ಉದ್ಯಾವರ: ಕಡೆಕಾರು, ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷ , ಉಪಾಧ್ಯಕ್ಷರಿಗೆ ಸನ್ಮಾನ -Vishwanews24

Featured, ಉಡುಪಿ

ಉದ್ಯಾವರ: ಕಡೆಕಾರು, ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷ , ಉಪಾಧ್ಯಕ್ಷರಿಗೆ ಸನ್ಮಾನ -Vishwanews24

ಉದ್ಯಾವರ : ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯ 46ನೇ ಕಾರ್ಯಕ್ರಮವಾದ ಕ್ರೀಡಾ ಕೂಟದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ರಾಧಾಕೃಷ್ಣ ಶ್ರೀಯಾನ್ ಬೊಳ್ಜೆ, ಉಪಾಧ್ಯಕ್ಷೆ ಮಧುಲತಾ ಶಶಿಧರ್, ಕಡೆಕಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷ ನವೀನ್ ಶೆಟ್ಟಿ, ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ, ಉಪಾಧ್ಯಕ್ಷ ಸುಧಾಕರ ಪೂಜಾರಿ ಇವರನ್ನು ಗೌರವಿಸಿ, ಸನ್ಮಾನಿಸಲಾಯಿತು.

ಸನ್ಮಾನಿತರ ಪರವಾಗಿ ಮಾತನಾಡಿದ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್ ಬೊಳ್ಜೆ ಮಾತಾನಾಡಿ, ಐಸಿವೈಎಂ ಉದ್ಯಾವರ ಸಂಘಟನೆಯ ಕಾರ್ಯಕ್ರಮವನ್ನು ಮೆಚ್ಚಿ, ಈ ಸಂಘಟನೆಯು ಈ ಸಮಾಜಕ್ಕೆ ಹಲವಾರು ಕೊಡುಗೆ ನೀಡಿದೆ. ನಮ್ಮ 3ಪಂಚಾಯತ್ ಗಳಲ್ಲಿ ಈ ಸಂಘಟನೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಬಹುಮತ ಸಾಬೀತುಪಡಿಸುವಲ್ಲಿ ವಿಫಲ : ಪುದುಚೇರಿ ಕಾಂಗ್ರೆಸ್ ಸರ್ಕಾರ ಪತನ ; ಸಿಎಂ ರಾಜೀನಾಮೆ -Vishwanews24

ಈ ಸಂದರ್ಭದಲ್ಲಿ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಕುಲಪತಿ, ಸ್ಥಳೀಯ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಧಾನ ಧರ್ಮಗುರುಗಳಾದ ಅ. ವಂ. ಫಾ. ಸ್ಟ್ಯಾನಿ ಬಿ. ಲೋಬೊ, ಸಹಾಯಕ ಧರ್ಮಗುರುಗಳಾದ ಫಾ. ರೊಲ್ವಿನ್ ಅರಾನ್ನ, ಪಾಲನ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ನೊರೊನ್ಹಾ, ಪ್ರೆಸಿಲ್ಲಾ ಪಿರೇರಾ, ಸುವರ್ಣ ಮಹೋತ್ಸವದ ಅಧ್ಯಕ್ಷ ಮೈಕಲ್ ಡಿಸೋಜ, ಕಾರ್ಯದರ್ಶಿ ಡೋರಾ ಅರೋಜಾ, ಐಸಿವೈಎಂ ಅಧ್ಯಕ್ಷ ರೋಯಲ್ ಕಾಸ್ತಲಿನೊ, ಕಾರ್ಯದರ್ಶಿ ಜೇನ್ ಬೆಲಿಟಾ, ಕ್ರೀಡಾ ಸಂಚಾಲಕ ಜೋನ್ ಪ್ರಶಾಂತ್, ಪ್ರಮುಖರಾದ ರೋಯ್ಸ್, ಜೂಲಿಯಾ ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ: ಸ್ಥಳೀಯರಿಗೆ ಶುಲ್ಕ ವಿನಾಯತಿಗೆ ಆಗ್ರಹಿಸಿ ಹೆದ್ದಾರಿ ಜಾಗೃತಿ ಸಮಿತಿಯ ವತಿಯಿಂದ ಸಾಸ್ತಾನ ಟೋಲ್ ನಲ್ಲಿ ಬೃಹತ್ ಪ್ರತಿಭಟನೆ -Vishwanews24

ಐಸಿವೈಎಂ ಸದಸ್ಯೆ ಪ್ರತೀಕ್ಷಾ ಗೋಮ್ಸ್ ಸ್ವಾಗತಿಸಿ ನಿರೂಪಿಸಿದರೆ, ಮರ್ವಿನ್ ಅಲ್ಮೆಡಾ ಧನ್ಯವಾದ ಸಮರ್ಪಿಸಿದರು.