ಕಾಂಗ್ರೆಸ್ ನವರಿಗೆ ದೂರುವುದಕ್ಕೆ ಮೋದಿ ಬೇಕು. ಒಳ್ಳೆಯದಕ್ಕಾದರೆ ಮೋದಿ ಬೇಡ : ಸಿ.ಟಿ.ರವಿ -Vishwanews24

Featured, ರಾಜ್ಯ ನ್ಯೂಸ್

ಕಾಂಗ್ರೆಸ್ ನವರಿಗೆ ದೂರುವುದಕ್ಕೆ ಮೋದಿ ಬೇಕು. ಒಳ್ಳೆಯದಕ್ಕಾದರೆ ಮೋದಿ ಬೇಡ : ಸಿ.ಟಿ.ರವಿ -Vishwanews24

ಚಿಕ್ಕಮಗಳೂರು : ಕಾಂಗ್ರೆಸ್ ನವರಿಗೆ ದೂರುವುದಕ್ಕೆ ಮೋದಿ ಬೇಕು. ಒಳ್ಳೆಯದಕ್ಕಾದರೆ ಮೋದಿ ಬೇಡ. ಗೂಸುಂಬೆ ರಾಜಕಾರಣದಿಂದ ಕಾಂಗ್ರೆಸ್ ಗೆ ಈ ಸ್ಥಿತಿ ಬಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದರು.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಈಗ ಲಸಿಕೆ ರಾಜಕಾರಣ ಮಾಡುವುದು ಬೇಡ. ಈ ಹಿಂದೆ ಕಾಂಗ್ರೆಸ್ ನವರು ಲಸಿಕೆ ತೆಗೆದುಕೊಂಡರೆ ಮಕ್ಕಳಾಗಲ್ಲ ಎಂದಿದ್ದರು. ಆ ಸಮಯದಲ್ಲಿ ಸಿದ್ದರಾಮಯ್ಯ ಏನು ಹೇಳಿದ್ದರೆಂದು ಹೇಳಬೇಕಾ, ಡಿ ಕೆ ಶಿವಕುಮಾರ್ ಟ್ವೀಟ್ ತೋರಿಸಬೇಕಾ? ಜಾರ್ಖಂಡ್ ಆರೋಗ್ಯ ಸಚಿವರ ಹೇಳಿಕೆ ನೆನಪು ಮಾಡಬೇಕಾ ಎಂದು ಹೇಳಿದರು.

ಅವತ್ತು ಲಸಿಕೆ ವಿರುದ್ಧ ರಾಜಕಾರಣ ಮಾಡಿದರು. ಈಗ ಕಾಂಗ್ರೆಸ್ ನವರ ಎಡಬಿಡಂಗಿತನ ಹೇಗೆ ಎಂದರೆ ಪ್ರಧಾನಿ ಎಲ್ಲರಿಗೂ ಉಚಿತ ವಾಕ್ಸಿನ್ ಘೋಷಣೆ ಮಾಡಿದಾಗ ಕಾಂಗ್ರೆಸ್ ನವರು ಥ್ಯಾಂಕ್ಯೂ ಸುಪ್ರೀಂ ಕೋರ್ಟ್ ಎಂದರು. ಉಚಿತ ಲಸಿಕೆಯ ಕ್ರೆಡಿಟ್ ಮೋದಿ, ಬಿಜೆಪಿಗೆ ಹೋಗಬಹುದು ಅಂತ ಥ್ಯಾಂಕ್ಯೂ ಸುಪ್ರೀಂ ಕೋರ್ಟ್ ಅಂತಾ ರಾಜಕಾರಣ ಮಾಡಿದರು ಎಂದು ಸಿ.ಟಿ.ರವಿ ವಾಗ್ದಾಳಿ ನಡೆಸಿದರು.