ಕಾಪು ಪುರಸಭಾ ಮುಖ್ಯಾಧಿಕಾರಿಯ ಖಡಕ್ ವಾರ್ನಿಂಗ್ ಇಡೀ ಮಾರ್ಕೇಟ್ ಮುಕ್ತ ಮುಕ್ತ: vishwanews24
ಕಾಪು ಪುರಸಭಾ ಮುಖ್ಯಾಧಿಕಾರಿಯ ವಾರ್ನಿಂಗ್ ಇಡೀ ಮಾರ್ಕೇಟ್ ಮುಕ್ತ ಮುಕ್ತ: vishwanews24
ಕಾಪು: ಆದಿತ್ಯವಾರದಂದು ಕಾಪುವಿಗೆ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಭೇಟಿ ನೀಡಿ ಕಾಪು ಮಾರ್ಕೆಟ್ ನ ಅವ್ಯವಸ್ಥೆಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂಬ ಆದೇಶಕ್ಕೆ ಅನುಗುಣವಾಗಿ ನಿನ್ನೆಯ ದಿನ ಕಾಪು ಸಬ್ಇನ್ಸ್ಪೆಕ್ಟರ್ ರಾಘವೇಂದ್ರ ಹಾಗೂ ಕಾಪು ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ್ ನಾವುಡ ಅವರ ಜಂಟಿ ಕಾರ್ಯಾಚರಣೆ ನಡೆಸಿ ಮಾರ್ಕೆಟ್ ಭಾಗದ ಎಲ್ಲಾ ಅಂಗಡಿ ಮುಂಗಟ್ಟುಗಳಲ್ಲಿ ಹಾಗೂ ಮೀನು ಮಾರುಕಟ್ಟೆ ಮತ್ತು ಮಾಂಸದಂಗಡಿಯಲ್ಲಿ ಸಾಮಾಜಿಕ ಅಂತರದ ವ್ಯವಸ್ಥೆ ಮತ್ತು ಪುಟ್ ಪಾತ್ ಮೇಲೆ ಅಳವಡಿಸಿರುವ ಎಲ್ಲಾ ಟೇಬಲ್ ಹಾಗೂ ಸ್ಟ್ಯಾಂಡ್ ಗಳನ್ನು ತೆರವುಗೊಳಿಸದಿದ್ದಲ್ಲಿ ಮಾರ್ಕೆಟ್ ಬಂದ್ ಮಾಡುವುದಾಗಿ ತಾಕೀತು ಮಾಡಿದ್ದರು ಇದಕ್ಕೆ ಅನುಗುಣವಾಗಿ ಸೋಮವಾರ ಇಡೀ ಮಾರ್ಕೆಟ್ ಭಾಗದಲ್ಲಿ ಸಾಮಾಜಿಕ ಅಂತರದ ವ್ಯವಸ್ಥೆ ಹಾಗೂ ಗ್ರಾಹಕರಿಗೆ ಫುಟ್ಪಾತ್ ಮೇಲೆ ಸಂಚರಿಸಲು ಸುಸಜ್ಜಿತ ವ್ಯವಸ್ಥೆ ಮಾಡಿ ಇಡೀ ಮಾರ್ಕೆಟ್ ಮುಕ್ತ ಮುಕ್ತವಾಗಿದೆ.



