ಕಾಂಗ್ರೆಸ್ ಪಕ್ಷದ ಕಚೇರಿಯೇ ದೇವಸ್ಥಾನ, ಅಲ್ಲಿಯೇ ಇನ್ನೂ ಮುಂದೆ ಎಲ್ಲ ಚಟುವಟಿಕೆ ನಡೆಯಬೇಕು : ಡಿ.ಕೆ.ಶಿ -Vishwanews24
ಕಾಂಗ್ರೆಸ್ ಪಕ್ಷದ ಕಚೇರಿಯೇ ದೇವಸ್ಥಾನ, ಅಲ್ಲಿಯೇ ಇನ್ನೂ ಮುಂದೆ ಎಲ್ಲ ಚಟುವಟಿಕೆ ನಡೆಯಬೇಕು : ಡಿ.ಕೆ.ಶಿ -Vishwanews24
ಕಲಬುರಗಿ: ನನಗೆ ಎಷ್ಟು ತೊಂದರೆ ಕೊಟ್ಟರೂ ಹೆದರಲ್ಲ. ನಿಮ್ಮ ಆಶೀರ್ವಾದ ಇದ್ದರೆ ಸಾಕು ಕೇಂದ್ರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಲಬುರಗಿ ವಿಭಾಗ ಮಟ್ಟದ ಸಂಕಲ್ಪ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ನಂತರ ಭಾರೀ ಹೋರಾಟ ಕೃಷಿ ಕಾಯ್ದೆಯ ವಿರುದ್ಧ ನಡೆಯುತ್ತಿದೆ. ನಾನು ಮತ್ತು ನಮ್ಮ ಪಕ್ಷದ ಹಿರಿಯ ನಾಯಕರು ಈ ಮೂರು ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಡಿಕೆಶಿ ಹೇಳಿದರು.
ಕಾಂಗ್ರೆಸ್ ಪಕ್ಷದ ಕಚೇರಿಯೇ ದೇವಸ್ಥಾನ. ಅಲ್ಲಿಯೇ ಇನ್ನೂ ಮುಂದೆ ಎಲ್ಲ ಚಟುವಟಿಕೆ ನಡೆಯಬೇಕು. ನಾಯಕರ ಮನೆಗಳಲ್ಲಿ ಅಲ್ಲ. ಎಲ್ಲರೂ ಒಗ್ಗಟ್ಟಿನಿಂದ ಮುಂಬರುವ ಚುನಾವಣೆ ಎದುರಿಸೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಕರೆ ನೀಡಿದರು. ಜಿಲ್ಲೆಯ ಎಲ್ಲ ತಾಲೂಕು ಮಟ್ಟದ ಕಚೇರಿಗಳನ್ನು ಕಟ್ಟಡದಲ್ಲಿ ನಡೆಸಿ ಸ್ವಂತ ಕಟ್ಟಡವಿಲ್ಲದಿದ್ದರೆ ಬಾಡಿಗೆ ಕಟ್ಟಡದಲ್ಲಿ ನಡೆಸಿ ಪಕ್ಷಕ್ಕೆ ಸಂಬಂಧಿಸಿದ ಚರ್ಚೆಗಳನ್ನು ಅಲ್ಲಿಯೇ ನಡೆಸಿ ಎಂದು ಹೇಳಿದರು.
ಬ್ಲಾಕ್ ಮಟ್ಟದಲ್ಲಿ ಪದಾಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಆಕಾಂಕ್ಷಿಗಳ ಪಟ್ಟಿಯನ್ನು ಸಿದ್ದಪಡಿಸಿ ನನಗೆ ಕಳಿಸಿ. ನಾನು ನೇಮಕ ಮಾಡಿ ಆದೇಶ ಹೊರಡಿಸುತ್ತೇನೆ. ನನ್ನ ಗಮನಕ್ಕೆ ಬರದೇ ಮಾಡಲಾದ ನೇಮಕಾತಿಗಳಿಗೆ ಮಾನ್ಯತೆ ಇಲ್ಲ. ನಾನು ಅಂತಹ ನೇಮಕಾತಿಗಳನ್ನು ರದ್ದುಪಡಿಸುತ್ತೇನೆ ಎಂದರು. ಇನ್ನು ಇಂದಿನ ಸಭೆಯಲ್ಲಿ ಭಾಗವಹಿಸಿರುವವರು ಒಳ್ಳೆಯ ಸಲಹೆ ನೀಡಿದ್ದೀರಿ. ಕೊಪ್ಪಳ ಅಧ್ಯಕ್ಷರು ಧರ್ಮದ ವಿಚಾರದಲ್ಲಿ ಸಲಹೆ ನೀಡಿದ್ದಾರೆ. ನಮಗೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಧರ್ಮಗಳು ಸಮ. ಆದರೆ, ಬಿಜೆಪಿಯವರು ನಾವೆಲ್ಲ ಹಿಂದೂ, ಹಿಂದೂ ಮುಂದು ಎನ್ನುತ್ತಾರೆ. ನಮಗೆ ಎಲ್ಲ ಧರ್ಮಗಳಲ್ಲಿ ನಂಬಿಕೆಯಿದೆ ಎಂದರು.
ಇನ್ನೂ 10ವರ್ಷ ಪ್ರಧಾನಿ ಮೋದಿಯವರ ಆಡಳಿತ ಈ ದೇಶಕ್ಕೆ ಅವಶ್ಯಕವಾಗಿದೆ : ಸಚಿವ ಸೋಮಣ್ಣ -Vishwanews24
