ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಚಿನ್ನ-ಬೆಳ್ಳಿಯ ಪ್ರಭಾವಳಿ ಅರ್ಪಿಸಿದ ರಾಜೇಶ್ ಶೆಟ್ಟಿ ದಂಪತಿ – vishwanews24
ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಚಿನ್ನ-ಬೆಳ್ಳಿಯ ಪ್ರಭಾವಳಿ ಅರ್ಪಿಸಿದ ರಾಜೇಶ್ ಶೆಟ್ಟಿ ದಂಪತಿ
ಮಂಗಳೂರು : ಶ್ರೀ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಕೃಪೆಯಿಂದ, ವರಮಹಾಲಕ್ಷ್ಮೀ ಹಬ್ಬದ ಪುಣ್ಯ ಸಂದರ್ಭದಲ್ಲಿ ಶಂಕರ್ ಎಲೆಕ್ಟ್ರಿಕಲ್ಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಿಎಂಡಿ ರಾಜೇಶ್ ಶೆಟ್ಟಿ, ಅಪರ್ಣಾ ರಾಜೇಶ್ ಶೆಟ್ಟಿ ಹಾಗೂ ಕುಟುಂಬದವರು ಶ್ರೀ ಕ್ಷೇತ್ರ ಕಟೀಲು ಅಮ್ಮನವರಿಗೆ ಚಿನ್ನ ಮತ್ತು ಬೆಳ್ಳಿಯಿಂದ ನವೀನವಾಗಿ ವಿನ್ಯಾಸಗೊಳಿಸಲಾದ ವಿಶೇಷ ಪ್ರಭಾವಳಿಯನ್ನು ಸಮರ್ಪಿಸಿದರು.
ಇದನ್ನೂ ಓದಿ :
ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಸರ್ಕಾರಿ ರಜೆ ಘೋಷಣೆಗೆ ಮನವಿ – vishwanews24
ಕಟೀಲು ದೇವಸ್ಥಾನಕ್ಕೆ ಬಹಳ ವರ್ಷಗಳ ಹಿಂದೆ ಬೆಳ್ಳಿಯ ಬಾಗಿಲನ್ನು ಸಮರ್ಪಿಸಿದ್ದ ಅಪರ್ಣಾ ರಾಜೇಶ್ ಶೆಟ್ಟಿ ಕುಟುಂಬದಿಂದ ಇದೀಗ ಮತ್ತೊಮ್ಮೆ ಅಮ್ಮನವರ ಸೇವೆಯ ಭಾಗವಾಗಿ ಈ ಅಪೂರ್ವ ಪ್ರಭಾವಳಿಯನ್ನು ಸಮರ್ಪಿಸುತ್ತಿರುವುದು ಅತ್ಯಂತ ಸಂತೋಷ ಮತ್ತು ಪುಣ್ಯದ ಕ್ಷಣವಾಗಿದೆ.
ಈ ಪ್ರಭಾವಳಿಯ ಮೇಲ್ಭಾಗದ ಮಧ್ಯದಲ್ಲಿ ಯಾಳಿ ವಿನ್ಯಾಸ, ಮೇಲಿನ ಮೂಲೆಗಳಲ್ಲಿ ಗರುಡ ಮತ್ತು ಹನುಮಂತ, ಹಾಗೂ ಕೆಳಭಾಗದಲ್ಲಿ ಜಯ–ವಿಜಯ ದ್ವಾರಪಾಲಕರ ಸುಂದರ ವಿನ್ಯಾಸವನ್ನು ಅಳವಡಿಸಲಾಗಿದ್ದು, ಈ ರೀತಿಯ ವಿನ್ಯಾಸದ ಪ್ರಭಾವಳಿಯನ್ನು ಪ್ರಥಮ ಬಾರಿಗೆ ರೂಪಿಸಿರುವುದು ವಿಷೇಶವಾಗಿದೆ.
ಇದನ್ನೂ ಓದಿ :
ನಾಗೇಂದ್ರ ರಾಜೀನಾಮೆ ಬಿಜೆಪಿ-ಜೆಡಿಎಸ್ ಹೋರಾಟದ ಫಲ: ಆರ್. ಅಶೋಕ್ – vishwanews24
