ಕಾಪು ತಾಲೂಕು ಮಿನಿ ವಿಧಾನಸೌಧ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಬೆಂಬಲಿಗರೊಂದಿಗೆ ಪ್ರತ್ಯಕ್ಷವಾದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ.
ಕಾಪು ಮಿನಿ ವಿಧಾನಸೌಧ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಬೆಂಬಲಿಗರೊಂದಿಗೆ ಆಗಮಿಸಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ.
ಕಾಪು: ಸುಮಾರು ಹತ್ತುಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುವ ಕಾಪು ತಾಲೂಕು ಮಿನಿ ವಿಧಾನ ಸೌಧಕ್ಕೆ ಕರ್ನಾಟಕ ಸರ್ಕಾರದ ಕಂದಾಯ ಸಚಿವ ಆರ್ ಅಶೋಕ್ ಶಿಲಾನ್ಯಾಸ ಸಮಯದ ಕೆಲವೇ ನಿಮಿಷಗಳ ಮುನ್ನಾ ಮಾಜಿಸಚಿವ ವಿನಯ್ ಕುಮಾರ್ ಸೊರಕೆ ಬೆಂಬಲಿಗರದೊಂದಿಗೆ ಶಿಲಾನ್ಯಾಸ ಕಾರ್ಯಕ್ರಮಕ್ಕಾಗಮಿಸಿ ಸಭಿಕರಿಗೆ ಕುತೂಹಲ ಮೂಡಿಸಿದರು.
ಈ ಬಗ್ಗೆ ಪತ್ರಿಕರ್ತರ ಪ್ರಶ್ನೆಗೆ ಉತ್ತರಿಸಿದ ಸೊರಕೆ ” ಕಾಪು ತಾಲೂಕಿನ ಮಿನಿ ವಿಧಾನ ಸೌಧದ ಶಿಲಾನ್ಯಾಸದ ಸಂಭ್ರಮದಲ್ಲಿ ಮಾಜಿ ಶಾಸಕ ಸಚಿವನಾಗಿ ಭಾಗವಹಿಸಿದ್ದೇನೆ ಮತ್ತು ನಮ್ಮ ಸರ್ಕಾರದ ಅವಧಿಯಲ್ಲಿ ಜಾಗ ಗೊತ್ತು ಪಡಿಸಿ ಮಿನಿ ವಿಧಾನ ಸೌಧಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಕಾರ್ಯಕ್ರಮದ ಅಧಿಕೃತ ಆಹ್ವಾನ ನೀಡುವುದು ಶಿಷ್ಟಾಚಾರವಲ್ಲ ಆದರೇ ನನ್ನ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಶಿಷ್ಟಾಚಾರ ಬದಿಗೊತ್ತಿ ಭಾಗವಹಿಸಿದ್ದೇನೆ ಎಂದರು.




