ಕರ್ನಾಟಕದ ಹಾರ್ಡ್ ವರ್ಕಿಂಗ್ ಮುಖ್ಯಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಜನ್ಮದಿನದ ಶುಭಾಶಯಗಳು : ಪಿಎಂ ಮೋದಿ -Vishwanews24
ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಇಂದು 78ನೇ ಜನ್ಮದಿನದ ಸಂಭ್ರಮ. ಈ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ದೇಶದ ನಾನಾ ಗಣ್ಯರು ಯಡಿಯೂರಪ್ಪ ಅವರಿಗೆ ಶುಭಾಶಯಗಳನ್ನು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ” ಸಿಎಂ ಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.
ಟ್ವಿಟ್ಟರ್ ಮೂಲಕ ಶುಭಾಶಯ ಹೇಳಿರುವ ಪಿಎಂ ಮೋದಿ “ಕರ್ನಾಟಕದ ಹಾರ್ಡ್ ವರ್ಕಿಂಗ್ ಮುಖ್ಯಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಜನ್ಮದಿನದ ಶುಭಾಶಯಗಳು.ರಾಜ್ಯದ ಅಭಿವೃದ್ದಿಗಾಗಿ ಸದಾ ಕೆಲಸ ಮಾಡುತ್ತಿರುವ, ರೈತರ, ಗ್ರಾಮೀಣಾಭಿವೃದ್ದಿಯ ಬಗೆಗೆ ಸದಾ ಗಮನ ನೀಡುವ ಸಿಎಂ ಅವರಿಗೆ ಆಯುಷ್ಯ, ಆರೋಗ್ಯ ವೃದ್ಧಿಸಲಿ ಎಂದು ನಾನು ಪ್ರಾರ್ಥಿಸುವೆ” ಎಂದು ಹೇಳಿದ್ದಾರೆ.
Birthday greetings to Karnataka’s hardworking CM @BSYBJP Ji. He is passionately working for the state’s progress, especially on farmer welfare and rural development. I pray for his long life and good health.
— Narendra Modi (@narendramodi) February 27, 2020
