ಉಡುಪಿ: ಸರ್ವ ಸಮುದಾಯಗಳ ಏಳಿಗೆಗೆ ಬಿಜೆಪಿಗೆ ಬದ್ಧ: ಯಶ್‌ಪಾಲ್‌ ಸುವರ್ಣ – Vishwanews24

Featured, ಉಡುಪಿ

ಉಡುಪಿ: ಸರ್ವ ಸಮುದಾಯಗಳ ಏಳಿಗೆಗೆ ಬಿಜೆಪಿಗೆ ಬದ್ಧ: ಯಶ್‌ಪಾಲ್‌ ಸುವರ್ಣ

ಉಡುಪಿ: ಸಮಾಜದ ಸರ್ವ ಸಮುದಾಯಗಳ ಏಳಿಗೆಗೆ ಪಣತೊಟ್ಟು ಬಿಜೆಪಿ ಸರಕಾರ ಕಾರ್ಯ ನಿರ್ವಹಿಸುವ ಮೂಲಕ ಸರ್ವಸ್ಪರ್ಶಿ ಸರ್ವವ್ಯಾಪಿ ಆಡಳಿತದ ಮೂಲಕ ಜನ ಸಾಮಾನ್ಯರಲ್ಲಿ ಹೊಸ ಭರವಸೆ ಮೂಡಿಸಿದೆ ಎಂದು ಬಿಜೆಪಿ ಅಭ್ಯರ್ಥಿ ಯಶ್‌ಪಾಲ್‌ ಸುವರ್ಣ ಹೇಳಿದರು.

ಅವರು ಚಿಟ್ಪಾಡಿಯ ದೇವಾಡಿಗರ ಸಂಘದಲ್ಲಿ ದೇವಾಡಿಗ ಸಮಾಜದ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮತಯಾಚನೆ ಮಾಡಿ ಮಾತನಾಡಿದರು.

ದೇವಾಡಿಗ ಸಮಾಜ ನಿರಂತರವಾಗಿ ಅಭಿವೃದ್ದಿ ಪರವಾದ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುವ ಮೂಲಕ ರಾಷ್ಟ್ರೀಯವಾದಿ ಚಿಂತನೆಯ ಸರಕಾರಕ್ಕೆ ಸಹಕಾರ ನೀಡುತ್ತಿದೆ. ದೇವಾಡಿಗ ಸಮಾಜ ಸಹಿತ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ವಿಶೇಷ ಮುತವರ್ಜಿ ವಹಿಸಿದ್ದು, ಈ ಬಾರಿ ದೇವಾಡಿಗ ಸಮಾಜ ಉಡುಪಿ ಕ್ಷೇತ್ರದಲ್ಲಿ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಕ್ಷೇತ್ರದ ಜನತೆಗೆ ಸೇವೆ ಸಲ್ಲಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು.

 

 

Leave a Reply