ಕರ್ನಾಟಕದಲ್ಲಿ 1 ವರ್ಷ ‌ಕೃತಕ ಪನ್ನೀರ್ ಬ್ಯಾನ್ – vishwanews24

Featured, ರಾಜ್ಯ ನ್ಯೂಸ್

ಕರ್ನಾಟಕದಲ್ಲಿ 1 ವರ್ಷ ‌ಕೃತಕ ಪನ್ನೀರ್ ಬ್ಯಾನ್

ಬೆಂಗಳೂರು: ಕರ್ನಾಟಕದಲ್ಲಿ 1 ವರ್ಷದ ಅವಧಿಗೆ ಕೃತಕ ಪನ್ನೀರ್‌ ಬ್ಯಾನ್‌ ಮಾಡಿ ಆಹಾರ ಸುರಕ್ಷತಾ ಇಲಾಖೆ ಆದೇಶ ಹೊರಡಿಸಿದೆ.

ರಾಜ್ಯಾದ್ಯಂತ ಪನ್ನೀರ್‌ ಹೆಸರಿನಲ್ಲಿ ಅನಾಲಾಗ್ ಪನ್ನೀರ್ ತಯಾರಿಕೆ, ಸಂಗ್ರಹಣೆ , ಮಾರಾಟವಾಗುತ್ತಿದೆ. ಕೃತಕ‌ ಪನ್ನೀರ್ ನಿಷೇಧ ಮಾಡಿ ಆದೇಶಿಸಲಾಗಿದೆ.

ಉಡುಪಿ : ಭಾರತ್ ಜೋಡೋ ಯುವ ಸಂಘಗಳ ನೋಂದಣಿಗೆ ಅರ್ಜಿ ಆಹ್ವಾನ – vishwanews24

ಏನಿದು ಕೃತಕ ಅಥವಾ ‘ಅನಲಾಗ್ ಪನ್ನೀರ್’?

ಸಾಮಾನ್ಯವಾಗಿ ಅಸಲಿ ಪನ್ನೀರ್ ಅನ್ನು ಸಂಪೂರ್ಣವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ತಯಾರಿಸಲಾಗುತ್ತದೆ. ಆದರೆ, ವೆಚ್ಚ ಕಡಿಮೆ ಮಾಡಲು ಮತ್ತು ಹೆಚ್ಚಿನ ಲಾಭ ಗಳಿಸಲು ಹಲವು ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳು ಹಾಲಿನ ಬದಲು ಸಸ್ಯಜನ್ಯ ಎಣ್ಣೆ, ಪಿಷ್ಟ ಹಾಗೂ ಕೆಮಿಕಲ್‌ಗಳನ್ನು ಬಳಸಿ ತಯಾರಿಸಿದ ‘ಅನಲಾಗ್ ಪನ್ನೀರ್’ ಅನ್ನು ಗ್ರಾಹಕರಿಗೆ ನೀಡುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಕೃತಕ ಪನ್ನೀರ್‌ನಲ್ಲಿ ಬಳಸುವ ರಾಸಾಯನಿಕಗಳು ಮತ್ತು ಗುಣಮಟ್ಟವಿಲ್ಲದ ಕೊಬ್ಬಿನಾಂಶ ಸಾರ್ವಜನಿಕ ಆರೋಗ್ಯದ ಮೇಲೆ ತೀವ್ರ ತರಹದ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತಿವೆ. ಆಹಾರ ಸುರಕ್ಷತಾ ಕಾಯ್ದೆಯಡಿ ಹಾಲಿನ ಉತ್ಪನ್ನವಲ್ಲದ ಕೃತಕ ವಸ್ತುವನ್ನು ‘ಪನ್ನೀರ್’ ಹೆಸರಿನಲ್ಲಿ ಗ್ರಾಹಕರಿಗೆ ನೀಡುವುದು ಕಾನೂನುಬಾಹಿರ.ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ರಾಜ್ಯಾದ್ಯಂತ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ.

 ಉಡುಪಿ : ಆ. 28ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ – vishwanews24

Leave a Reply