಸ್ಥೆಯ ಚಟುವಟಿಕೆಗಳನ್ನು ಅವಲೋಕಿಸಿದ ವೈಜಯಂತಿ ಕಾಶಿಯವರು ಇಂತಹ ಸಂಸ್ಥೆಯನ್ನು ತಾನು ಈ ತನಕ ನೋಡಿದ್ದಿಲ್ಲಾ, ಈ ಸಂಸ್ಥೆ ಉಳಿದವರಿಗೆ ಮಾದರಿ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು.

http://ಕಾಂಗ್ರೆಸ್ ಅಭ್ಯರ್ಥಿಗಳು ಪಕ್ಷದ ತತ್ತ್ವ, ಸಿದ್ಧಾಂತಗಳಿಗೆ ನಿಷ್ಠರಾಗಿದ್ದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಜನ ಸೇವೆಗೆ ಅವಕಾಶ ದೊರೆಯುತ್ತದೆ : ಹರೀಶ್ ಕಿಣಿ -Vishwanews24