ಕಾಂಗ್ರೇಸ್ ಸ್ಥಾನೀಯ ಸಮಿತಿ ಮುದರಂಗಡಿ ವತಿಯಿಂದ ಮಡಿಕೇರಿ ಸಂತ್ರಸ್ಥರಿಗೆ ನೆರವು

Featured, ಉಡುಪಿ

ಕಾಪು : ಕಾಂಗ್ರೇಸ್ ಸ್ಥಾನೀಯ ಸಮಿತಿ ಮುದರಂಗಡಿ ವತಿಯಿಂದ ಶ್ರಿ ಡೇವಿಡ್ ಡಿಸೊಜ ನೇತ್ರತ್ವದಲ್ಲಿ ,ಸುಧಿರ್ ರಾವ್ ಸಾಂತೂರು, ಗುರುರಾಜ್ ಪ್ರಭು , ಯೋಗೀಶ್ ಆಚಾರ್ಯ ಇನ್ನಾ, ಅಲಗೇಶ್ ಸನ್ನೊನಿ,ನರಸಿಂಹ ಶೆಣೈ,ಹಾಗೂ ಎಲ್ಲಾ  ಕಾರ್ಯಕರ್ತರ ಮುಂದಾಳತ್ವದಲ್ಲಿ ಮಡಿಕೇರಿ ಪ್ರವಾಹ ಪೀಡಿತ ಸಂತ್ರಸ್ತರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಲು ನಿರ್ದರಿಸಿ, ಊರ ಹಾಗು ಪರವೂರ ದಾನಿಗಳು ಸೇರಿ  ಸುಮಾರು 125000 ರೂ ಮೌಲ್ಯದ ಅಕ್ಕಿ,ಬಟ್ಟೆ,ನ್ಯಾಪ್ಕಿನ್,ಸೀರೆ,ನೀರಿನ ಬಾಟಲ್ ,ಮುಂತಾದ ಕೊಡುಗೆಗಳನ್ನು ನೀಡಿದ್ದಾರೆ.

ಇಂದು ಮುದರಂಗಡಿಯಿಂದ ಕಾರ್ಯಕರ್ತರು ಸಂಜೆಯೊಳಗೆ ಮಡಿಕೇರಿ ತಲುಪಿ ಅಲ್ಲಿನ ಕಾರ್ಯಕರ್ತರೊಂದಿಗೆ ಹಾಗೂ ಮಡಿಕೇರಿ ಜಿಲ್ಲಾಡಳಿತದೊಂದಿಗೆ ಸೇರಿ ಅರ್ಹ ಫಲಾನುಭವಿಗಳಿಗೆ ನೇರವಾಗಿ ಹಂಚಲಿದ್ದಾರೆ..

ಇವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ..