ಉಡುಪಿ: ವಾಸಕ್ಕೆಂದು ಉಚಿತ ಮನೆ ನೀಡಿದ ಮಾಲೀಕನ ಬ್ಯಾಂಕ್ ಖಾತೆಗೆ ಕನ್ನ ; 9 ಲಕ್ಷ ರೂ.ಗೂ ಹೆಚ್ಚು ವಂಚನೆ – Vishwanews24
ಉಡುಪಿ: ವಾಸಕ್ಕೆಂದು ಉಚಿತ ಮನೆ ನೀಡಿದ ಮಾಲೀಕನ ಬ್ಯಾಂಕ್ ಖಾತೆಗೆ ಕನ್ನ ; 9 ಲಕ್ಷ ರೂ.ಗೂ ಹೆಚ್ಚು ವಂಚನೆ
ಉಡುಪಿ: ವಾಸಕ್ಕೆಂದು ಉಚಿತ ಮನೆ ನೀಡಿದ ಮಾಲೀಕನ ಬ್ಯಾಂಕ್ ಖಾತೆಗೆ ಕನ್ನ ಹಾಕಿ , ಮನೆಯಲ್ಲೂ ಕಳ್ಳತನ ನಡೆಸಿದ ಬಗ್ಗೆ ದೂರು ದಾಖಲಾದ ಘಟನೆ ಬನ್ನಂಜೆಯಲ್ಲಿ ನಡೆದಿದೆ.
ಬನ್ನಂಜೆಯ ಮೂಡನಿಡಂಬೂರು ಗ್ರಾಮದ ನಿವಾಸಿಯಾಗಿರುವ ಎಂ . ಬಾಲಕೃಷ್ಣ ನಾಯಕ್ (79)ಸಿಂಡಿಕೇಟ್ ಬ್ಯಾಂಕ್ನಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ನಿವೃತ್ತ ಜೀವನ ನಡೆಸುತ್ತಿದ್ದರು. ಪತ್ನಿ ಮರಣಾನಂತರ ಏಕಾಂಗಿಯಾಗಿ ವಾಸವಿದ್ದ ಅವರು, ಸರ್ಕಾರಿ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡಿಕೊಂಡಿರುವ ಹಾವೇರಿ ಜಿಲ್ಲೆಯ ರಮೇಶ್ ಮತ್ತು ಆತನ ಪತ್ನಿಗೆ ಮನೆಯಲ್ಲಿ ಉಚಿತ ರೂಮ್ ನೀಡಿ ವಾಸಕ್ಕೆ ವ್ಯವಸ್ಥೆ ಮಾಡಿದ್ದರು.
ಉಡುಪಿ: ಭಿಕ್ಷಾಟನೆ, ವ್ಯಾಪಾರ ನಿರತ 7 ಮಕ್ಕಳ ರಕ್ಷಣೆ – Vishwanews24
ಆದರೆ ಆರೋಪಿ ರಮೇಶ್ ಜು. 4 ರಿಂದ ಆ.10 ರ ಒಳಗೆ ಮನೆ ಮಾಲೀಕ ಬಾಲಕೃಷ್ಣ ನಾಯಕ್ ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಒಟಿಪಿ ಬಳಸಿಕೊಂಡು ಬೇರೆ ಬೇರೆ ದಿನಗಳಲ್ಲಿ ವಿವಿಧ ಎಟಿಎಂಗಳಿಂದ ಒಟ್ಟು ರೂಪಾಯಿ 9,75,500/- ನ್ನು ಡ್ರಾ ಮಾಡಿ ವಂಚನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಇದಲ್ಲದೆ ಮನೆಯಲ್ಲಿದ್ದ 2 ಚಿನ್ನದ ಉಂಗುರಗಳು ಕಾಣೆಯಾಗಿದ್ದು, ಇವುಗಳನ್ನೂ ಸಹ ಆರೋಪಿತನು ತೆಗೆದುಕೊಂಡು ಹೋಗಿರುವ ಬಗ್ಗೆ ಸಂಶಯ ಇರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 153/2022 ಕಲಂ: 406, 417, 420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಲಂಚ ಆರೋಪ ಸಾಬೀತು: ಮನಪಾ ಅಧಿಕಾರಿಗೆ 1 ಕೋಟಿ ರೂ. ದಂಡ; 4 ವರ್ಷ ಶಿಕ್ಷೆ – Vishwanews24
